ಬಹಳಷ್ಟು ದುಃಖದಲ್ಲಿ ಅಂತ್ಯಗೊಂಡ ಬಾಲಿವುಡ್ ನ ಅಸಲಿ ಪ್ರೇಮಕಥೆಗಳು ಇವು!!
ಸಿನಿಮಾಗಳಲ್ಲಿ ಜೊತೆ ಜೊತೆಯಲ್ಲಿ ನಟಿಸುತ್ತಲೇ ಅದು ಯಾವಾಗ ಬಾಲಿವುಡ್ ನಟ ನಟಿಯರು ಪ್ರೇಮ ಪಾಶದಲ್ಲಿ ಸಿಲುಕಿ ಬಿಡುತ್ತಾರೋ ಯಾರಿಂದಲೂ ಸಹಾ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ಒಂದೊಂದು ಪಾತ್ರಗಳು ಅವರ ಜೀವನದಲ್ಲಿ ಪ್ರೇಮ ಕಥೆಯನ್ನೇ ಆರಂಭಿಸಿ ಬಿಡುತ್ತವೆ. ನಾವಿಂದು ಬಾಲಿವುಡ್ ನ ಕೆಲವು ಜೋಡಿಗಳ ಬಗ್ಗೆ ಹೇಳಲು ಹೊರಟಿದ್ದೇವೆ, ಈ ಜೋಡಿಗಳ ಬಗ್ಗೆ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಕಾ ಡ್ಗಿ ಚ್ಚಿನಂತೆ ಹಬ್ಬಿ ದೊಡ್ಡ ಸದ್ದು ಮಾಡಿದ್ದ ಕಾಲವೊಂದಿತ್ತು. ಆದರೆ ಈ ಜೋಡಿಗಳ ಪ್ರೇಮಕಥೆಗಳು ಮಾತ್ರ ಸುಖಾಂತ್ಯ ಕಾಣಲಿಲ್ಲ.
ಈ ಜೋಡಿಗಳು ಪ್ರೇಮಿಸಿದ್ದು ಒಬ್ಬರನ್ನು ಆದರೆ ಮದುವೆಯಾಗಿದ್ದು ಇನ್ನೊಬ್ಬರನ್ನು ಎನ್ನುವಂತೆ ಅವರ ಜೀವನವು ನಡೆಯುತ್ತಿದೆ. ಹಾಗಾದರೆ ಬನ್ನಿ ಬಾಲಿವುಡ್ ನಲ್ಲಿ ಸ್ಟಾರ್ ಗಳಾಗಿ ಮಿಂಚಿದ ಈ ಜೋಡಿಗಳ ವಿಫಲ ಪ್ರೇಮ ಕಹಾನಿಗಳು ಹಾಗೂ ಅವರ ನಡುವಿನ ಬ್ರೇಕಪ್ ಕಥೆಗಳನ್ನು ಕುರಿತಾಗಿ ಕೆಲವು ಪ್ರಮುಖ ವಿಷಯಗಳನ್ನು ನಾವು ಇಂದು ತಿಳಿಯೋಣ.
ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ : ಬಾಲಿವುಡ್ ನ ಈ ಜೋಡಿಯ ಪ್ರೇಮಕಥೆ ಬಹಳ ಚರ್ಚಿತ ಪ್ರೇಮಕಥೆಯಾಗಿತ್ತು. ಬರೋಬ್ಬರಿ ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಈ ಜೋಡಿ, ಟಶನ್ ಮತ್ತು ಜಬ್ ವಿ ಮೆಟ್ ಸಿನಿಮಾ ಜೊತೆಯಾಗಿ ಮಾಡುವಾಗ ಪ್ರೇಮದಲ್ಲಿ ಬಿದ್ದಿದ್ದರು. ಆದರೆ ಕೆಲವು ಕಾರಣಗಳಿಂದಾಗಿ ಅವರ ನಡುವಿನ ಪ್ರೇಮ ಮುಂದುವರೆಯಲಿಲ್ಲ. ಬ್ರೇಕಪ್ ಆಗಿ ಹೋಯ್ತು. ಇಬ್ಬರಿಗೂ ಬೇರೆಯವರ ಜೊತೆ ವಿವಾಹ ಕೂಡಾ ಆಗಿ ಹೋಗಿದೆ..
ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ : ಹಮ್ ದಿಲ್ ದೇ ಚುಕೇ ಸನಮ್ ಸಿನಿಮಾ ಶೂಟಿಂಗ್ ವೇಳೆ ಸಲ್ಮಾನ್ ಹಾಗೂ ಐಶ್ವರ್ಯ ರೈ ನಡುವೆ ಪ್ರೇಮಾಂಕುರವಾಗಿತ್ತು. ಮಾದ್ಯಮ ವರದಿಗಳ ಪ್ರಕಾರ ಸಲ್ಮಾನ್ ಖಾನ್ ಅವರ ಹಿಂ ಸಾ ಪ್ರವೃತ್ತಿಯಿಂದ ಬೇಸತ್ತ ನಟಿ ಐಶ್ವರ್ಯ ಅವರಿಂದ ದೂರವಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಐಶ್ವರ್ಯ ಅವರ ಪೋಷಕರು ಸಲ್ಮಾನ್ ಖಾನ್ ವಿ ರು ದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಂಗನಾ ರಣಾವತ್ ಮತ್ತು ಆದಿತ್ಯ ಪಂಚೋಲಿ : ಈ ಜೋಡಿಯ ಪ್ರೇಮ ಕಥೆ ಕೂಡಾ ರಹಸ್ಯವಾಗಿ ಉಳಿದಿಲ್ಲ. ಇವರು ಪ್ರೇಮದಲ್ಲಿ ಎಷ್ಟು ಮುಳುಗಿದ್ದರು ಎಂದರೆ ಕೆಲವು ಕಾಲ ಲಿವಿನ್ ರಿಲೇಶಿಪ್ ನಲ್ಲಿ ಇದ್ದರು. ಮಾದ್ಯಮಗಳ ವರದಿಯ ಪ್ರಕಾರ ಸಂದರ್ಭವೊಂದರಲ್ಲಿ ಆದಿತ್ಯ ಪಂಚೋಲಿ ಕಂಗನಾ ಮೇಲೆ ಕೈ ಮಾಡಿದ್ದರಿಂದ ಅವರ ನಡುವೆ ಬಿರುಕು ಮೂಡಿದ್ದರಿಂದ, ಅವರು ದೂರ ದೂರವಾದರು ಎನ್ನಲಾಗಿದೆ.
ಸೂರಜ್ ಪಂಚೋಲಿ ಮತ್ತು ಜಿಯಾ ಖಾನ್ : ಸೂರಜ್ ಹಾಗೂ ದಿವಂಗತ ನಟಿ ಜಿಯಾ ಖಾನ್ ಪ್ರೇಮ ಕಹಾನಿ ದುಃ ಖಾಂತ್ಯವಾಯಿತು. ಜಿಯಾ ಆ ತ್ಮ ಹ ತ್ಯೆ ಮಾಡಿಕೊಂಡರು. ಆಕೆಯ ಮನೆಯಲ್ಲಿ ಡೆ ತ್ ನೋ ಟ್ ಕೂಡಾ ಸಿಕ್ಕಿತ್ತು. ಈ ಪತ್ರದಲ್ಲಿ ಆಕೆ ತನ್ನ ಎಲ್ಲಾ ನೋವು ಹಾಗೂ ದುಃ ಖಕ್ಕೆ ಕಾರಣ ಸೂರಜ್ ಪಂಚೋಲಿ ಎಂದು ಬರೆದಿದ್ದರು ಎನ್ನಲಾಗಿದೆ.
ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ:
ಈ ಜೋಡಿಯ ನಡುವಿನ ಪ್ರೇಮಕಥೆ ಹಾಗೂ ಬ್ರೇಕ್ ಅಪ್ ಗಳು ಇಂದು ಕೂಡಾ ಆಗಾಗ ಸುದ್ದಿಯಾಗುತ್ತದೆ.
ಬಚ್ನಾ ಏ ಹಸೀನೋ ಸಿನಿಮಾ ಸೆಟ್ ನಲ್ಲಿ ಇವರ ನಡುವೆ ಪ್ರೇಮಾಂಕುರವಾಯಿತು. ಆದರೆ ಅವರ ನಡುವಿನ ಪ್ರೇಮ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ ರಣಬೀರ್ ಅವರ ಜೀವನದಲ್ಲಿ ಕತ್ರೀನಾ ಆಗಮನದಿಂದ ರಣಬೀರ್ ದೀಪಿಕಾ ಪಡುಕೋಣೆಯಿಂದ ದೂರಾದರು.
ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ : ಈ ಜೋಡಿಯ ಪ್ರೇಮ ಕಥೆಯಿಂದ ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ಹೃದಯಕ್ಕೆ ಘಾಸಿಯನ್ನುಂಟು ಮಾಡಿತ್ತು. ಆದರೆ ರಣಬೀರ್ ಮತ್ತು ಕತ್ರಿನಾ ನಡುವಿನ ಪ್ರೇಮ ಕಥೆ ಹೆಚ್ಚು ದಿನ ನಡೆಯಲಿಲ್ಲ. ರಣಬೀರ್ ಲೈಫ್ ನಲ್ಲಿ ಆಲಿಯಾ ಭಟ್ ಪ್ರವೇಶ ನೀಡಿದರು. ಇನ್ನು ಕತ್ರೀನಾ ಮದುವೆ ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ಜೊತೆ ನಡೆದಿದೆ.
ಪ್ರಿಯಾಂಕ ಚೋಪ್ರಾ ಮತ್ತು ಹರ್ಮನ್ ಭವೇಜಾ: ಲವ್ ಸ್ಟೋರಿ 2050 ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ ಈ ಜೋಡಿ ಆಗಲೇ ಪ್ರೇಮಕ್ಕೆ ಬಿದ್ದರು. ಆದರೆ ಇವರ ಈ ಪ್ರೇಮ ಕಹಾನಿ ಮೂರು ವರ್ಷಗಳ ನಂತರ ಮುರಿದು ಬಿತ್ತು. ಪ್ರಿಯಾಂಕ ಹಾಲಿವುಡ್ ಕಡೆ ಪಯಣ ಬೆಳೆಸಿ, ನಿಕ್ ಜೋನಸ್ ಜೊತೆ ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟರು.