ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಸಿಕ್ಕಾಪಟ್ಟೆ ಕ್ಲಾಸ್: ಕಾರಣ ತಿಳಿದ್ರೆ ಖಂಡಿತ ಅಚ್ಚರಿ ಪಡ್ತೀರಾ

Entertainment Featured-Articles Movies News

ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕನ್ನಡದ ಸೆಲೆಬ್ರಿಟಿ ಗಳಲ್ಲಿ ಒಬ್ಬರಾಗಿದ್ದಾರೆ‌. ಸದಾ ಒಂದಲ್ಲಾ ಒಂದು ವಿಷಯವಾಗಿ ನಿವೇದಿತಾ ಅವರು ಸದ್ದು, ಸುದ್ದಿ ಮಾಡುತ್ತಲೇ ಇರುತ್ತಾರೆ. ನಿವೇದಿತಾ ಅವರು ಸದ್ಯಕ್ಕಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಏಕೆಂದರೆ ಅವರು ರಿಯಾಲಿಟಿ ಶೋ ಒಂದರ ಭಾಗವಾಗಿದ್ದಾರೆ. ಅದರ ಜೊತೆಗೆ ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ಗಳನ್ನು ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆ ಮತ್ತೊಂದು ಹೊಸ ಕೆಲಸಕ್ಕೆ ಕೈ ಹಾಕಿದ್ದು, ಈ ವಿಚಾರವಾಗಿಯೂ ಅವರು ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ಗಳನ್ನು ನೀಡುತ್ತಲೇ ಇರುತ್ತಾರೆ.

ನಿವೇದಿತಾ ಅವರು ಕಾಮಿಡಿ ಶೋ ಒಂದರಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ನಡುವೆಯೇ ಇದೀಗ ಅವರು ಮಿಸ್ಟ್ರೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸನ್ನು ಕಂಡಿದ್ದು, ತನ್ನ ಈ ಕನಸನ್ನು ನನಸು ಮಾಡಿಕೊಳ್ಳಲು ಅವರು ತರಬೇತಿಯನ್ನು ಪಡೆಯಲು ಆರಂಭಿಸಿದ್ದಾರೆ. ನಿವೇದಿತಾ ಅವರು ತಾವು ಯಾವುದೆಲ್ಲಾ ತರಬೇತಿಯನ್ನು ಪಡೆಯುತ್ತಿದ್ದೇನೆ ಎನ್ನುವ ಅಪ್ಡೇಟ್ ಗಳನ್ನು ಸಹಾ ನೀಡುತ್ತಿದ್ದಾರೆ. ಅವರು ಮಾತ್ರವೇ ಅಲ್ಲದೇ ಅವರಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ಸಹಾ ವೀಡಿಯೋ, ಫೋಟೊ ಶೇರ್ ಮಾಡಿದೆ.

ತರಬೇತಿಯ ಆರಂಭದಲ್ಲಿ ಅವರು ಆತ್ಮವಿಶ್ವಾಸದ ಕುರಿತಾಗಿ ತರಬೇತಿಯನ್ನು ಪಡೆದಿದ್ದಾರೆ. ಅದಾದ ನಂತರ ಸ್ಟೈಲಿಶ್ ಮ್ಯಾನರಿಸಂ, ಕ್ಯಾಟ್ ವಾಕ್ ಮಾಡುವ ವಿಧಾನ, ಕಾಸ್ಟ್ಯೂಮ್ ಸೆನ್ಸ್ ಹೀಗೆ ವಿವಿಧ ವಿಚಾರಗಳ ಕುರಿತಾಗಿ ಹಂತ ಹಂತವಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ ನಿವೇದಿತಾ ಗೌಡ. ತಾವು ಸ್ಪರ್ಧೆಗಾಗಿ ಎಷ್ಟೆಲ್ಲಾ ಶ್ರಮ ಪಡುತ್ತಿರುವುದಾಗಿ ಮಾಹಿತಿಯನ್ನು ನೀಡಿರುವ ನಿವೇದಿತಾ ಅವರು ತಮ್ಮ ಹೆಚ್ಚಿನ ಸಮಯವನ್ನು ಕ್ಲಾಸ್ ಗಳಲ್ಲೇ ಕಳೆಯುತ್ತಿರುವುದಾಗಿ ಹೇಳಿದ್ದಾರೆ.

ನಿವೇದಿತಾ ಅವರಿಗೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂಬ ಕನಸನ್ನು ಕಂಡಿದ್ದರಂತೆ. ಅವರ ಆ ಕನಸು ಈಗ ನನಸಾಗುವ ಅವಕಾಶ ಸಿಕ್ಕಿದ್ದು, ತನಗೆ ಸಿಕ್ಕಿರುವ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ತಾನು ಇಷ್ಟೆಲ್ಲಾ ಶ್ರಮ ಪಡುತ್ತಿರುವುದಾಗಿ ಹೇಳಿರುವ ನಿವೇದಿತಾ ಅವರು ತಮ್ಮಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತಾಗಿ ಆಗಾಗ ಫೋಟೋ ಶೂಟ್ ಮಾಡಿಸಿಕೊಂಡು ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

Leave a Reply

Your email address will not be published.