ಬಿಗ್ ಬಾಸ್ ಕನ್ನಡ ಓಟಿಟಿ ನಾಲ್ಕನೇ ವಾರದ ಜರ್ನಿ ಬಹಳ ಭರ್ಜರಿಯಾಗಿ ಆರಂಭವಾಗಿದೆ. ಬಿಗ್ ಬಾಸ್ ಮನೆಯ ಸದಸ್ಯರಿಗೆ ಹೊಸ ಹೊಸ ಟಾಸ್ಕ್ ಗಳನ್ನು ಸಹಾ ನೀಡುತ್ತಿದ್ದಾರೆ. ಮನೆಯ ಸದಸ್ಯರು ಈ ಟಾಸ್ಕ್ ಗಳನ್ನು ಬಹಳ ಚುರುಕಾಗಿ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅಂತಹುದೇ ಒಂದು ಟಾಸ್ಕ್ ಅನ್ನು ನೀಡಲಾಗಿತ್ತು. ಈ ಟಾಸ್ಕ್ ನ ಹೆಸರು ಇಷ್ಟ ಕಷ್ಟ ಎನ್ನುವುದಾಗಿತ್ತು. ಟಾಸ್ಕ್ ನ ಭಾಗವಾಗಿ ಒಂದು ಬಾಕ್ಸ್ ನಲ್ಲಿ ಹಲವು ವಸ್ತುಗಳನ್ನು ತಂದಿರಿಸಲಾಗಿತ್ತು. ಆ ಬಾಕ್ಸ್ ನಲ್ಲಿ ಬೊಂಬೆ, ಫೀಡಿಂಗ್ ಬಾಟಲ್, ಹಾರ್ಟ್ ಸೇರಿದಂತೆ ಇನ್ನೂ ಅನೇಕ ವಸ್ತುಗಳು ಇದ್ದವು. ಇದರಲ್ಲಿ ಒಂದನ್ನು ಆರಿಸಿಕೊಂಡು ಮನೆಯ ಸದಸ್ಯರು ತಮಗಿಷ್ಟವಾದ ಮನೆಯ ಅನ್ಯ ಸದಸ್ಯರಿಗೆ ಅದನ್ನು ನೀಡಬೇಕಾಗಿತ್ತು.
ಅಷ್ಟು ಮಾತ್ರವೇ ಅಲ್ಲದೇ ಯಾರಿಗೆ ಆ ವಸ್ತುವನ್ನು ನೀಡುತ್ತಾರೋ, ಅವರಿಗೆ ಆ ವಸ್ತುವನ್ನು ನೀಡುತ್ತಿರುವುದಕ್ಕೆ ಕಾರಣವೇನು ಎನ್ನುವುದನ್ನು ಸಹಾ ಹೇಳಬೇಕು ಎನ್ನುವ ನಿಯಮವನ್ನು ತಿಳಿಸಿದ್ದರು ಬಿಗ್ ಬಾಸ್. ಇನ್ನು ಬಿಗ್ ಬಾಸ್ ಮನೆಯಲ್ಲಿ ಇತ್ತೀಚಿಗೆ ಸೋನು ಗೌಡ ಅವರದ್ದೇ ಮಾತಾಗಿದೆ. ಸೋನು ಅತಿ ಹೆಚ್ಚು ಮಾತನಾಡುವ ಸ್ಪರ್ಧಿಯೆಂದು ಈಗಾಗಲೇ ಮನೆಯ ಸದಸ್ಯರು ಸಹಾ ಬೇಸರವನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಸೋನು ಮಾತನಾಡುವ ಮಾತಿಗೆ, ಅವರು ಕೆಲವೊಮ್ಮೆ ಬಳಸುವ ಭಾಷೆಯ ಕುರಿತಾಗಿ ನಟ ಕಿಚ್ಚ ಸುದೀಲ್ ಅವರು ಸಹಾ ವಾರಾಂತ್ಯದ ಎಪಿಸೋಡ್ ಗಳಲ್ಲಿ ಬುದ್ಧಿ ಮಾತನ್ನು ಹೇಳಿದ್ದಾರೆ.
ಹೀಗೆ ಸದಾ ಮಾತನಾಡುವ ಸೋನು ಗೌಡ ಗೆ ಇಷ್ಟ ಕಷ್ಟ ಟಾಸ್ಕ್ ನ ವೇಳೆ ಫೀಡಿಂಗ್ ಬಾಟಲ್ ಅನ್ನು ನೀಡುವ ಮೂಲಕ ಅಕ್ಷತಾ ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದ್ದಾರೆ. ಸೋನುಗೆ ಫೀಡಿಂಗ್ ಬಾಟಲ್ ನೀಡಿದ ನಂತರ ಅಕ್ಷತಾ ಅದನ್ನು ನೀಡಲು ಕಾರಣವೇನು ಎನ್ನುವುದನ್ನು ವಿವರಿಸಿದ್ದಾರೆ. ಅಕ್ಷತಾ ಅವರು, ಈ ಮನೇಲಿ ಸೋನು ಮಾತಾಡೋ ಮಾತುಗಳು ಎಫೆಕ್ಟ್ ಆಗ್ತಾವೆ. ಆದ್ದರಿಂದ ಮಾತಾಡಬೇಕು ಅನಿಸಿದಾಗ ಈ ಬಾಟಲ್ ಅನ್ನು ಬಾಯಲ್ಲಿ ಇಟ್ಕೊ ಎಂದು ಅಕ್ಷತಾ ಸೋನುಗೆ ಒಂದು ಸಲಹೆ ನೀಡುತ್ತಾ, ಫೀಡಿಂಗ್ ಬಾಟಲನ್ನು ನೀಡಿದ್ದಾರೆ.
ಸೋನು ಸಹಾ ಅದನ್ನು ಅನುಮೋದಿಸಿದಂತೆ ಬಾಟಲನ್ನು ತೆಗೆದುಕೊಂಡಿದ್ದಾರೆ. ಬಾಟಲ್ ಪಡೆದ ಸೋನು ಉತ್ತರ ಏನು ನೀಡಿದರು ಎನ್ನುವುದು ಇನ್ನೂ ತಿಳಿಯಬೇಕಾಗಿದೆ. ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಮಾತ್ರ ಸಖತ್ ಸೌಂಡ್ ಮಾಡ್ತಾ ಇದ್ದಾರೆ. ಆರಂಭದಲಿ ಅವರು ಮನೆಗೆ ಹೋಗೋದು ಬೇಡ ಎಂದಿದ್ದರು ನೆಟ್ಟಿಗರು. ಆದರೆ ಈಗ ಸೋನು ಇಲ್ಲದೇ ಹೋದ್ರೆ ಎಂಟರ್ಟೈನ್ಮೆಂಟ್ ಇಲ್ಲ ಎನ್ನುವ ಹಾಗೆ ಪ್ರತಿ ವಾರ ವೀಕ್ಷಕರು ಓಟುಗಳನ್ನು ನೀಡುತ್ತಾ ಸೋನು ಗೌಡರನ್ನು ಸೇಫ್ ಮಾಡ್ತಾ ಇರ್ತಾ ಇದ್ದಾರೆ.