ಬಾಲಿವುಡ್ ಅನ್ನೋದು ಅಪ್ಪನಿದ್ದಂತೆ: ಮಹೇಶ್ ಬಾಬು ಮಾತಿಗೆ ಸುನೀಲ್ ಶೆಟ್ಟಿ ತಿರುಗೇಟು

Entertainment Featured-Articles Movies News

ಮೊನ್ನೆಯಷ್ಟೇ ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಬಾಲಿವುಡ್ ಬಗ್ಗೆ ನೀಡಿದ ಒಂದು ಹೇಳಿಕೆ ದೊಡ್ಡ ವಿ ವಾ ದವನ್ನೇ ಹುಟ್ಟು ಹಾಕಿದೆ. ನಟ ಮಹೇಶ್ ಬಾಬು ಅವರು ಬಾಲಿವುಡ್ ಗೆ ನನ್ನನ್ನು ಭರಿಸುವುದು ಅಸಾಧ್ಯ, ನಾನು ಅದಕ್ಕಾಗಿ ನನ್ನ ಸಮಯ ವ್ಯರ್ಥ ಮಾಡುವುದಿಲ್ಲ ಎನ್ನುವ ಮಾತನ್ನು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹೇಳಿದ ನಂತರ, ಈ ಮಾತು ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತು. ಈ ವಿಚಾರವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಮಹೇಶ್ ಬಾಬು ಅವರು ಹೇಳಿದ್ದು ಸರಿಯಾಗಿದೆ ಎಂದರೆ ಇನ್ನೂ ಕೆಲವರು, ಅವರು ಹೇಳಿದ್ದು ತಪ್ಪು ಎಂದೂ ಹೇಳುತ್ತಿದ್ದಾರೆ.

ಮಹೇಶ್ ಬಾಬು ಅವರು ತಮ್ಮ ಹೇಳಿಕೆಯನ್ನು ನೀಡಿದ ನಂತರ ಈ ವಿಚಾರವಾಗಿ ಸ್ಪಷ್ಟನೆಯನ್ನು ಸಹಾ ನೀಡಿದ್ದರು. ಆದರೆ ನಟನ ಹೇಳಿಕೆಯ ನಂತರ ಬಾಲಿವುಡ್ ಮಂದಿ ಸಹಾ ಇದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ಹೇಳಿಕೆಗಳ ಸಮರಕ್ಕೆ ಒಬ್ಬರಾದ ನಂತರ ಮತ್ತೊಬ್ಬರು ಧುಮುಕುತ್ತಿದ್ದಾರೆ. ಈಗ ಈ ಸಾಲಿಗೆ ಬಾಲಿವುಡ್ ನ ಹಿರಿಯ ನಟ ಸುನೀಲ್ ಶೆಟ್ಟಿ ಕೂಡಾ ಸೇರ್ಪಡೆಯಾಗಿದ್ದು, ಮಹೇಶ್ ಬಾಬು ನೀಡಿದ ಹೇಳಿಕೆಗೆ ತಿರುಗೇಟು ನೀಡುವ ಕೆಲಸವನ್ನು ಮಾಡಿದ್ದಾರೆ.

ನಟ ಸುನೀಲ್ ಶೆಟ್ಟಿ ತಮ್ಮ ಪ್ರತಿಕ್ರಿಯೆಯಲ್ಲಿ, “ಅಪ್ಪ ಯಾವಾಗಲೂ ಅಪ್ಪನೇ ಆಗಿರ್ತಾನೆ. ಬಾಲಿವುಡ್ ಯಾವಾಗಲೂ ಸಹಾ ಬಾಲಿವುಡ್ ಆಗೇ ಇರುತ್ತದೆ. ಭಾರತವನ್ನು ಗುರುತಿಸುವುದಾದರೆ, ಬಾಲಿವುಡ್ ಹೀರೋಗಳನ್ನು ಸಹಾ ಗುರುತಿಸುತ್ತಾರೆ” ಎನ್ನುವ ಮಾತನ್ನು ಹೇಳಿದ್ದಾರೆ. ನಾವು ಐಡಿಯಾಸ್ ಗಳನ್ನು ಮರೆತಿದ್ದೇವೆ. ನಾವು ಕಂಟೆಂಟ್ ಮೇಲೆ ಕೆಲಸವನ್ನು ಮಾಡಬೇಕಿದೆ. ಸಿನಿಮಾ, ಓಟಿಟಿ ಯಾವುದೇ ಆಗಿರಲಿ ಅಪ್ಪ, ಅಪ್ಪನೇ ಆಗಿರ್ತಾನೆ. ಕುಟುಂಬದ ಸದಸ್ಯರು ಸದಸ್ಯರೇ ಆಗಿರುತ್ತಾರೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಮಹೇಶ್ ಬಾಬು ಅವರು ಬಾಲಿವುಡ್ ನನ್ನನ್ನು ಅಫೋರ್ಡ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾನು ಆ ಇಂಡಸ್ಟ್ರಿಯಲ್ಲಿ ನನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದರು. ಯಾವಾಗ ತನ್ನ ಹೇಳಿಕೆ ದೊಡ್ಡ ಚರ್ಚೆ, ವಿ ವಾ ದಕ್ಕೆ ಕಾರಣವಾಯಿತೋ, ಕೂಡಲೇ ನಟ ಮಹೇಶ್ ಬಾಬು ಅವರು, ಸೌತ್ ಸಿನಿಮಾಗಳಲ್ಲಿ ಮಾಡುತ್ತಿರುವ ನನಗೆ ಅಲ್ಲೇ ಕಂಫೋರ್ಟಬೆಲ್ ಆಗಿದೆ. ಅಲ್ಲದೇ ನಾನು ಎಲ್ಲಾ ಭಾಷೆಗಳನ್ನು ಸಹಾ ಗೌರವಿಸುತ್ತೇನೆ ಎನ್ನುವ ಮಾತನ್ನು ಹೇಳಿದ್ದಾರೆ.

Leave a Reply

Your email address will not be published. Required fields are marked *