ಬಹಿರಂಗ ಪತ್ರ ಬರೆದು ತನ್ನ ತಪ್ಪಿಗೆ ಬ್ಯಾಡ್ಮಿಂಟನ್ ತಾರೆ ಸೈನಾ ಕ್ಷಮೆ ಕೋರಿದ ನಟ ಸಿದ್ಧಾರ್ಥ್
ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದಿರುವ, ಕೆಲವು ಹಿಂದಿ ಸಿನಿಮಾಗಳಲ್ಲಿ ಸಹಾ ನಟಿಸಿರುವ ನಟ ಸಿದ್ಧಾರ್ಥ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾ ವಿಚಾರಗಳ ಬದಲಾಗಿ ತಮ್ಮ ಸಿದ್ಧಾಂತಗಳ ಕಾರಣಕ್ಕೆ ಅನ್ಯರ ಬಗ್ಗೆ ಆಡುವ ಮಾತುಗಳು ಹಾಗೂ ಟ್ವೀಟ್ ಗಳಿಂದಾಗಿಯೇ ಸಾಕಷ್ಟು ಕಿರಿಕ್ ಮಾಡಿಕೊಂಡು, ನೆಟ್ಟಿಗರ ನಿಂ ದ ನೆ ಗೆ ಕಾರಣವಾಗುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ನಟ ಸಿದ್ಧಾರ್ಥ್ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕುರಿತಾಗಿ ಆ ಕ್ಷೇ ಪ ಣಾರ್ಹ ಟ್ವೀಟ್ ಮಾಡಿ ತಮ್ಮ ನಾಲಗೆಯನ್ನು ಹರಿ ಬಿಟ್ಟಿದ್ದರು.
ಸಿದ್ಧಾರ್ಥ್ ಮಾಡಿದ ಟ್ವೀಟ್ ಗೆ ದೇಶ ವ್ಯಾಪಿ ವಿ ರೋ ಧ ವ್ಯಕ್ತವಾಗಿದ್ದು ಮಾತ್ರವಲ್ಲದೇ ಅನೇಕ ಗಣ್ಯರು, ಕ್ರೀಡಾಕಾರರು ಸಹಾ ನಟನ ಟ್ವೀಟ್ ಅನ್ನು ತೀ ವ್ರ ವಾಗಿ ಖಂ ಡ ನೆ ಮಾಡಿದರು. ಮಹಿಳಾ ಆಯೋಗ ಕೂಡಾ ಮಹಿಳೆಯರ ಗೌರವಕ್ಕೆ ಧ ಕ್ಕೆಯನ್ನು ತರುವ ರೀತಿಯಲ್ಲಿ ಸಿದ್ಧಾರ್ಥ್ ಟ್ವೀಟ್ ಮಾಡಿರುವುದರಕ್ಕೆ ಕಿ ಡಿ ಕಾರಿತ್ತು. ಹೀಗೆ ಎಲ್ಲೆಡೆಯಿಂದ ತನ್ನ ಬಗ್ಗೆ ಟೀ ಕೆ ಗಳು ಕೇಳಿ ಬರುತ್ತಿರುವುದನ್ನು ಗಮನಿಸಿದ ನಟ ಸಿದ್ಧಾರ್ಥ್ ಇದೀಗ ಬಹಿರಂಗ ಪತ್ರವನ್ನು ಬರೆದು ತಮ್ಮ ತಪ್ಪಿಗೆ ಕ್ಷಮೆಯನ್ನು ಕೇಳಿದ್ದಾರೆ.
ಸಿದ್ಧಾರ್ಥ್ ತಮ್ಮ ಟ್ವೀಟ್ ಪತ್ರದಲ್ಲಿ, ಡಿಯರ್ ಸೈನಾ, ಕೆಲವೇ ದಿನಗಳ ಹಿಂದೆ ನಿಮ್ಮ ಟ್ವೀಟ್ ಗೆ ಪ್ರತಿಯಾಗಿ ನಾನು ಕೆಟ್ಟ ಜೋಕ್ ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿ ರೋ ಧಿ ಸ ಬಹುದು, ಆದರೆ ನನ್ನ ವಿ ರೋ ಧ ಮತ್ತು ಸಿಟ್ಟು ಕೂಡಾ ನಾನು ಬಳಸಿದ ಪದಗಳು ಮತ್ತು ಧಾಟಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಜೋಕ್ ಅನ್ನು ವಿವರಿಸಬೇಕಾದ ಸಂದರ್ಭ ಬರುತ್ತದೆ ಎಂದಾದರೆ ಅದು ಒಳ್ಳೆಯ ಜೋಕ್ ಅಲ್ಲ, ಅದಕ್ಕಾಗಿ ನಾನು ಕ್ಷಮೆಯನ್ನು ಕೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಗೆ ತೆರಳಿದ್ದಾಗ ಅವರ ಭದ್ರತೆಯ ವಿಚಾರದಲ್ಲಿ ಆದ ಲೋಪದ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಾ ಸೈನಾ ಒಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟ ಸಿದ್ಧಾರ್ಥ್ ಅ ವ ಹೇಳನಕಾರಿ ಅಥವಾ ಬಹಳ ಕೆ ಟ್ಟ ಅರ್ಥ ಬರುವಂತಹ ಪದಗಳನ್ನು ಬಳಕೆ ಮಾಡಿದ್ದರು, ಅವರ ಟ್ವೀಟ್ ಬಗ್ಗೆ ಅನೇಕರು ಸಿ ಟ್ಟನ್ನು ಹೊರ ಹಾಕಿದ್ದರು. ಸೈನಾ ಅವರ ತಂದೆ ಸಹಾ ತಮ್ಮ ಖಾರವಾದ ಪ್ರತಿಕ್ರಿಯೆ ನೀಡಿದ್ದರು.
ಸೈನಾ ನೆಹ್ವಾಲ್ ಅವರ ತಂದೆ ಹರ್ವೀರ್ ಸಿಂಗ್ ಅವರು ಮಾದ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ, ನನ್ನ ಮಗಳ ಕುರಿತಾಗಿ ಅಂತಹ ಮಾತುಗಳನ್ನು ಕೇಳಿದಾಗ ಬೇಸರವಾಯಿತು. ಆಕೆ ದೇಶದ ಪರವಾಗಿ ಆಟವನ್ನು ಆಡಿ ಪದಕಗಳನ್ನು ಗೆದ್ದಿದ್ದಾಳೆ. ದೇಶಕ್ಕೆ ಕೀರ್ತಿಯನ್ನು ತಂದಿದ್ದಾಳೆ. ನಟ ಸಿದ್ಧಾರ್ಥ್ ದೇಶಕ್ಕಾಗಿ ಏನು ಮಾಡಿದ್ದಾರೆ?? ಎಂದು ನೇರವಾಗಿ ಪ್ರಶ್ನೆಯನ್ನು ಮಾಡಿದ್ದರು. ನೆಟ್ಟಿಗರು ಸಹಾ ನಟ ಸಿದ್ಧಾರ್ಥ್ ಗೆ ತಲೆ ಕೆಟ್ಟಿದೆ ಎಂದು ಟೀ ಕೆ ಗಳನ್ನು ಮಾಡಿದ್ದರು.