ಬಹಳ ದಿನಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ-ರಕ್ಷಿತ್ ಶೆಟ್ಟಿ

Entertainment Featured-Articles News
80 Views

ರಶ್ಮಿಕಾ ಮಂದಣ್ಣ ಹಾಗೂ ಸ್ಯಾಂಡಲ್ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಹೆಸರು ಕೇಳಿದೊಡನೆ ಒಂದಷ್ಟು ಹಿಂದಿನ ವಿಚಾರಗಳು ನಮ್ಮ ಆಲೋಚನೆಯಲ್ಲಿ ಸುಳಿಯುವುದು ಸಹಜ. ಸ್ವತಃ ನಟ ಮತ್ತು ನಟಿ ಇಬ್ಬರೂ ಹಳೆಯದೆಲ್ಲವನ್ನೂ ಅಲ್ಲೇ ಬಿಟ್ಟು ಮುಂದೆ ಬಂದಿದ್ದರು ಸಹಾ ಜನರಿಂದ, ಅಭಿಮಾನಿಗಳಿಂದ ವಿಶೇಷವಾಗಿ ನೆಟ್ಟಿಗರಿಂದ ಮರೆಯಲು ಸಾಧ್ಯವಾಗುವುದಿಲ್ಲ ಎನ್ನುವಂತಿದೆ. ಇನ್ನು ಟ್ರೋಲ್ ಮಾಡುವವರಂತೂ ಆ ವಿಷಯವನ್ನು ಬಿಡುವುದ ಒಂದರ್ಥದಲ್ಲಿ ಅಸಾಧ್ಯ ಎಂದರೂ ಸಹಾ ತಪ್ಪಾಗಲಾರದುಮ

ಬಹಳ ದಿನಗಳ ನಂತರ ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಡುವಿನ ಮನಸ್ತಾಪದ ನಂತರ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಎಲ್ಲೂ ಕೂಡಾ ಜೊತೆಯಾಗಿ ಕಂಡಿರಲಿಲ್ಲ. ಅಲ್ಲದೇ ಅವರ ನಡುವೆ ನಡೆದಿದ್ದ ಘಟನೆಯ ನಂತರ ಅವರಿಬ್ಬರೂ ಕೂಡಾ ತಮ್ಮ ನಡುವೆ ಒಂದು ಅಂತರವನ್ನು ಕಾಯ್ದುಕೊಂಡಿದ್ದರು. ಈಗ ಇವೆಲ್ಲವುಗಳ ನಂತರ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಬಾರಿಯ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದಿನಲ್ಲಿ ನಡೆದಿದೆ.‌ ಈ ವೇಳೆ ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರತಿದ್ದು ಅವರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಇನ್ನು ಯಜಮಾನ ಹಾಗೂ ಡಿಯರ್ ಕಾಮ್ರೇಡ್ ಕನ್ನಡ ನಟನೆಗಾಗಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದಕ್ಕಿದೆ. ಸೈಮಟ ಕಾರ್ಯಕ್ರಮವು ಶನಿವಾರ ರಾತ್ರಿ ನಡೆದಿದ್ದು ಈ ವೇಳೆ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಅವರು ತಮ್ಮ ಸಿನಿಮಾ ಅವನೇ ಶ್ರೀಮನ್ನಾರಾಯಣ ದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ವೈವಿಧ್ಯಮಯ ಕಾಮೆಂಟುಗಳನ್ನು ನೀಡುತ್ತಾ ಸಾಗಿದ್ದಾರೆ.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕಪ್ ಆದ ನಂತರ ರಶ್ಮಿಕಾ ಅವರನ್ನು ಈ ವಿಷಯವಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಈ ವಿಷಯದ ಕುರಿತಾಗಿ ರಕ್ಷಿತ್ ಶೆಟ್ಟಿ ಅವರು ಕೂಡಾ ಒಂದೆರಡು ಬಾರಿ ಅಸಮಾಧಾನ ಹೊರಹಾಕಿದ್ದರು. ಟ್ರೋಲ್ ಗಳನ್ನು ಅವರು ಟೀಕೆ ಕೂಡಾ ಮಾಡಿದ್ದುಂಟು. ಆದರೂ ಟ್ರೋಲ್ ಮಾಡುವುದು ಇನ್ನೂ ನಿಂತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

Leave a Reply

Your email address will not be published. Required fields are marked *