ಬಾಲಿವುಡ್ ಎಂದ ಮಾತ್ರಕ್ಕೆ ನಾನು ಅಂತ ಪಾತ್ರಗಳನ್ನು ಮಾಡೋಕೆ ಚಾನ್ಸೇ ಇಲ್ಲ: ಅಲ್ಲು ಅರ್ಜುನ್

Written by Soma Shekar

Published on:

---Join Our Channel---

ದಕ್ಷಿಣ ಭಾರತದ ಸ್ಟಾರ್ ನಟರಲ್ಲಿ ಅಲ್ಲು ಅರ್ಜುನ್ ಕೂಡಾ ಒಬ್ಬರಾಗಿ ಬಹಳ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಅವರ ಸ್ಟಾರ್ ಡಂ ಹೇಗಿದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ. ಇಂತಹ ಸ್ಟಾರ್ ನಟನ ಕೆಲವು ಸಿನಿಮಾಗಳು ಹಿಂದಿಗೆ ಡಬ್ ಆಗಿವೆ. ಆದರೆ ಈಗ ಅವರ ನಟನೆಯ ಪುಷ್ಪ ಸಿನಿಮಾ ಬಿಡುಗಡೆಯ ನಂತರ ಬಾಲಿವುಡ್ ನಲ್ಲಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುವ ಮೂಲಕ ಅಲ್ಲು ಕೂಡಾ ಸಕ್ಸಸ್ ಪಡೆದು, ಕೆಲವು ಬಾಲಿವುಡ್ ಸಿನಿಮಾಗಳನ್ನು ಕೂಡಾ ಕಲೆಕ್ಷನ್ ನಲ್ಲಿ ಹಿಂದೆ ಹಾಕಿರುವುದು ವಿಶೇಷವಾಗಿದೆ.

ಟಾಲಿವುಡ್ ನಲ್ಲಿ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಅವರ ಸಿನಿಮಾದಲ್ಲಿ ದಕ್ಷಿಣದ ಬೇರೆ ಭಾಷೆಗಳ ಸ್ಟಾರ್ ನಟರು ಪ್ರಮುಖ ಪಾತ್ರಗಳು ಅಥವಾ ವಿಲನ್ ಪಾತ್ರಗಳಲ್ಲಿ ನಟಿಸುವುದುಂಟು. ಆದರೆ ತಾನು ಮಾತ್ರ ಅಂತಹ ಪಾತ್ರಗಳನ್ನು ಮಾಡುವುದಿಲ್ಲ ಎನ್ನುವ ಮಾತೊಂದನ್ನು ಅಲ್ಲು ಅರ್ಜುನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲು ಅರ್ಜುನ್ ಮಾತನಾಡುತ್ತಾ, ತನಗೆ ಬಾಲಿವುಡ್ ನಿಂದ ಆಫರ್ ಒಂದು ಬಂದಿದೆ. ಆದರೆ ಅದು ಸ್ಪಷ್ಟವಾಗಿ ಮತ್ತು ಎಕ್ಸೈಟಿಂಗ್ ಎನಿಸಿಲ್ಲ. ಶೀಘ್ರದಲ್ಲೇ ತಾನು ಬಾಲಿವುಡ್ ಸಿನಿಮಾ ಮಾಡಬಹುದು.

ಬೇರೆ ಭಾಷೆಯ ಸಿನಿಮಾ‌ ಇಂಡಸ್ಟ್ರಿಗೆ ಹೋಗುವ ರಿಸ್ಕ್ ತೆಗೆದುಕೊಳ್ಳಬೇಕು ಎಂದು ಹೇಳಿರುವ ಅಲ್ಲು ಅರ್ಜುನ್ ಅವರು ತಾನು ಸಿನಿಮಾದಲ್ಲಿ ಎರಡನೇ ಹೀರೋ ಆಗಿ ನಟಿಸುವುದಿಲ್ಲ ಎಂದಿದ್ದಾರೆ. ಹಿಂದಿ ಸಿನಿಮಾ ಎಂದ ಮಾತ್ರಕ್ಕೆ ಸೆಕೆಂಡ್ ಹೀರೋ ಪಾತ್ರ ಮಾಡುವುದಿಲ್ಲ ಎನ್ನುವ ಸ್ಪಷ್ಟನೆ ಯನ್ನು ಅಲ್ಲು ಅರ್ಜುನ್ ಮಾಡಿದ್ದಾರೆ. ನಮ್ಮ ಸಿನಿಮಾಗಳಲ್ಲಿ ನಾವು ಹೀರೋ ಆಗಿದ್ದಾಗ ನಮ್ಮ‌ ಬಳಿ ಬರುವವರು ನಮಗೆ ಹೀರೋ ಪಾತ್ರವನ್ನೇ ಆಫರ್ ಮಾಡುತ್ತಾರೆ. ದೊಡ್ಡ ಸ್ಟಾರ್ ನಟನ ಬಳಿ ಸೆಕೆಂಡ್ ಹೀರೊ ಮಾಡಿ ಎಂದು ಯಾರೂ ಕೇಳೋದಿಲ್ಲ ಎಂದಿದ್ದಾರೆ.

Leave a Comment