ಬಾಲಿವುಡ್ ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ?? ಯಾವ ಸ್ಟಾರ್ ಗೆ ನಾಯಕಿಯಾಗಲಿದ್ದಾರೆ ಸಾರಾ??

Entertainment Featured-Articles News

ಸೆಲೆಬ್ರಿಟಿಗಳು ಅದರಲ್ಲೂ ವಿಶೇಷವಾಗಿ ಸಿನಿಮಾ ಸೆಲೆಬ್ರಿಟಿಗಳ ಮಕ್ಕಳು ಸಿನಿಮಾ ರಂಗಕ್ಕೆ ಅಡಿಯಿಡಬೇಕು ಎಂದರೆ ಅದು ಖಂಡಿತ ಕಷ್ಟವೇನಿಲ್ಲ. ಸ್ಟಾರ್ ನಟರ ಮಕ್ಕಳಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತವನ್ನು ನೀಡಲಾಗುತ್ತದೆ. ಇನ್ನು ಸಿನಿಮಾ ರಂಗದ ಹೊರಗೆ ಕ್ರೀಡೆ, ರಾಜಕೀಯದಲ್ಲೂ ಕೂಡಾ ದೊಡ್ಡ ಸಾಧನೆಯನ್ನು ಮಾಡಿರುವ ಸೆಲೆಬ್ರಿಟಿಗಳ ಮಕ್ಕಳು ಸಹಾ ಸಿನಿಮಾಕ್ಕೆ ಆಗಾಗ ಎಂಟ್ರಿ ನೀಡುವುದು ನಡೆಯುತ್ತಲೇ ಇರುತ್ತದೆ. ಅವರಿಗೆ ಇರುವ ಜನಪ್ರಿಯತೆ ಅವರಿಗೆ ಸಿನಿಮಾ ರಂಗಕ್ಕೆ ಎಂಟ್ರಿ ಪಡೆಯಲು ಒಂದು ಸುಲಭ ಮಾರ್ಗವಾಗಿರುತ್ತದೆ.

ಈಗ ಈ ಸಾಲಿಗೆ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ ಕ್ರಿಕೆಟ್ ಜಗತ್ತಿನ ದಂತಕಥೆ ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಬಾಲಿವುಡ್ ಅಂಗಳ ಕ್ಕೆ ಅಡಿಯಿಡಲಿದ್ದಾರೆ ಎನ್ನುವ ಸುದ್ದಿಯೊಂದು ಎಲ್ಲರ ಕುತೂಹಲವನ್ನು ಕೆರಳಿಸುತ್ತಿದೆ. ಸಾರಾ ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಸ್ಟಾರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಸಾರಾ ಅವರನ್ನು ಹಿಂಬಾಲಿಸುವ ಮಂದಿ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ‌.

ಒಬ್ಬ ನಟಿಯಷ್ಟೇ ಹಿಂಬಾಲಕರು, ಜನಪ್ರಿಯತೆಯನ್ನು ಸಾರಾ ಸೋಶಿಯಲ್ ಮೀಡಿಯಾಗಳಲ್ಲಿ ಪಡೆದುಕೊಂಡಿದ್ದಾರೆ. ಸಾರಾ ಶೇರ್ ಮಾಡುವ ಅಂದವಾದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ಸಾರಾ ತೆಂಡೂಲ್ಕರ್ ಕಳೆದ ವರ್ಷವಷ್ಟೇ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟಿದ್ದು, ಅವರು ಮಾಡೆಲಿಂಗ್ ಮಾಡಿದ ಫೋಟೋ ಶೂಟ್ ನ ಫೋಟೋಗಳು ಸಹಾ ಅಭಿಮಾನಿಗಳ ಗಮನವನ್ನು ಸೆಳೆದಿತ್ತು.

ಬಾಲಿವುಡ್ ಒಂದು ಒಂದು ದೊಡ್ಡ ಪ್ರಾಜೆಕ್ಟ್ ಮೂಲಕವೇ ಸಾರಾ ಬಾಲಿವುಡ್ ಗೆ ಎಂಟ್ರಿ ನೀಡಲಿದ್ದಾರೆ ಎನ್ನುವ ವಿಷಯವೊಂದು ಬಿ ಟೌನ್ ನಲ್ಲಿ ಸದ್ದು ಮಾಡಿದೆ. ಯಾವ ಸ್ಟಾರ್ ಜೊತೆ ಸಾರಾ ಸಿನಿಮಾಕ್ಕೆ ಎಂಟ್ರಿ ನೀಡುವರು ಎನ್ನುವ ಕುತೂಹಲ ಕೂಡಾ ಮೂಡಿಸಿದೆ. ಬಾಲಿವುಡ್ ನ ಸ್ಟಾರ್ ಕಿಡ್ ಗಳ ಸಿನಿಮಾ ಎಂಟ್ರಿ ಸಾಮಾನ್ಯ ಎನಿಸಿರುವಾಗ ಲೆಜೆಂಡರಿ ಕ್ರೀಡಾಪಟುವೊಬ್ಬರ ಮಗಳು ಸಿನಿಮಾ ರಂಗಕ್ಕೆ ಎಂಟ್ರಿ ನೀಡುವ ವಿಚಾರ ಸಹಜವಾಗಿಯೇ ಎಲ್ಲರ ಆಸಕ್ತಿಯನ್ನು ಕೆರಳಿಸಿದೆ.

Leave a Reply

Your email address will not be published. Required fields are marked *