ಬಹುಕಾಲದ ಗೆಳತಿಯೊಡನೆ RX 100 ಖ್ಯಾತಿಯ ನಟ ಕಾರ್ತಿಕೇಯ ನಿಶ್ಚಿತಾರ್ಥ: ಫೋಟೋ ವೈರಲ್

Written by Soma Shekar

Published on:

---Join Our Channel---

ತೆಲುಗು ಚಿತ್ರರಂಗದ ಯುವ ನಾಯಕ ನಟರಲ್ಲಿ ತನ್ನದೇ ಆದಂತಹ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿರುವ ನಟ ಕಾರ್ತಿಕೇಯ ಗುಮ್ಮಕೊಂಡ. ಇವರು ತೆಲುಗಿನ ಆರ್ ಎಕ್ಸ್ 100 ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡಿದ ಪ್ರತಿಭಾವಂತ ನಟ. ಕಾರ್ತಿಕೇಯ ಗುಮ್ಮಕೊಂಡ ನಾಯಕ ನಟನಾಗಿ ಮಾತ್ರವೇ ಅಲ್ಲದೇ ನಾನಿ ಅವರ ನಾಯಕತ್ವದ ಗ್ಯಾಂಗ್ ಲೀಡರ್ ಸಿನಿಮಾದಲ್ಲಿ ಸ್ಟೈಲಿಶ್ ವಿಲನ್ ಆಗಿ ಎಲ್ಲರ ಮನಸ್ಸು ಗೆದ್ದಿದ್ದರು. ಹೀಗೆ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ನಟ ಇದೀಗ ತಮ್ಮ ಬಹು ಕಾಲದ ಗೆಳತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಿವಾಹ ಜೀವನಕ್ಕೆ ಅಡಿ ನೀಡಲು ಸಜ್ಜಾಗುತ್ತಿದ್ದಾರೆ. ಅವರು ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳು ಅಪಾರವಾದ ಮೆಚ್ಚುಗೆಯನ್ನು ಸೂಚಿಸುವುದರ ಜೊತೆಗೆ ಕಾರ್ತಿಕೇಯ ಅವರಿಗೆ ಶುಭ ಹಾರೈಸಿದ್ದಾರೆ.

ಕಾರ್ತಿಕೇಯ ಶೇರ್ ಮಾಡಿಕೊಂಡ ತಮ್ಮ ಹಳೆಯ ಫೋಟೋ ಕೂಡ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಪ್ರೇಮ ತೋ ಮೀ ಕಾರ್ತಿಕ್ ಎನ್ನುವ ಹೆಸರಿನ ಸಿನಿಮಾದ ಮೂಲಕ ಕಾರ್ತಿಕೇಯ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟರು. ಆದರೆ ಅವರಿಗೆ ದೊಡ್ಡ ಮಟ್ಟದ ಹೆಸರು ಮತ್ತು ಯಶಸ್ಸನ್ನು ತಂದುಕೊಟ್ಟ ಸಿನಿಮಾ ಆರ್ ಎಕ್ಸ್ 100, ಈ ಸಿನಿಮಾದ ನಂತರ ಉತ್ತಮ ಅವಕಾಶಗಳು ಅವರನ್ನು ಅರಸಿಕೊಂಡು ಬಂದವು. ದಕ್ಕಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ತೆಲುಗು ಚಿತ್ರರಂಗದ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿದ್ದಾರೆ ಕಾರ್ತಿಕೇಯ. ಒಂದಾದ ನಂತರ ಮತ್ತೊಂದು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ಈ ನಟ ಇದೀಗ ಬಿಡುವು ಮಾಡಿಕೊಂಡು, ಕಳೆದ ಹತ್ತು ವರ್ಷಗಳಿಂದ ತಮ್ಮ ಆಪ್ತ ಗೆಳತಿಯಾಗಿದ್ದ ಲೋಹಿತಾ ಅವರೊಡನೆ ನಿಶ್ಚಿತಾರ್ಥವನ್ನು ಮಾಡಿಕೊಂಡು ವಿವಾಹ ಜೀವನಕ್ಕೆ ಅಡಿಯಿಡಲು ಸಿದ್ಧವಾಗುತ್ತಿದ್ದಾರೆ.

ಆಗಸ್ಟ್ 23ರಂದು ಗುರುಹಿರಿಯರ ಮುಂದೆ ಹೈದರಾಬಾದಿನಲ್ಲಿ ಇವರ ನಿಶ್ಚಿತಾರ್ಥ ನಡೆದಿದೆ. ಟ್ವಿಟರ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟ ಕಾರ್ತಿಕೇಯ, “ನನ್ನ ಸ್ನೇಹಿತೆ ನನ್ನ ಬಾಳಿನ ಸಂಗಾತಿ ಆಗುತ್ತಿದ್ದಾಳೆ ಎಂದು ಹೇಳುವುದಕ್ಕೆ ಬಹಳ ಖುಷಿಯಾಗುತ್ತಿದೆ, ಲೋಹಿತಾರನ್ನು ಮೊದಲ ಬಾರಿಗೆ 2010ರಲ್ಲಿ ವಾರಂಗಲ್ ನಲ್ಲಿ ಭೇಟಿಯಾಗಿದ್ದೆ, ಈ ದಶಕದ ಸ್ನೇಹ ಇನ್ನು ದಶಕಗಳ ಕಾಲ ಸಾಗಲಿ ಎಂದು ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಕಾರ್ತಿಕೇಯ ಅವರು ಮಾಡಿರುವ ಪೋಸ್ಟ್ ಗೆ ಅಭಿಮಾನಿಗಳ ಕಡೆಯಿಂದ ದೊಡ್ಡಮಟ್ಟದಲ್ಲಿ ಶು ಭಹಾರೈಕೆಗಳು ಹರಿದು ಬರುತ್ತಿದೆ.

Leave a Comment