ಬಹಳಷ್ಟು ಕಾತರರಾಗಿದ್ದ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕಡೆಗೂ ಸಿಕ್ತು ಗುಡ್ ನ್ಯೂಸ್

Written by Soma Shekar

Published on:

---Join Our Channel---

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಎಂದರೆ ತಿಳಿಯದವರೇ ಇಲ್ಲ. ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಮಾಗಳು ಎಂದರೆ ಅಭಿಮಾನಿಗಳಿಗೆ ಹಬ್ಬ. ಅದರಲ್ಲೂ ಅನುಷ್ಕಾ ತಮ್ಮ ಪಾತ್ರಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ನಟಿ ಅನುಷ್ಕಾ ಬಾಹುಬಲಿ ನಂತರ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ ಅದೇಕೋ ಎರಡೂ ಸಿನಿಮಾಗಳು ಕೂಡಾ ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆಯುವುದು ಸಾಧ್ಯವಾಗಲಿಲ್ಲ. ಅನುಷ್ಕಾ ಅವರ ಭಾಗಮತಿ ಸ್ವಲ್ಪ ಸದ್ದು ಮಾಡಿದರೂ, ನಿಶ್ಯಬ್ದಂ ಮಾತ್ರ ಸೋತಿತು.

ಇದಾದ ನಂತರ ಅನುಷ್ಕಾ ಶೆಟ್ಟಿ ಅವರು ಯಾವುದೇ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಒಂದು ಹೊಸ ಹಿಟ್ ಸಿನಿಮಾದ ನಿರೀಕ್ಷೆಯಲ್ಲಿರುವ ಅನುಷ್ಕಾ ಪಾತ್ರಗಳ ವಿಚಾರದಲ್ಲಿ ಬಹಳ ಚ್ಯೂಸಿಯಾಗಿದ್ದಾರೆ. ಇದೀಗ ಟಾಲಿವುಡ್ ಅಂಗಳದಿಂದ ಹೊರ ಬಂದಿರುವ ಸುದ್ದಿಗಳ ಪ್ರಕಾರ ನಟಿ ಅನುಷ್ಕಾ ಇದೀಗ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಜೊತೆಗೆ ನಟಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ವಿಜಯ್ ಸೇತುಪತಿ ಮತ್ತು ಅನುಷ್ಕಾ ಶೆಟ್ಟಿ ಇಬ್ಬರೂ ಕೂಡಾ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿದ್ದಾರೆ. ಇಬ್ಬರೂ ಜೊತೆಗೆ ನಟಿಸಿದರೆ ನೋಡಬೇಕೆನ್ನುವ ಆಸೆ ಅಭಿಮಾನಿಗಳದ್ದು.

ಈ ಹಿಂದೆ ಒಂದು ನಿರ್ಮಾಣ ಸಂಸ್ಥೆಯೊಂದರ ಸಿನಿಮಾದಲ್ಲಿ ಅನುಷ್ಕಾ ಮತ್ತು ವಿಜಯ್ ಸೇತುಪತಿ ಜೊತೆಗೆ ನಟಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಹರಡಿದ್ದವು. ಆದರೆ ಅನಂತರ ನಟ, ನಟಿ ಇಬ್ಬರೂ ಕೂಡಾ ಇದು ನಿಜವಲ್ಲ, ಕೇವಲ ವದಂತಿಯಷ್ಟೇ ನಾವು ಜೊತೆಗೆ ನಟಿಸುತ್ತಿಲ್ಲ ಎನ್ನುವ ಸ್ಪಷ್ಟನೆ ಯನ್ನು ಅವರು ನೀಡಿದ್ದರು. ಈಗ ಮತ್ತೊಮ್ಮೆ ಈ ಇಬ್ಬರು ಜೊತೆಯಾಗಿ ನಟಿಸುತ್ತಾರೆ ಎನ್ನುವ ಸುದ್ದಿಯೊಂದು ಹೊರ ಬಂದಿದ್ದು, ಸದ್ಯಕ್ಕಂತೂ ಎಲ್ಲರ ಕುತೂಹಲವನ್ನು ಕೆರಳಿಸಿದೆ.

ತಲೈವಿ ಸಿನಿಮಾದ ನಿರ್ದೇಶಕ ಎ.ಎಲ್.ವಿಜಯ್ ಅವರು ಅನುಷ್ಕಾ ಶೆಟ್ಟಿ ಮತ್ತು ವಿಜಯ್ ಸೇತುಪತಿ ಜೋಡಿಯ ಹೊಸ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆನ್ನಲಾಗಿದ್ದು, ಜನವರಿಯಲ್ಲಿ ಈ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲು ವಿಜಯ್ ಯೋಜನೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ಇದೇ ನಿರ್ದೇಶಕನ ಎರಡು ಸಿನಿಮಾಗಳಲ್ಲಿ ಈ ಹಿಂದೆ ಅನುಷ್ಕಾ ನಟಿಸಿದ್ದಾರೆ. ತಾಂಡವಂ ಮತ್ತು ದೈವ ತಿರುಮಗಳ್ ಎನ್ನುವ ಎರಡು ಸಿನಿಮಾಗಳಲ್ಲಿ ಅನುಷ್ಕಾ ನಟಿಸಿದ್ದಾರೆ.

Leave a Comment