ಬಾಲಿವುಡ್‌ ಮಂದಿಗೆ ಬುದ್ಧಿ ಬರೋದೇ ಇಲ್ವ: ಶೂ ಧರಿಸಿ ದೇಗುಲ ಪ್ರವೇಶ ಮಾಡಿದ ಹೀರೋ!! ಬ್ರಹ್ಮಾಸ್ತ್ರ ತಂಡದ ಎಡವಟ್ಟು

Entertainment Featured-Articles Movies News

ಬಾಲಿವುಡ್ ಸಿನಿಮಾ ನಿರ್ದೇಶಕ ಅಯಾನ್ ಮುಖರ್ಜಿ ನಿರ್ದೇಶನದ ಹೊಸ ಸಿನಿಮಾ ಬ್ರಹ್ಮಾಸ್ತ್ರ ಹಲವು ವಿಷಯ ಗಳಿಂದಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ರಿಯಲ್ ಲೈಫ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿಯಾಗಿ ಕಾಣಿಸಿಕೊಂಡಿದ್ದು, ಅವರ ಮದುವೆಯ ನಂತರ ಜೋಡಿಯಾಗಿ ಕಾಣಿಸಿಕೊಂಡಿರುವ ಮೊದಲ ಸಿನಿಮಾ ಇದಾಗಿದೆ. ಮೊನ್ನೆಯಷ್ಟೇ ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ. ಇನ್ನು ಟ್ರೈಲರ್ ಬಿಡುಗಡೆಯ ನಂತರ ಅದರ ಬಗ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಕೆಲವರಿಗೆ ಟ್ರೈಲರ್ ಇಷ್ಟವಾದರೆ ಇನ್ನೂ ಕೆಲವರಿಗೆ ಅದು ಇಷ್ಟವಾಗಿಲ್ಲ.

ಅಲ್ಲದೇ ನೆಟ್ಟಿಗರ ಒಂದು ವರ್ಗವು ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿರುವುದು ಸಹಾ ವಾಸ್ತವದ ವಿಷಯವಾಗಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಶಿವನ ಅಂಶವಾಗಿ ಪಾತ್ರವೊಂದನ್ನು ನಿಭಾಯಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಕೆಲವು ದೃಶ್ಯಗಳಲ್ಲಿ ಅವರು ತ್ರಿಶೂಲವನ್ನು ಸಹಾ ಹಿಡಿದು ನಿಂತಿದ್ದಾರೆ. ಆದರೆ ಇವೆಲ್ಲವುಗಳ ನಡುವೆಯೇ ಅಲ್ಲೊಂದು ಎಡವಟ್ಟು ಕೂಡಾ ನಡೆದಿದೆ. ಈ ಎಡವಟ್ಟು ನೆಟ್ಟಿಗರ ಅಸಮಾಧಾನಕ್ಕೆ ಹಾಗೂ ಸಿಟ್ಟಿಗೆ ಕಾರಣವಾಗಿದೆ‌.

ಹೌದು ಸಿನಿಮಾ ಟ್ರೈಲರ್ ನೋಡುವಾಗ ಅನೇಕರು ಈ ಎಡವಟ್ಟು ಗಮನಿಸಿದ್ದಾರೆ. ಸಿನಿಮಾದ ಒಂದು ದೃಶ್ಯದಲ್ಲಿ ನಟ ರಣಬೀರ್ ಕಪೂರ್ ಅವರು ಶೂ ಧರಿಸಿ ದೇವಾಲಯದ ಒಳಗೆ ಪ್ರವೇಶ ಮಾಡುತ್ತಿರುವುದು ಕಾಣಿಸಿದೆ. ಇದನ್ನು ನೋಡಿದ ಕೆಲವರು ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ತಮ್ಮ ಬೇಸರವನ್ನು ಹಾಗೂ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಇದರ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಇನ್ನು ಬ್ರಹ್ಮಾಸ್ತ್ರ ಸಿನಿಮಾ ಟ್ರೈಲರ್ ನಲ್ಲಿ ಸಿನಿಮಾದ ಕಥೆ ಏನಿರಬಹುದು ಎನ್ನುವ ಒಂದು ಸುಳಿವು ಖಂಡಿತ ಸಿಕ್ಕಿದೆ. ಅದ್ಭುತ ಶಕ್ತಿಗಳನ್ನು ಉಳ್ಳ ಶಿವ ಎನ್ನುವ ಪಾತ್ರಧಾರಿಯಾಗಿ ನಟ ರಣಬೀರ್ ಕಪೂರ್ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಅವರು ಶೂ ಧರಿಸಿ ದೇಗುಲಕ್ಕೆ ಪ್ರವೇಶ ಮಾಡಿದ್ದೇಕೆ? ಎನ್ನುವುದು ಪ್ರಶ್ನೆಯಾಗಿದೆ. ನೆಟ್ಟಿಗರು ಬಾಲಿವುಡ್ ಮಂದಿ ಸನಾತನ ಧರ್ಮದ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುವ ಒಂದು ಅವಕಾಶವನ್ನು ಸಹಾ ಬಿಡುವುದಿಲ್ಲ ಎಂದು ಟೀಕೆ ಮಾಡಿದ್ದಾರೆ.

Leave a Reply

Your email address will not be published.