ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಯಾಣ ಮಾಡುತ್ತಿದ್ದ ಕಾರಿಗೆ ಅಪಘಾತ

Entertainment Featured-Articles News

ಬಾಲಿವುಡ್ ನಲ್ಲಿ ಫ್ಯಾಷನ್ ಐಕಾನ್, ಫಿಟ್ನೆಸ್ ಫ್ರೀಮ್, ನಟಿ, ಡ್ಯಾನ್ಸರ್ ಆಗಿ ಜನಪ್ರಿಯತೆ ಪಡೆದುಕೊಂಡಿರುವ ಮಲೈಕಾ ಅರೋರಾ, ದೇಹದ ವಯಸ್ಸು ಏರಿದರೂ ಸಹಾ ಇಂದಿಗೂ ಯುವತಿಯರನ್ನು ನಾಚಿಸುವಂತಹ ಫಿಟ್ನೆಸ್ ಹಾಗೂ ಫಿಗರ್ ನಿಂದ ಮಿಂಚುವ ಮಲೈಕಾ ಅರೋರಾಗೆ ಅವರದ್ದೇ ಆದ ದೊಡ್ಡ ಅಭಿಮಾನಿಗಳ ಬಳಗವಿದೆ. ಮಲೈಕಾ ಸಿನಿಮಾ ಮಾತ್ರವೇ ಅಲ್ಲದೇ ಕಿರುತೆರೆಯಲ್ಲಿ ಸಹಾ ಕೆಲವು ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿ ಸಹಾ ಕಾಣಿಸಿಕೊಂಡು ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಸಿನಿಮಾಗಳಲ್ಲಿ ಮಲೈಕಾ ಹೆಜ್ಜೆ ಹಾಕಿದ ಹಾಡುಗಳು ಭರ್ಜರಿ ಸೂಪರ್ ಹಿಟ್ ಆಗಿವೆ.

ಶನಿವಾರ ಈ ನಟಿಯು ಯಾವುದೋ ಒಂದು ಕಾರ್ಯಕ್ರಮದಿಂದ ಬರುವಾಗ ನಟಿಯು ಸಂಚಾರ ಮಾಡುತ್ತಿದ್ದ ಕಾರಿಗೆ ಅ ಪ ಘಾ ತ ವಾಗಿದೆ.‌ ನಟಿಯು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಶನಿವಾರ ನಟಿ ಮಲೈಕಾ ಅರೋರಾ ಅವರು ಪುಣೆಯಲ್ಲಿ ನಡೆದ ಒಂದು ಫ್ಯಾಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ನಟಿಯು ತಮ್ಮ ಕಾರಿನಲ್ಲಿ ಹಿಂತಿರುಗುವ ವೇಳೆಯಲ್ಲಿ ಅವರ ಕಾರಿಗೆ ಅ ಪ ಘಾ ತ ವಾಗಿದೆ. ಇದರಲ್ಲಿ ನಟಿಯ ಕಣ್ಣಿಗೆ ಸ್ವಲ್ಪ ಗಾಯವಾಗಿದೆ ಎಂದು ಹೇಳಲಾಗಿದೆ.

ಅ ಪ ಘಾ ತದಲ್ಲಿ ಗಾಯಗೊಂಡಿದ್ದ ನಟಿಯನ್ನು ಮುಂಬೈನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಲ್ಲಿ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಮಲೈಕಾಗೆ ಹೆಚ್ಚು ತೊಂದರೆಯೇನಾಗಿಲ್ಲ ಎಂದು ಅವರ ಸಹೋದರಿ ಅಮೃತಾ ಅರೋರಾ ಮಾದ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಕಾರ್ಯಕ್ರಮದಿಂದ ಹಿಂತಿರುಗಿ ಬರುವ ವೇಳೆಯಲ್ಲಿ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಈ ಅ ಪ ಘಾ ತ ಸಂಭವಿಸಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *