ಬಾಲಿವುಡ್ ಕಲಾವಿದರಲ್ಲಿ ಆ ಗುಣ ಕಾಣಲೇ ಇಲ್ಲ: ಬಾಲಿವುಡ್ ನಟರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಕರಣ್ ಜೋಹರ್

0 2

ಕರಣ್ ಜೋಹರ್ ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅದರಲ್ಲೂ ಸ್ಟಾರ್ ಕಿಡ್ ಗಳಿಗೆ ಮಣೆ ಹಾಕುವ ಕರಣ್ ಜೋಹರ್ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದ ಪ್ರತಿಭಾವಂತರಿಗೆ ಅವಕಾಶ ಸಹಾ ನೀಡುವುದಿಲ್ಲ ಎನ್ನುವ ಆ ರೋ ಪವನ್ನು ಅವರ ಮೇಲೆ ಹಲವು ಸಲ ಮಾಡಲಾಗಿದೆ. ಆದರೆ ಕರಣ್ ಮಾತ್ರ ಇಂತಹ ವಿಚಾರಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೇ ಕರಣ್ ಮೇಲೆ ಮಾಡುವ ಆ ರೋ ಪ ಸಹಾ ಸುಳ್ಳು ಖಂಡಿತ ಅಲ್ಲ. ಏಕೆಂದರೆ ಕರಣ್ ನಿರ್ಮಾಣ ಮಾಡಿರುವ ಸಿನಿಮಾಗಳ ಕಡೆ ಒಂದು ನೋಟ ಬೀರಿದರೆ ಅದರಲ್ಲಿ ಅವರು ಪ್ರಾಧಾನ್ಯತೆ ನೀಡಿರುವುದು ಸ್ಟಾರ್ ಕಿಡ್ ಗಳಿಗೆ ಎನ್ನುವುದು ಬಹಳ ಸ್ಪಷ್ಟವಾಗಿ ನಮಗೆ ತಿಳಿಯುತ್ತದೆ.

ಇದೀಗ ಇವೆಲ್ಲವುಗಳ ನಡುವೆ ಕರಣ್ ಜೋಹರ್ ನೀಡಿರುವ ಹೇಳಿಕೆಯೊಂದು ಈಗ ಎಲ್ಲರ ಗಮನವನ್ನು ಸೆಳೆದಿದೆ. ಅನೆಜಾನ್ ಮಿನಿ ಟಿ ವಿ ಯಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ಕೇಸ್ ತೋ ಬಂತಾ ಹೈ ಶೋ ನಲ್ಲಿ ಕರಣ್ ಜೋಹರ್ ಅತಿಥಿಯಾಗಿ ಭಾಗವಹಿಸಿದ್ದರು. ಈ ಶೋ ನಲ್ಲಿ ನಟ ರಿತೇಶ್ ದೇಶ್ ಮುಖ್ ಕೇಳಿದ ಪ್ರಶ್ನೆಯೊಂದಕ್ಕೆ ಕರಣ್ ಜೋಹರ್ ಬಹಳ ನೇರವಾಗಿ ಉತ್ತರವನ್ನು ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದ್ದಾರೆ. ಹೌದು, ನಟ ರಿತೇಶ್, ನೀವು ಯಾವುದಾದರೂ ಕಲಾವಿದರನ್ನು ಆಯ್ಕೆ ಮಾಡಿದಾಗ ಲುಕ್​ಗೆ ಮಾತ್ರ ಆದ್ಯತೆ ನೀಡುತ್ತೀರಾ?’ ಎಂದು ಕರಣ್​​ಗೆ ಪ್ರಶ್ನೆ ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರ ನೀಡಿದ ಕರಣ್ ಜೋಹರ್,”ನಾನು ಎಂಟರ್ಟೈನ್ಮೆಂಟ್ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಟ್ಯಾಲೆಂಟ್ ಗಾಗಿ ಸಹಾ ಹುಡುಕಾಟ ನಡೆಸುತ್ತೇನೆ. ಆದ್ರೆ ಅದು ಇದುವರೆಗೆ ನನಗೆ ಸಿಕ್ಕಿಲ್ಲ” ಎಂದು ಹೇಳಿದ್ದಾರೆ.‌ ಈ ಒಂದು ಮಾತಿನ ಮೂಲಕ ಕರಣ್ ಜೋಹರ್ ಬಾಲಿವುಡ್ ನ ಕಲಾವಿದರಲ್ಲಿ ತನಗೆ ಪ್ರತಿಭೆ ಎನ್ನುವುದು ಕಂಡಿಲ್ಲ ಎನ್ನುವ ಮಾತನ್ನು ಹೇಳಿರುವುದು ಈಗ ಅಚ್ಚರಿಯನ್ನು ಮೂಡಿಸಿದೆ. ಕೋರ್ಟ್ ಮಾದರಿಯಲ್ಲಿ ನಡೆಯುವ ಕೇಸ್ ತೋ ಬಂತಾ ಹೈ ಶೋ ನಲ್ಲಿ ರಿತೇಶ್ ಡಿಫೆನ್ಸ್ ಲಾಯರ್ ಆಗಿ, ವರುಣ್ ಶರ್ಮಾ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾಣಿಸಿಕೊಂಡಿದ್ದಾರೆ.

Leave A Reply

Your email address will not be published.