ಬಾಲಿವುಡ್‌ ಗಾಗಿ ತೆಲುಗು ಇಂಡಸ್ಟ್ರಿ ಬಿಡುವ ಬಗ್ಗೆ ಮಾತಾಡಿದ ರಮ್ಯಕೃಷ್ಣ: ನಟಿ ಹೀಗೆಲ್ಲಾ ಹೇಳಿದ್ದು ಖಂಡಿತ ಶಾಕಿಂಗ್!!

Entertainment Featured-Articles Movies News

ನಟಿ ರಮ್ಯಕೃಷ್ಣ ದಶಕಗಳ ಕಾಲದಿಂದ ದಕ್ಷಿಣ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಹಿರಿಯ ನಟಿ ಹಾಗೂ ಸ್ಟಾರ್ ನಟಿ ಸಹಾ ಹೌದು. ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಈ ನಟಿಯು ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ ಮೆರೆದವರು. ಮೊದಲು ನಾಯಕಿಯಾಗಿ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಈ ನಟಿ ವೈವಿದ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈಗಲೂ ಸಹಾ ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ರಂಜಿಸುತ್ತಿರುವ ನಟಿ ರಮ್ಯ ಕೃಷ್ಣ ಅವರು ಇಂದಿಗೂ ಹೊಸ ಸಿನಿಮಾಗಳ ತಮ್ಮ ಪಾತ್ರಗಳಿಂದ ಸಖತ್ ಸುದ್ದಿಯಾಗುತ್ತಾರೆ. ದೇವಿಯ ಪಾತ್ರಗಳು ಎಂದರೆ ಅದಕ್ಕೆ ರಮ್ಯಕೃಷ್ಣ ಅವರು ಅನೇಕ ನಿರ್ದೇಶಕ ಮೊದಲ ಆಯ್ಕೆ ಆಗಿದ್ದಾರೆ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ಅವರ ವರ್ಚಸ್ಸನ್ನು ಇನ್ನೂ ಹೆಚ್ಚಿಸಿದೆ.

ಹೀಗೆ ದಕ್ಷಿಣ ಸಿನಿಮಾ ರಂಗದಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಸಿನಿಮಾದಲ್ಲಿ ತನಗಾಗಿ ಒಂದು ವಿಶೇಷ ವರ್ಚಸ್ಸನ್ನು ಪಡೆದಿರುವ ಈ ನಟಿಯು ಬಾಲಿವುಡ್ ನಲ್ಲಿ ಸಹಾ ಒಂದಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಹೌದು ನಟಿ ರಮ್ಯಕೃಷ್ಣ ಅವರು ಬಾಲಿವುಡ್ ನಲ್ಲಿ, ದಯಾವಾನ್, ಪರಂಪರ, ಖಲ್ ನಾಯಕ್, ಚಾಹತ್, ಬನಾರಸಿ ಬಾಬು, ಬಡೇ ಮಿಯಾ ಚೊಟೇ ಮಿಯಾ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ರಮ್ಯಕೃಷ್ಣ ಅವರ ಅಭಿನಯದ ಯಾವ ಸಿನಿಮಾಗಳು ಸಹಾ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡದೇ ನಟಿಗೆ ನಿರಾಶೆಯನ್ನೇ ಉಳಿಸಿದೆ.

ಇತ್ತೀಚಿಗೆ ಬಿಡುಗಡೆಯಾದ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದಲ್ಲಿ ನಾಯಕನ ತಾಯಿ ಪಾತ್ರದಲ್ಲಿ ನಟಿ ರಮ್ಯಕೃಷ್ಣ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕುರಿತಾದ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ವೇಳೆ ನಟಿ ರಮ್ಯಕೃಷ್ಣ ಅವರು, ಬಾಲಿವುಡ್ ನಲ್ಲಿ ಅವಕಾಶಗಳು ಬಂದಿದ್ದರೆ ತೆಲುಗು ಸಿನಿಮಾಗಳನ್ನು ಬಿಡುತ್ತಿದ್ರಾ ಎನ್ನುವ ಪ್ರಶ್ನೆಯೊಂದು ಎದುರಾದಾಗ ನಟಿ ರಮ್ಯಕೃಷ್ಣ ಅವರು ಅದಕ್ಕೆ ಉತ್ತರ ನೀಡಿದ್ದಾರೆ. ನಟಿ ತಾನು ತೆಲುಗು ಚಿತ್ರರಂಗವನ್ನು ಬಿಡುವುದು ಅಸಾಧ್ಯವಾದ ಮಾತು ಎಂದು ಹೇಳಿದ್ದಾರೆ.

ನಟಿ ರಮ್ಯಕೃಷ್ಣ ಅವರು ಪ್ರತಿಕ್ರಿಯೆ ನೀಡುತ್ತಾ, ನಾನು ನಟಿಸಿದ ಯಾವುದೇ ಬಾಲಿವುಡ್ ಸಿನಿಮಾ ಸದ್ದು ಮಾಡಲಿಲ್ಲ. ಆದರೆ ನಾನು ತೆಲುಗು ಇಂಡಸ್ಟ್ರಿಯ ಸ್ಟಾರ್ ನಟಿಯಾಗಿದ್ದೆ. ಆ ಚಿತ್ರರಂಗ ಬಿಟ್ಟು, ಬಾಲಿವುಡ್ ನಲ್ಲಿ ಹೋರಾಟ ಮಾಡುವ ಧೈರ್ಯ ನನಗೆ ಇರಲಿಲ್ಲ.‌ ಯಾವುದೇ ಇಂಡಸ್ಟ್ರಿಯಲ್ಲಿ ಇರಲು ಯಶಸ್ವಿ ಸಿನಿಮಾ ಬೇಕು. ಆದರೆ ದುರಾದೃಷ್ಟವಶಾತ್ ಬಾಲಿವುಡ್ ನಲ್ಲಿ ಅದು ಸಾಧ್ಯವಾಗಲಿಲ್ಲ. ನನಗೆ ತೆಲುಗು ಸಿನಿಮಾ ಇಂಡಸ್ಟ್ರಿ ಬಹಳ ಆರಾಮದಾಯಕವಾಗಿದೆ ಆದ್ದರಿಂದಲೇ ನಾನು ತೆಲುಗು ಸಿನಿಮಾ ರಂಗ ತೊರೆಯುವ ಆಲೋಚನೆ ಮಾಡಲೇ ಇಲ್ಲ ಎಂದಿದ್ದಾರೆ.

Leave a Reply

Your email address will not be published.