ಬಾಲಿವುಡ್ ನಟಿ ಜೊತೆ ಡೇಟಿಂಗ್: ಫೋಟೋ ತೆಗೆಯಲು ಹೋದವರ ಮೇಲೆ ಸಿಟ್ಟಾದ ನಟ ಸಿದ್ಧಾರ್ಥ್

Entertainment Featured-Articles Movies News

ದಕ್ಷಿಣ ಸಿನಿಮಾ ರಂಗದಲ್ಲಿ ವಿಶೇಷವಾಗಿ ತೆಲುಗು ಮತ್ತು ಸಿನಿಮಾ ರಂಗಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ನಟ ಸಿದ್ದಾರ್ಥ ಅವರು ವರ್ಷಗಳ ಹಿಂದೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು. ಆದರೆ ಇತ್ತೀಚಿನ ವರ್ಷಗಳ‌ಲ್ಲಿ ಅವರ ಯಾವುದೇ ಸಿನಿಮಾ ಸಹಾ ಸೂಪರ್ ಹಿಟ್ ಆಗಿಲ್ಲ.‌ ನಟ ಸಿದ್ಧಾರ್ಥ್ ಕೂಡಾ ಮೊದಲಿನಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ನಟ ಸಿನಿಮಾಗಳ ಹೊರತಾಗಿ ಆಗಾಗ ನೀಡುವ ಹೇಳಿಕೆಗಳು,‌ ಅದರಿಂದ ಉಂಟಾಗುವ ವಿ ವಾ ದ ಗಳು ಹೀಗೆ ಬೇರೆ ವಿಚಾರಗಳಿಂದಲೇ ಸಾಕಷ್ಟು ಸುದ್ದಿಯಾಗಿದ್ದಾರೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ನಟ ಸಿದ್ಧಾರ್ಥ್ ಅವರು ಇದೀಗ ಬಾಲಿವುಡ್ ನಟಿಯೊಬ್ಬರ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಚಾರವಾಗಿ ಸಖತ್ ಸುದ್ದಿಯಾಗಿದ್ದಾರೆ. ಹೌದು ನಟ ಸಿದ್ಧಾರ್ಥ್ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಹೊಸ ಸುದ್ದಿ ಈಗ ಹರಿದಾಡಿದೆ. ಹೌದು, ನಟ ಸಿದ್ಧಾರ್ಥ್ ತೆಲುಗಿನ ಜನಪ್ರಿಯ ನಟ ಶರ್ವಾನಂದ್ ಜೊತೆಗೆ ಮಹಾಸಮುದ್ರಂ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಯಶಸ್ಸು ಪಡೆಯಲಿಲ್ಲ ಮತ್ತು ಸಿದ್ದಾರ್ಥ ಪಾತ್ರಕ್ಕೆ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ.

ಇದೇ ಸಿನಿಮಾದಲ್ಲಿ ಸಿದ್ಧಾರ್ಥ್ ಗೆ ಜೋಡಿಯಾಗಿ ನಟಿ ಅದಿತಿ ರಾವ್ ಹೈದರಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು,‌ ಅವರ ನಡುವೆ ಡೇಟಿಂಗ್ ನಡೆದಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಅದಕ್ಕೆ ಪುಷ್ಟಿ ನೀಡುವಂತೆ ಈ ಜೋಡಿ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈ ನ‌ ಪ್ರಸಿದ್ಧ ಸೆಲೂನ್ ಒಂದರಿಂದ ನಟಿ ಹೊರಗೆ ಬಂದಾಗ ಸೆಲೆಬ್ರಿಟಿ ಫೋಟೋಗ್ರಾಫರ್ ಗಳು ನಟಿಯ ಫೋಟೋ ತೆಗೆಯಲು ಮುಂದಾಗಿದ್ದಾರೆ. ನಟಿ ಕೂಡಾ‌ ಖುಷಿಯಿಂದ ಪೋಸ್ ನೀಡಿದ್ದಾರೆ.

ಆದರೆ ಈ ವೇಳೆ ಅಲ್ಲೇ ನಟಿಯ ಜೊತೆಗೆ ಕಂಡ ನಟ ಸಿದ್ಧಾರ್ಥ್ ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುಂದಾದಾಗ ನಟ ಸಿಟ್ಟಾಗಿದ್ದಾರೆ. ತನ್ನ ಫೋಟೋ ತೆಗೆಯದಂತೆ ಫೋಟೋಗ್ರಾಫರ್ ಗಳ ಮೇಲೆ ಕೂಗಾಡಿದ್ದಾರೆ. ಆದರೆ ಅನಂತರ ಕೂಲ್ ಆದ ಅವರು ತನಗೆ ಹೀಗೆ ಫೋಟೋಗಳಿಗೆ ಪೋಸ್ ಕೊಡುವುದು ಇಷ್ಟ ಆಗೋದಿಲ್ಲ. ಅದಕ್ಕೆ ಹಾಗೆ ಹೇಳಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಸಿದ್ಧಾರ್ಥ್ ಅದಿತಿ ರಾವ್ ಹೈದರಿ ಜೊತೆ ಡೇಟಿಂಗ್ ಮಾಡುತ್ತಿರುವುದು ಪಕ್ಕಾ ಅಂತಿದ್ದಾರೆ‌‌ ನೆಟ್ಟಿಗರು.

Leave a Reply

Your email address will not be published.