ಬಹಳ ದಿನಗಳ ನಂತರ ಮಕ್ಕಳೊಡನೆ ಖುಷಿ ಪಟ್ಟ ಶಿಲ್ಪಾ ಶೆಟ್ಟಿ: ಎಲ್ಲಾ ಶ್ರೀ ಗಣೇಶನ ಕೃಪೆ ಎಂದ ಅಭಿಮಾನಿಗಳು

Written by Soma Shekar

Published on:

---Join Our Channel---

ಗಣೇಶ ಚತುರ್ಥಿ ಇಂದು, ಗಣೇಶನ ಆಗಮನ ಎಂದರೆ ಅದು ವಿಘ್ನ ಗಳನ್ನು ನಿವಾರಿಸಿ, ತನ್ನ ಆರಾಧನೆ ಮಾಡುವವರ ಸಂಕಷ್ಟಗಳನ್ನು ನಿವಾರಣೆ ಮಾಡಿ, ಜೀವನದಲ್ಲಿ ಸುಖ ಸಮೃದ್ಧಿ ಯನ್ನು ಕರುಣಿಸುವನು ಎನ್ನುವ ನಂಬಿಕೆಯಿಂದಲೇ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ, ಭಕ್ತಿ ಶ್ರದ್ಧೆಗಳಿಂದ ಆರಾಧನೆಯನ್ನು ಮಾಡಲಾಗುವುದು. ಈ ಬಾರಿ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಗಣೇಶ ಚತುರ್ಥಿ ನಿಜಕ್ಕೂ ಬಹಳ ವಿಶೇಷವಾಗಿದೆ. ಬಹಳ ದಿನಗಳ ನಂತರ ಶಿಲ್ಪಾ ಶೆಟ್ಟಿ ಅವರು ಎಲ್ಲಾ ನೋವನ್ನು ಮರೆತು ತಮ್ಮ ಇಬ್ಬರು ಮಕ್ಕಳೊಂದಿಗೆ ಗಣೇಶ ನ ಆರಾಧನೆ ಮಾಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಅವರ ಜೀವನದಲ್ಲಿ ಇತ್ತೀಚೆಗೆ ಆದ ಬೆಳವಣಿಗೆ ಗಳು ಎಲ್ಲರಿಗೂ ತಿಳಿದೇ ಇದೆ‌. ಅವರ ಪತಿ ಪ್ರಕರಣವೊಂದರ ಪ್ರಮುಖ ಭಾಗವಾಗಿದ್ದಾರೆ ಎನ್ನುವ ಕಾರಣಕ್ಕೆ ನ್ಯಾಯಾಂಗ ಬಂಧನದಲ್ಲಿದ್ದು ,ಇನ್ನು ಸಹಾ ಅವರಿಗೆ ಜಾಮೀನು ಸಿಕ್ಕಿಲ್ಲ‌. ಅದೂ ಅಲ್ಲದೇ ಶಿಲ್ಪಾ ಶೆಟ್ಟಿ ಅವರ ಪತಿ ಅ ರೆ ಸ್ಟ್ ಆದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಶಿಲ್ಪಾ ಅವರನ್ನು ಸಹಾ ಟ್ರೋಲ್ ಮಾಡಲಾಗಿತ್ತು. ತನಿಖೆಯ ವೇಳೆ ಅವರನ್ನು ಸಹಾ ವಿಚಾರಣೆ ಮಾಡಲಾಗಿತ್ತು.

ಈ ಘಟನೆಯ ನಂತರ ಶಿಲ್ಪಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾಗಳಿಂದ, ಮಾದ್ಯಮಗಳಿಂದ ಹಾಗೂ ತಾವು ತೊಡಗಿಕೊಂಡಿದ್ದ ಸಿನಿಮಾ ಹಾಗೂ ಟಿವಿ ಪ್ರಾಜೆಕ್ಟ್ ಗಳಿಂದಲೂ ಸಹಾ ಕೆಲವು ಸಮಯ ದೂರ ಉಳಿದಿದ್ದರು. ಆದರೆ ಅನಂತರ ಸ್ವಲ್ಪ ಸಮಯದ ನಂತರ ಅವರು ಧೈರ್ಯ ತಂದು ಕೊಂಡು, ಎಲ್ಲದನ್ನು ಮೆಟ್ಟಿ ಮುಂದಡಿ ಇಡಲು ನಿರ್ಧಾರ ಮಾಡುವ ಮೂಲಕ ಮತ್ತೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾದರು.

ಇದಾದ ಕೆಲವೇ ದಿನಗಳಲ್ಲಿ ಮತ್ತೆ ಟಿವಿ ಕಾರ್ಯಕ್ರಮಕ್ಕೂ ವಾಪಸಾದರು. ಅಲ್ಲದೇ ಕೆಲವೇ ದಿನಗಳ ಹಿಂದೆ ಶಿಲ್ಪಾ ಇನ್ನು ಮುಂದೆ ಪತಿಯಿಂದ ದೂರವಿರುವ ನಿರ್ಧಾರವನ್ನು ಮಾಡಲಿದ್ದಾರೆ, ರಾಜ್ ಕುಂದ್ರಾ ಜೈ ಲಿನಿಂದ ಹೊರ ಬಂದ ಕೂಡಲೇ ಆ ವಿಷಯ ಮಾತನಾಡಲಿದ್ದಾರೆ ಎನ್ನುವ ಸುದ್ದಿಗಳು ಕೂಡಾ ಸದ್ದು ಮಾಡಿದ್ದವು. ಈಗ ಇವೆಲ್ಲವುಗಳ ನಡುವೆ ಮತ್ತೊಂದು ಖುಷಿಯ ವಿಷಯವನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ.

ಹೌದು ಇಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರು ಮನೆಗೆ ಮಂಗಳ ಮೂರ್ತಿ ಗಣೇಶನನ್ನು ತಂದು, ಪ್ರತಿಷ್ಠಾಪನೆ ಮಾಡಿದ್ದಾರೆ. ಇಂದು ಅವರು ಗಣೇಶ ಮೂರ್ತಿಯನ್ನು ತರುವ ವಿಡಿಯೋ ಗಳು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಅದರ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಗಣೇಶ ಮೂರ್ತಿಯನ್ನು ಪೂಜೆ ಮಾಡಿ ಮಕ್ಕಳ ಜೊತೆ ಸಂಭ್ರಮಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶಿಲ್ಪಾ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮಂಗಳ ಮೂರ್ತಿಯ ಮುಂದೆ ತಮ್ಮ ಇಬ್ಬರು ಮಕ್ಕಳೊಡನೆ ಕುಳಿತಿರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶಿಲ್ಪಾ ಹಂಚಿಕೊಂಡ ಫೋಟೋಗಳನ್ನು ನೋಡಿದ ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಅವರಿಗೆ ಹಬ್ಬದ ಶುಭಾಶಯವನ್ನು ಕೋರುತ್ತಿದ್ದಾರೆ.

Leave a Comment