ಬಾಲಿವುಡ್ ಗೆ ಮತ್ತೊಬ್ಬ ಸ್ಟಾರ್ ಪುತ್ರನ ಪರಿಚಯಿಸಲು ಸಜ್ಜಾದ ಕರಣ್ ಜೋಹರ್: ಯಾರೀ ಸ್ಟಾರ್ ಕಿಡ್??
ಬಾಲಿವುಡ್ ನ ಜನಪ್ರಿಯ ಹಾಗೂ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಪಕ, ನಿರ್ದೇಶಕ, ನಿರೂಪಕ ಹಾಗೂ ಕಿರುತೆರೆಯ ಹಲವು ರಿಯಾಲಿಟಿ ಶೋ ಗಳ ಜಡ್ಜ್ ಆಗಿಯೂ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ ಕರಣ್ ಜೋಹರ್ ಎಂದರೆ ಬಿ ಟೌನ್ ನಲ್ಲಿ ಒಂದು ದೊಡ್ಡ ಹೆಸರು ಹಾಗೂ ಪ್ರಭಾವೀ ಹೆಸರು ಕೂಡಾ ಹೌದು. ಇನ್ನು ಕರಣ್ ಜೋಹರ್ ತಮ್ಮ ಸಿನಿಮಾಗಳ ಮೂಲಕ ಬಾಲಿವುಡ್ ನ ಸ್ಟಾರ್ ನಟರ ಮಕ್ಕಳನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡುವುದಕ್ಕೂ ಸಹಾ ಪ್ರಖ್ಯಾತಿ ಹಾಗೂ ಕುಖ್ಯಾತಿಯನ್ನು ಪಡೆದಿದ್ದಾರೆ. ಕರಣ್ ಹೊಸ ಪ್ರತಿಭೆಗಳಿಗೆ, ಸಿನಿಮಾ ಹಿನ್ನೆಲೆ ಇಲ್ಲದವರಿಗೆ ಅವಕಾಶ ನೀಡುವುದಿಲ್ಲ ಎನ್ನುವ ಆ ರೋ ಪ ಅವರ ಮೇಲಿದೆ.
ಸ್ಟಾರ್ ಕಿಡ್ ಗಳಿಗೆ ಬಾಲಿವುಡ್ ಗೆ ಎಂಟ್ರಿ ನೀಡಲು ಭರ್ಜರಿ ರೆಡ್ ಕಾರ್ಪೆಟ್ ಹಾಸುವ ಕರಣ್ ಜೋಹರ್ ತನ್ನ ಬಗ್ಗೆ ಈ ವಿಚಾರವಾಗಿ ಎಷ್ಟೇ ಟೀಕೆ ಟಿಪ್ಪಣಿಗಳು ಕೇಳಿ ಬಂದರೂ ಸಹಾ ಅದರ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ಅದರ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ. ಈಗ ಕರಣ್ ಜೋಹರ್ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟನ ಪುತ್ರನನ್ನು ಬಾಲಿವುಡ್ ಗೆ ಪರಿಚಯಿಸಲು, ಹೊಸ ಸಿನಿಮಾವೊಂದರ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ. ಹೌದು, ಕರಣ್ ಹೊಸ ಸಿನಿಮಾಕ್ಕೆ ಮತ್ತೊಬ್ಬ ಸ್ಟಾರ್ ಕಿಡ್ ನಾಯಕ ಆಗಲಿದ್ದಾನೆ.
ಹಾಗಾದ್ರೆ ಯಾರು ಆ ಸ್ಟಾರ್ ಕಿಡ್ ಅಂತೀರಾ? ಇಲ್ಲಿದೆ ಉತ್ತರ. ಮಲೆಯಾಳಂ ನ ಹಿರಿಯ ಸ್ಟಾರ್ ನಟ ಮೋಹನ್ ಲಾಲ್ ಅವರ ಪುತ್ರ ಪ್ರಣವ್ ಮೋಹನ್ ಲಾಲ್ ನಾಯಕನಾಗಿ ನಟಿಸಿ, ಸೂಪರ್ ಹಿಟ್ ಆದ ಸಿನಿಮಾ ಹೃದಯಂ ಅನ್ನು ಇದೀಗ ಹಿಂದಿಯಲ್ಲಿ ರಿಮೇಕ್ ಮಾಡಲು ಕರಣ್ ಜೋಹರ್ ಸಜ್ಜಾಗಿದ್ದಾರೆ. ಇದೇ ಸಿನಿಮಾಕ್ಕೆ ಬಾಲಿವುಡ್ ನ ಸ್ಟಾರ್ ನಟ ಸೈಫ್ ಅಲಿ ಖಾನ್ ಹಾಗೂ ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಅನ್ನು ನಾಯಕನಾಗಿ ಪರಿಚಯಿಸಲು ಸಿದ್ಧವಾಗಿದ್ದಾರೆ.
ಸೈಫ್ ಅಲಿ ಖಾನ್ ಮಗಳು ಸಾರಾ ರನ್ನು ಸಹಾ ಕರಣ್ ಜೋಹರ್ ತಮ್ಮದೇ ಸಿನಿಮಾ ಮೂಲಕ ಬಾಲಿವುಡ್ ಗೆ ಪರಿಚಯಿಸಲು ಬಯಸಿದ್ದರು. ಆದರೆ ಸಿನಿಮಾ ತಡವಾಯಿತು, ಸಾರಾ ಅಲಿ ಖಾನ್ ಕೇದಾರ್ ನಾಥ್ ಸಿನಿಮಾ ಮೂಲಕ ಬಾಲಿವುಡ್ ಇಂಡಸ್ಟ್ರಿ ಗೆ ಎಂಟ್ರಿ ನೀಡಿದ್ದರು. ಆದರೆ ಈಗ ಸೈಫ್ ಪುತ್ರನನ್ನು ಮಾತ್ರ ತಾವೇ ಪರಿಚಯಿಸಲು ಕರಣ್ ಜೋಹರ್ ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.