HomeEntertainmentನಾವಿಲ್ಲ ಅಂದ್ರೆ ಮನರಂಜನೆ ಇಲ್ಲ: ಬಾಯ್ಕಾಟ್ ವಿರುದ್ಧ ಮತ್ತೆ ಗುಡುಗಿದ ಕರೀನಾ ಕಪೂರ್

ನಾವಿಲ್ಲ ಅಂದ್ರೆ ಮನರಂಜನೆ ಇಲ್ಲ: ಬಾಯ್ಕಾಟ್ ವಿರುದ್ಧ ಮತ್ತೆ ಗುಡುಗಿದ ಕರೀನಾ ಕಪೂರ್

Kareena Kapoor: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ(Bollywood) ಯಾವುದೇ ದೊಡ್ಡ ಸಿನಿಮಾ ಬಿಡುಗಡೆಗೆ ಸಜ್ಜಾದರೂ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಟ್ರೆಂಡ್(Boycott Trend) ಆರಂಭವಾಗುತ್ತಿದೆ. ಈಗ ಈ ಟ್ರೆಂಡ್ ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್(Shah Rukh Khan) ನಾಯಕನಾಗಿರುವ ಪಠಾಣ್(Pathan) ಸಿನಿಮಾಕ್ಕೆ ಬಾಯ್ಕಾಟ್ ಟ್ರೆಂಡ್ ಶುರುವಾಗಿದೆ. ಪಠಾಣ್ ಸಿನಿಮಾಕ್ಕೆ ಬಾಯ್ಕಾಟ್ ಟ್ರೆಂಡ್ ಶುರುವಾಗಿರುವ ವಿಚಾರವಾಗಿ ಈಗಾಗಲೇ ಚರ್ಚೆಗಳು ಆರಂಭವಾಗಿದೆ. ಈಗ ಇದೇ ವಿಷಯವಾಗಿ ಬಾಲಿವುಡ್ ನ ಸ್ಟಾರ್ ನಟಿ ಕರೀನಾ ಕಪೂರ್ (Kareena Kapoor) ಪ್ರತಿಕ್ರಿಯೆಯನ್ನು ನೀಡಿದ್ದು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕೋಲ್ಕತ್ತಾದಲ್ಲಿ(Kolkata) ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕರೀನಾ ಕಪೂರ್ ಮಾತನಾಡುತ್ತಾ, ಮನರಂಜನೆ ಎನ್ನುವುದು ಇಲ್ಲದೇ ಹೋದರೆ ನೀವು ನಿಮ್ಮ ಜೀವನದಲ್ಲಿ ಸಂತೋಷವಾಗಿರಲು ಹೇಗೆ ಸಾಧ್ಯ? ಮನರಂಜನೆ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗಿದೆ. ಒಂದು ವೇಳೆ ಸಿನಿಮಾ ಎನ್ನುವ ಮನರಂಜನೆ ಕ್ಷೇತ್ರವೇ ಇಲ್ಲದೇ ಹೋಗಿದ್ದಿದ್ದರೆ ಏನಾಗುತ್ತಿತ್ತು? ಎಂದು ನಟಿ ಪ್ರಶ್ನೆ ಮಾಡಿದ್ದಾರೆ. ಪಠಾಣ್ ಸಿನಿಮಾದ ಬೇಷರಂ ರಂಗ್(Besharam Rang) ಹಾಡಿನ ನಂತರ ಎದ್ದ ವಿ ವಾ ದ ದ ನಂತರ ಕರೀನಾ ಈಗ ಪ್ರತಿಕ್ರಿಯೆ ನೀಡಿರುವುದು ಸುದ್ದಿಯಾಗಿದೆ.

ಈ ಹಿಂದೆ ಕರೀನಾ ಕಪೂರ್(Kareena Kapoor) ಮತ್ತು ಅಮೀರ್ ಖಾನ್(Amir Khan) ಅಭಿನಯದ ಬಹುನಿರೀಕ್ಷಿತ ಸಿನಿಮಾ ಲಾಲ್ ಸಿಂಗ್ ಚಡ್ಡಾ(Lal Singh Chadhdha) ಬಂದಾಗಲು ಬಾಯ್ಕಾಟ್ ಟ್ರೆಂಡ್ ಆಗಿತ್ತು. ಆಗಲೂ ನಟಿ ಕರೀನಾ ಕಪೂರ್(Kareena Kapoor) ಒಂದು ಉತ್ತಮ ಸಿನಿಮಾವನ್ನು ಬಾಯ್ಕಾಟ್ ಮಾಡಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದರು. ಅಲ್ಲದೇ ಒಂದು ಹಂತದಲ್ಲಿ ನಟಿ ಸಿಟ್ಟಾಗಿ ಯಾರೂ ಸಿನಿಮಾ ನೋಡಲಿಲ್ಲ ಎಂದರೂ ಪರವಾಗಿಲ್ಲ ಎನ್ನುವ ಮಾತನ್ನೂ ಸಹಾ ಹೇಳಿದ್ದರು. ಲಾಲ್ ಸಿಂಗ್ ಚಡ್ಡಾ ಬಿಡುಗಡೆ ನಂತರ ಹೀನಾಯವಾಗಿ ಸೋಲನ್ನು ಕಂಡಿತ್ತು.

- Advertisment -