ಟಾಲಿವುಡ್ ನ ಮೆಗಾ ಕುಟುಂಬ ಎಂದೇ ಖ್ಯಾತರಾದ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬಕ್ಕೆ ಈ ಬಾರಿ ದೀಪಾವಳಿ ಹಬ್ಬ ಬಹಳ ವಿಶೇಷವಾಗಿದೆ. ಇಡೀ ಕುಟುಂಬ ದೀಪಾವಳಿ ಯನ್ನು ಖುಷಿಯಿಂದ ಸಂಭ್ರಮಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಯುವ ನಟ ಸಾಯಿ ಧರಮ್ ತೇಜಾ. ಹೌದು ಸಾಯಿ ಧರಮ್ ತೇಜಾ ಅವರಿಂದಾಗಿ ಇಡೀ ಕುಟುಂಬದಲ್ಲಿ ಸಂತೋಷ ಮರಳಿ ಬಂದಿದೆ. ಕೆಲವು ದಿನಗಳ ಹಿಂದೆಯಷ್ಟೇ ಭೀ ಕರ ವಾದ ರಸ್ತೆ ಅ ಫ ಘಾ ತಕ್ಕೆ ಗುರಿಯಾಗಿ, ಕೋಮಾ ಅವಸ್ಥೆಯನ್ನು ತಲುಪಿದ್ದರು. ಸಾಯಿ ಧರಮ್ ತೇಜಾ ಅ ಪ ಘಾ ತ ದ ಸುದ್ದಿ ಹೊರ ಬಂದಾಗ ಅಭಿಮಾನಿಗಳೆಲ್ಲರೂ ಸಹಾ ಬಹಳ ಚಿಂತಾಕ್ರಾಂತರಾಗಿದ್ದರು.
ಸಾಯಿ ಧರಮ್ ತೇಜಾ ತಮ್ಮ ಸ್ಪೋರ್ಟ್ಸ್ ಬೈಕಿನಲ್ಲಿ ಬರುವಾಗ ರಸ್ತೆಯ ಮೇಲೆ ಸ್ಕಿಡ್ ಆಗಿ ಉರುಳಿ ಬಿದ್ದು ತೀವ್ರವಾದ ಗಾಯಗಳಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲವು ದಿನಗಳ ಕಾಲ ಅವರ ಆರೋಗ್ಯದ ಕುರಿತಾಗಿ ತೀವ್ರವಾದ ಚಿಂತೆ ಕಾಡಿತ್ತು. ಸಾಯಿ ಧರಮ್ ತೇಜಾ ಒಂದಷ್ಟು ದಿನಗಳ ಕಾಲ ಕೋಮಾದಲ್ಲೇ ಉಳಿದಿದ್ದರಿಂದ ಅಭಿಮಾನಿಗಳು ಸಹಾ ಅವರ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ್ದರು. ಎಲ್ಲವುಗಳ ಫಲ ಎಂಬಂತೆ ಸಾಯಿ ಧರಮ್ ತೇಜಾ ಚೇತರಿಸಿಕೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ ಸಾಯಿ ಧರಮ್ ತೇಜಾ. ಅವರ ಆಗಮನ ಇಡೀ ಕುಟುಂಬದಲ್ಲೊಂದು ಸಂಭ್ರಮ ತಂದಿದೆ. ಈ ವೇಳೆ ಒಂದೇ ಫ್ರೇಮ್ ನಲ್ಲಿ ನಟ ಚಿರಂಜೀವಿ, ಅವರ ಸಹೋದರ ನಾಗ ಬಾಬು, ಪವನ್ ಕಲ್ಯಾಣ್, ಹಾಗೂ ಯುವ ನಟರಾದ ರಾಮ್ ಚರಣ್ ತೇಜಾ, ಅಲ್ಲು ಅರ್ಜುನ್, ವರುಣ್ ತೇಜ್, ವೈಷ್ಣವ್ ತೇಜ್, ಸಾಯಿ ಧರಮ್ ತೇಜ್, ಅಕಿರಾ ಎಲ್ಲರೂ ಕಾಣಿಸಿಕೊಂಡಿದ್ದು, ನಟ ಚಿರಂಜೀವಿ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಸಾಯಿ ಧರಮ್ ತೇಜಾ ಮನೆಗೆ ಬಂದ ಮೇಲೆ ಇಡೀ ಕುಟುಂಬದೊಂದಿಗೆ ಮೊದಲ ಫೋಟೋ ಶೇರ್ ಮಾಡಿದ ನಟ ಮೆಗಾಸ್ಟಾರ್ ಚಿರಂಜೀವಿ ಅವರು, ನಿಮ್ಮೆಲರ ಹಾರೈಕೆಯಿಂದ ಸಾಯಿ ಧರಮ್ ತೇಜಾ ಸಂಪೂರ್ಣವಾಗಿ ಗುಣಮುಖನಾಗಿದ್ದು, ಇದೇ ನಮ್ಮ ಕುಟುಂಬದ ನಿಜವಾದ ಹಬ್ಬ ಎಂದು ಬರೆದುಕೊಂಡು ಟ್ವಿಟರ್ ನಲ್ಲಿ ತಮ್ಮ ಸಂಭ್ರಮ ಹಾಗೂ ಸಂತೋಷವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಪ್ರತಿಕ್ರಿಯೆಗಳನ್ನು ನೀಡಿ ಶುಭ ಹಾರೈಸಿದ್ದಾರೆ.