ಬಾಯ್ಕಾಟ್ ಅಂದವ್ರೇ ಸಿನಿಮಾ ನೋಡ್ತಿದ್ದಾರಾ? 3 ದಿನಗಳಲ್ಲೇ ಬ್ರಹ್ಮಾಸ್ತ್ರ ಗಳಿಸಿದ ಕೋಟಿಗಳೆಷ್ಟು ಗೊತ್ತಾ? ಶಾಕಿಂಗ್!!

Entertainment Featured-Articles Movies News

ಬಾಲಿವುಡ್ ಸಿನಿಮಾ ಬ್ರಹ್ಮಾಸ್ತ್ರ ಬಿಡುಗಡೆಯ ನಂತರ ಅನೇಕರ ಊಹೆಗಳನ್ನು ಸುಳ್ಳು ಮಾಡಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ ಪ್ರೇಕ್ಷಕರ ಮೇಲೆ ಮೋಡಿಯನ್ನು ಮಾಡಿದ್ದು, ಸಿನಿಮಾ ಯಶಸ್ಸಿನ ಕಡೆ ನಾಗಾಲೋಟವನ್ನು ನಡೆಸಿದೆ. ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಮೊದಲು ಬಾಯ್ಕಾಟ್ ಬ್ರಹ್ಮಾಸ್ತ್ರ ಕೂಗು ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ಜೋರಾಗಿತ್ತು. ಇದು ಸಹಜವಾಗಿಯೇ ಸಿನಿಮಾ ತಂಡಕ್ಕೆ ಆ ತಂ ಕವನ್ನು ಸೃಷ್ಟಿ ಮಾಡಿತ್ತು. ಅಲ್ಲದೇ ಬ್ರಹ್ಮಾಸ್ತ್ರ ಯಶಸ್ಸನ್ನು ಪಡೆಯುವುದು ಬಾಲಿವುಡ್ ಗೂ ಸಹಾ ಒಂದು ಅನಿವಾರ್ಯ ಎನಿಸಿತ್ತು. ಬ್ರಹ್ಮಾಸ್ತ್ರ ಬಿಡುಗಡೆ ನಂತರ ಅದು ಯಶಸ್ಸು ಪಡೆದಿರುವುದು ಬಾಲಿವುಡ್ ಗೆ ಮರುಜೀವ ಬಂದಂತೆ ಆಗಿದೆ.

ಬಾಯ್ಕಾಟ್ ಬ್ರಹ್ಮಾಸ್ತ್ರ ಎನ್ನುವ ಟ್ರೆಂಡ್ ಗೆ ಸೆಡ್ಡು ಹೊಡೆಯುವಂತೆ ಈ ಸಿನಿಮಾ ಯಶಸ್ಸನ್ನು ಪಡೆದು, ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ನೊಂದಿಗೆ ಗೆದ್ದು ಬೀಗಿದೆ. ಹೌದು, ಬಹ್ರ್ಮಾಸ್ತ್ರ ಸಿನಿಮಾ ಬಿಡುಗಡೆಯಾದ ಮೂರೇ ದಿನದಲ್ಲಿ 225 ಕೋಟಿ ರೂಪಾಯಿಗಳನ್ನು ಗಳಿಸಿ ಬೀಗಿದೆ. ಈ ಕಲೆಕ್ಷನ್ ಮೂಲಕ ಒಂದಷ್ಟು ಹಳೆಯ ದಾಖಲೆಗಳನ್ನು ಅಳಿಸಿ ಬಹ್ರ್ಮಾಸ್ತ್ರ ಹೊಸ ದಾಖಲೆಗಳನ್ನು ಬರೆದಿರುವುದು ಮಾತ್ರವೇ ಅಲ್ಲದೇ ಮುಂದಿನ ದಿನಗಳಲ್ಲಿ ಈ ಸಿನಿಮಾ ಇನ್ನಷ್ಟು ಕಲೆಕ್ಷನ್ ಮಾಡುವುದು ಎನ್ನುವ ನಿರೀಕ್ಷೆಗಳು ಇವೆ. ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ನಂತರ ಇದನ್ನು ವೀಕ್ಷಿಸಿದ ಸಿನಿಮಾ ವಿಮರ್ಶಕರು ನೆಗೆಟಿವ್ ರಿವ್ಯೂ ನೀಡಿದ್ದರು.

ವಿಮರ್ಶಕರಿಂದ ಸಿನಿಮಾಕ್ಕೆ ಅಂಕಗಳು ಸಹಾ ಕಡಿಮೆ ಸಿಕ್ಕಿದ್ದವು. ಮೊದಲ ದಿನವೇ ಇಂತಹುದೊಂದು ಪ್ರತಿಕ್ರಿಯೆ ಚಿತ್ರ ವಿಮರ್ಶಕರಿಂದ ಸಿಕ್ಕಿದ್ದು, ಭಾರೀ ಬಜೆಟ್ ಸಿನಿಮಾದ ಮೇಲೆ ನೆಗೆಟಿವ್ ಪರಿಣಾಮ ಬೀರಬಹುದು ಎನ್ನಲಾಗಿತ್ತು. ಆದರೆ ಅದನ್ನು ಸುಳ್ಳು ಮಾಡಿದಂತೆ ಬ್ರಹ್ಮಾಸ್ತ್ರದ ಕಲೆಕ್ಷನ್ ಏರಿಕೆಯಾಗಿದೆ. ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿಲ್ಲ. ಹಿಂದಿ ವರ್ಷನ್ ನಲ್ಲೇ ಸಿನಿಮಾ ಒಟ್ಟು 108 ಕೋಟಿ ಗಳಿಕೆಯನ್ನು ಕಂಡಿದೆ. ಬಿಡುಗಡೆಯಾದ ಮೊದಲೆರಡು ದಿನಕ್ಕಿಂತ ಹೆಚ್ಚು ಹಣವನ್ನು ಸಿನಿಮಾ ಮೂರನೇ ದಿನ ಗಳಿಸಿರುವುದು ವಿಶೇಷವಾಗಿದೆ.

Leave a Reply

Your email address will not be published.