“ಬಹಳ ದಿನಗಳಿಂದ ಮುಚ್ಚಿಟ್ಟ ರಹಸ್ಯ ಹೇಳುತ್ತೇನೆ:” ನಟಿ ಸಾಯಿ ಪಲ್ಲವಿ ಮಾಡಿದ ಪೋಸ್ಟ್ ವೈರಲ್

Entertainment Featured-Articles Movies News

2015 ರಲ್ಲಿ ಬಂದ ಮಲೆಯಾಳಂ ಸಿನಿಮಾ ಪ್ರೇಮಂ ಮೂಲಕ ಬೆಳ್ಳಿ ತೆರೆಗೆ ಪರಿಚಯವಾದ ಅಂದಗಾತಿ, ಸಹಜ ಸುಂದರಿ, ನಟನೆ ಮತ್ತು ಡ್ಯಾನ್ಸ್ ನಲ್ಲಿ ತನ್ನ ಛಾಪು ಮೂಡಿಸಿರುವ ನಟಿ ಸಾಯಿ ಪಲ್ಲವಿ. ಮೊದಲ ಸಿನಿಮಾದ ಮೂಲಕವೇ ತನ್ನ ಅದ್ಭುತ ಅಭಿನಯದಿಂದ ಅಭಿಮಾನಿಯಳ ಮೇಲೆ ಜಾದೂ ಮಾಡಿದ ಈ ನಟಿ ಹೆಸರಿಗೆ ಮಲೆಯಾಳಂ ನಟಿ ಆದರೂ ದಕ್ಷಿಣ ಸಿನಿಮಾ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡು ಸ್ಟಾರ್ ನಟಿಯ ಪಟ್ಟವನ್ನು ಪಡೆದುಕೊಂಡು, ಮುಂದೆ ಸಾಗುತ್ತಿದ್ದು, ತನಗಾಗಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.

ಫಿದಾ ಸಿನಿಮಾ ಮೂಲಕ ತೆಲುಗು ಸಿನಿ ರಂಗಕ್ಕೆ ಅಡಿಯಿಟ್ಟ ಸಾಯಿ ಪಲ್ಲವಿ ಅಲ್ಲಿನ ಜನರಿಗೆ ಎಷ್ಟು ಇಷ್ಟವಾದರೆಂದರೆ ಅಲ್ಲಿ ಸಾಯಿ ಪಲ್ಲವಿಯನ್ನು ತೆಲುಗು ಮನೆ ಮಗಳು ಎನ್ನುವ ಹಾಗೆ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಮೆಚ್ಚಿಕೊಂಡರು. ಗ್ಲಾಮರ್ ಗೊಂಬೆಗಳಂತಹ ನಾಯಕಿಯರ ನಡುವೆ ನಟನೆ, ಸಹಜ ಅಂದ ಮತ್ತು ಡ್ಯಾನ್ಸ್ ನಿಂದಲೇ ದೊಡ್ಡ ಅಭಿಮಾನ ಬಳಗ ಪಡೆದಿರುವ ಸಾಯಿ ಪಲ್ಲವಿ ಯನ್ನು ಅಭಿಮಾನಿಗಳು ಲೇಡಿ ಪವನ್ ಕಲ್ಯಾಣ್ ಎಂದೇ ಕರೆಯುತ್ತಾರೆ.

ನಟಿ ಸಾಯಿ ಪಲ್ಲವಿ ಸಿಕ್ಕ ಸಿಕ್ಕ ಪಾತ್ರವನ್ನೆಲ್ಲಾ ಮಾಡುವುದಿಲ್ಲ, ಅನಾವಶ್ಯಕ ಎಕ್ಸ್ ಪೋಸಿಂಗ್ ಗೆ ಮಣೆ ಹಾಕುವುದಿಲ್ಲ, ವಿಪರೀತ ಮೇಕಪ್ ಎಂದರೆ ಅದಕ್ಕೆ ಅನುಮತಿ ನೀಡುವುದಿಲ್ಲ ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಪಾತ್ರಕ್ಕೆ ಪ್ರಾಧಾನ್ಯತೆ ಇಲ್ಲ ಎಂದರೆ ಸಿನಿಮಾ ಮಾಡುವುದಿಲ್ಲ. ಸಾಯಿ ಪಲ್ಲವಿ ಮಾಡುವುದಿಲ್ಲ ಎಂದು ಬಿಟ್ಟ ಪಾತ್ರಗಳನ್ನು ಈಗ ತೆಲುಗಿನಲ್ಲಿ ಸ್ಟಾರ್ ನಟಿಯರಾಗಿರುವವರು ಮಾಡಿರುವುದು ಕೂಡಾ ವಾಸ್ತವದ ವಿಷಯವಾಗಿದೆ.

ಪ್ರಸ್ತುತ ಸಾಯಿ ಪಲ್ಲವಿ ನಟ ರಾಣಾ ಜೊತೆ ನಟಿಸಿರುವ ವಿರಾಟ ಪರ್ವಂ ಸಿನಿಮಾ ತೆರೆಗೆ ಬರಬೇಕಿದೆ. ಈ ಸಿನಿಮಾದ ತನ್ನ ಪಾತ್ರದ ಬಗ್ಗೆ ಯಾವುದೇ ಸುಳಿವನ್ನು ನಟಿ ಇನ್ನೂ ಮಾಡಿಲ್ಲ. ಇವೆಲ್ಲವುಗಳ ನಡುವೆ ಶ್ಯಾಮ್ ಸಿಂಗ್ ರಾಯ್ ನಂತರ ಸಾಯಿ ಪಲ್ಲವಿ ಯಾವುದೇ ಹೊಸ ಸಿನಿಮಾದ ಪ್ರಕಟಣೆ ಮಾಡದೆ, ಎಲ್ಲೂ ಕಾಣಿಸಿಕೊಳ್ಳದೇ ಇರುವ ಕಾರಣ ಗಾಸಿಪ್ ಗಳು ಎದ್ದಿದ್ದು, ಸಾಯಿ ಪಲ್ಲವಿ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿಗಳು ಸಖತ್ ಹರಿದಾಡಿ ಕುತೂಹಲ ಮೂಡಿಸಿದೆ.

ಈಗ ಈ ಎಲ್ಲಾ ಸುದ್ದಿಗಳ ನಡುವೆಯೇ ಸಾಯಿ ಪಲ್ಲವಿ ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಟ್ವಿಟರ್ ನಲ್ಲೊಂದು ಹೊಸ ಟ್ವೀಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ಸಾಯಿ ಪಲ್ಲವಿ. ಟ್ವೀಟ್ ನಲ್ಲಿ ಹಂಚಿಕೊಂಡ ಫೋಟೋದಲ್ಲಿ ಸೀರೆಯುಟ್ಟ, ಬ್ಯಾಗ್ ಒಂದನ್ನು ಹೆಗಲಿಗೆ ಹಾಕಿಕೊಂಡು, ಗಾಳಿಯಲ್ಲಿ ಹಾರುತ್ತಿರುವ ಹಾಗೆ ಕಾಣುವ ಯುವತಿಯನ್ನು ನಾವು ನೋಡಬಹುದಾಗಿದೆ. ಫೋಟೋ ಟ್ವೀಟ್ ಮಾಡಿದ ಸಾಯಿ ಪಲ್ಲವಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

“ಆಕೆ ಬಹಳ ಕಾಲದಿಂದ ಒಂದು ರಹಸ್ಯವನ್ನು ಅಡಗಿಸಿಟ್ಟಿದ್ದಾಳೆ. ನನಗೆ ತಿಳಿದಂತೆ ಮೇ 9 ರಂದು ನಿಮ್ಮನ್ನು ನೋಡಲು ಸಿದ್ಧವಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ ಸಾಯಿ ಪಲ್ಲವಿ. ಈ ಟ್ವೀಟ್ ಮೂಲಕ ನಟಿ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಪ್ರಚಾರ ಕಾರ್ಯ ಆರಂಭವಾಗಿದೆ ಎನ್ನುವ ಸುದ್ದಿ ಈಗ ಹರಿದಾಡಿದೆ. ಹಾಗಾದರೆ ಮದುವೆ ಬಗ್ಗೆ ಬಂದ ಸುದ್ದಿ ಕೂಡಾ ಇದರ ಭಾಗವೇನಾ? ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published. Required fields are marked *