ಬಹಳ ವಿಶೇಷ ರೀತಿಯಲ್ಲಿ ಸಿಹಿ ಸುದ್ದಿಯನ್ನು ಶೇರ್ ಮಾಡಿಕೊಂಡ ನಟಿ ಬಿಪಾಶ ಬಸು: ಫೋಟೋ ವೈರಲ್

Entertainment Featured-Articles Movies News

ಸಿನಿಮಾ‌ ಹಾಗೂ ಸೀರಿಯಲ್ ಸೆಲೆಬ್ರಿಟಿಗಳಲ್ಲಿ ನಟಿಯರು ವಿವಾಹದ ನಂತರ ತಾವು ಗರ್ಭಿಣಿಯಾದಾಗಿನಿಂದಲೂ ವಿಶೇಷ ಫೋಟೋ ಶೂಟ್ ಗಳನ್ನು ಮಾಡಿಸಿ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಂಡು, ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿವುದು ಒಂದು ಸಂಭ್ರಮದ ವಿಷಯವಾಗಿದೆ. ಗರ್ಭಿಣಿಯರಾದ ನಟಿಯರು ವೈವಿದ್ಯಮಯ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿ, ಖುಷಿಯ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಇನ್ನು ಇತ್ತೀಚಿಗೆ ಬಾಲಿವುಡ್ ನಟಿ ಬಿಪಾಶ ಬಸು ಅವರ ಪ್ರೆಗ್ನೆಸಿ ವಿಚಾರವಾಗಿ ಸುದ್ದಿಗಳಾಗಿದ್ದವು. ನಟಿ ಗರ್ಭ ಧರಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಅಧಿಕೃತ ಮೊಹರು ಬಿದ್ದಿರಲಿಲ್ಲ.

ಈಗ ಎದ್ದಿದ್ದ ಎಲ್ಲಾ ಸುದ್ದಿಗಳಿಗೂ ಸಹಾ ಸ್ಪಷ್ಟ ಉತ್ತರ ನೀಡುವಂತೆ ನಟಿ ಬಿಪಾಶ ಬಸು ಹಾಗೂ ಅವರ ಪತಿ ಕರಣ್ ಸಿಂಗ್ ಗ್ರೋವರ್ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಬಿಪಾಶ ಬಸು ಗರ್ಭಿಣಿಯಾಗಿರುವ ವಿಚಾರವನ್ನು ಅಧಿಕೃತವಾಗಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಬಿಪಾಶ ಬಸು ತಮ್ಮ‌ ಇನ್ಸ್ಟಾಗ್ರಾಂ ಖಾತೆಯಲ್ಲಿ ತಾವು ಗರ್ಭಿಣಿಯಾಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡು, ಅದರ ಜೊತೆಗೆ ತಮ್ಮ ಸಂತೋಷವನ್ನು, ತಮ್ಮ ಮನಸ್ಸಿನ ಮಾತುಗಳನ್ನು ಸಹಾ ಬರೆದುಕೊಂಡು ಎಲ್ಲರಿಗೂ ಸಿಹಿ ಸುದ್ದಿ ನೀಡಿದ್ದಾರೆ.

ನಟಿಯು ತಮ್ಮ ಪೋಸ್ಟ್‌ ನಲ್ಲಿ, ಹೊಸ ಸಮಯ, ಹೊಸ ಹಂತ, ಹೊಸ ಬೆಳಕು. ನಮ್ಮ ಜೀವನಕ್ಕೆ ಹೊಸ ಛಾಯೆಯೊಂದನ್ನು ಸೇರಿಸಿಕೊಳ್ಳುತ್ತಿದ್ದೇವೆ. ನಾವು ಹಿಂದೆಂದಿಗಿಂತಲೂ ಹೆಚ್ಚು ಸಂಪೂರ್ಣವಾಗಿದ್ದೇವೆ. ಜೀವನವನ್ನು ಪ್ರತ್ಯೇಕವಾಗಿ ಆರಂಭಿಸಿದ ನಾವು ಒಬ್ಬರೊನ್ನಬ್ಬರು ಭೇಟಿಯಾದೆವು, ನಂತರ ನಾವು ಇಬ್ಬರಾದೆವು. ಇಬ್ಬರಿಗಾಗಿ ಬಹಳಷ್ಟು ಪ್ರೀತಿ ಇತ್ತು, ಆದರೆ ಇದು ನ್ಯಾಯವಲ್ಲ, ಎನಿಸಿ ಈಗ ಇಬ್ಬರು ಮೂವರಾಗಲು ಹೊರಟಿದ್ದೇವೆ. ನಮ್ಮ ಪ್ರೀತಿಯ ಸೃಷ್ಟಿ, ನಮ್ಮ ಮಗು ಶೀಘ್ರದಲ್ಲೇ ನಮ್ಮನ್ನು ಸೇರಲಿದ್ದು , ನಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚು ಮಾಡಲಿದೆ.

ನಿಮಗೆಲ್ಲರಿಗೂ ಧನ್ಯವಾದಗಳು, ನಿಮ್ಮ ಬೇಷರತ್ತಾದ ಪ್ರೀತಿ, ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳು ಯಾವಾಗಲೂ ನಮ್ಮೊಂದಿಗೆ ಇರುತ್ತವೆ ಎಂದು ಬರೆದುಕೊಂಡಿರುವ ನಟಿ ಬಿಪಾಶ ಬಸು ಅವರು ತಮ್ಮ ಜೀವನಕ್ಕೆ ಆಗಮಿಸುತ್ತಿರುವ ಹೊಸ ಸಂತೋಷದ ವಿಚಾರವನ್ನು ಎಲ್ಲರೊಟ್ಟಿಗೆ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಫೋಟೋಗಳಲ್ಲಿ ಅವರ ಪತಿ ನಟ ಕರಣ್ ಸಿಂಗ್ ಗ್ರೋವರ್ ಸಹಾ ಜೊತೆಯಾಗಿ ಇರುವುದನ್ನು ನಾವು ನೋಡಬಹುದಾಗಿದೆ. ನಟಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ನಟಿಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published.