ಬಹುಕೋಟಿ ಆಸ್ತಿಯ ಒಡೆಯ ನಟ ವಿಜಯ್ ಸೇತುಪತಿ: ಈ ನಟನ ಆಸ್ತಿ ಮೌಲ್ಯ ತಿಳಿದ್ರೆ ಶಾಕ್ ಆಗ್ತೀರಾ!!

0 7

ತಮಿಳು ನಟ ವಿಜಯ್ ಸೇತುಪತಿ ದಕ್ಷಿಣ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ನಟ. ತಮಿಳಿನ ಸಿನಿ ಪ್ರೇಮಿಗಳು ಅವರನ್ನು ಮಕ್ಕಳ್ ಸೆಲ್ವನ್ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಬಹುಮುಖ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿದ್ದಾರೆ ವಿಜಯ್ ಸೇತುಪತಿ. ಅವರು ಇಲ್ಲಿಯವರೆಗೆ 50 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ನಾಯಕನಾಗಿರುವ ಆ್ಯಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿದೆ. ಆದರೆ ಇದರ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.

ವಿಜಯ್ ಸೇತುಪತಿ ಸಿನಿಮಾ ರಂಗಕ್ಕೆ ಪ್ರವೇಶ ನೀಡಿದ ನಂತರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಸೂಪರ್ ಡಿಲಕ್ಸ್, ಸುಂದರಪಾಂಡಿಯನ್, ನಡುವುಲ ಕೊಂಜಾಂ ಪಕ್ಕತ ಕಾನೋಮ್ ಮತ್ತು ಸುಂದರಪಾಂಡಿಯನ್ ಚಿತ್ರಗಳಲ್ಲಿ ಅವರ ಅದ್ಭುತ ಅಭಿನಯವನ್ನು ಕಂಡು ಮೆಚ್ಚಿದ್ದಾರೆ‌ ಸಿನಿ ಪ್ರೇಮಿಗಳು. ಈ ಸಿನಿಮಾಗಳ ಪಾತ್ರಗಳಲ್ಲಿ ವಿಜಯ್ ಸೇತುಪತಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ವೈವಿದ್ಯಮಯ ಪಾತ್ರಗಳು ಮತ್ತು ಅದ್ಭುತವಾದ ನಟನಾ ಸಾಮರ್ಥ್ಯದ ಮೂಲಕ, ವಿಜಯ್ ಸೇತುಪತಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಚಿತ್ರಗಳಲ್ಲಿ ಅವರು ತಾವು ನಟಿಸುವ ಪಾತ್ರಗಳಿಗೆ ಅವರು ದೊಡ್ಡ ಮೊತ್ತದ ಸಾಕಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದು ವಾಸ್ತವ. ಮಾದ್ಯಮ ವರದಿಗಳ ಪ್ರಕಾರ ಈ ನಟನ ಒಟ್ಟು ಆಸ್ತಿ ಮೌಲ್ಯ ಪ್ರಸ್ತುತ 110 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮನರಂಜನಾ ವಲಯದಲ್ಲಿ ಅವರು ಸಾಕಷ್ಟು ಶ್ರೀಮಂತರಾಗಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ.‌

ವರದಿಗಳು ಸತ್ಯವೇ ಆದಲ್ಲಿ, ನಟ ವಿಜಯ್ ಸೇತುಪತಿ ಅವರು ಸಿನಿಮಾವೊಂದಕ್ಕೆ ಸುಮಾರು 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅದಲ್ಲದೇ ಅವರು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಗಾಗಿ ರೂ. 50 ಲಕ್ಷವನ್ನು ಪಡೆಯುತ್ತಾರೆ. ಇದಲ್ಲದೇ ವಿಜಯ್ ಸೇತುಪತಿ ಅವರ ಮಾಲೀಕತ್ವದ ಪ್ರೊಡಕ್ಷನ್ ಹೌಸ್ ಸಹಾ ಅವರ ಆದಾಯದ ಮೂಲಗಳಲ್ಲಿ ಒಂದಾಗಿದೆ. ಸಿನಿಮಾ ಗಳಲ್ಲಿ ತಮ್ಮ ವೈಯಕ್ತಿಕ ಹೂಡಿಕೆಯ ಮೂಲಕವೂ ಅವರು ಆದಾಯವನ್ನು ಗಳಿಸುತ್ತಿದ್ದಾರೆ.

ಅನ್ಯ ಸೆಲೆಬ್ರಿಟಿಗಳ ಹಾಗೆಯೇ ವಿಜಯ್ ಸೇತುಪತಿ ಸಹಾ ಕಾರುಗಳ ಕ್ರೇಜ್ ಹೊಂದಿದ್ದಾರೆ. ಅವರ ಬಳಿಯೂ ದುಬಾರಿ ಹಾಗೂ ಐಷಾರಾಮಿ ಕಾರುಗಳ ಸಂಗ್ರಹವಿದೆ. ವರದಿಯ ಪ್ರಕಾರ ಪ್ರಕಾರ ಬಳಿ 35 ಲಕ್ಷ ರೂ ಬೆಲೆಯ ಟೊಯೋಟಾ ಫಾರ್ಚೂನರ್, 40 ಲಕ್ಷ ರೂ. ಮೌಲ್ಯದ ಮಿನಿ ಕೂಪರ್, 1.60 ಕೋಟಿ ಮೌಲ್ಯದ BMW 7, 7.65 ಲಕ್ಷ ಬೆಲೆಯ ಹುಂಡೈ ಗ್ರಾಂಡ್ i10 ಮತ್ತು 20 ಲಕ್ಷ ರೂ. ಬೆಲೆಯ ಟಯೊಟಾ ಇನ್ನೋವಾ ಕಾರುಗಳಿವೆ.

Leave A Reply

Your email address will not be published.