ಬಲವಾಯ್ತು ಬಾಯ್ ಕಾಟ್ ಸಾಯಿ ಪಲ್ಲವಿ ಕೂಗು: ವಿರಾಟ ಪರ್ವಂ ಸಿನಿಮಾಕ್ಕೆ ಎದುರಾದ ಸಂಕಷ್ಟ!!

Entertainment Featured-Articles Movies News

ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಎಂದರೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಆದರೆ ಮೊನ್ನೆಯಷ್ಟೇ ನಟಿ ನೀಡಿದ ಒಂದು ಹೇಳಿಕೆಯು ಈಗ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಈ ಬೆನ್ನಲ್ಲೇ ಇಂದು ನಟಿ ಸಾಯಿ ಪಲ್ಲವಿ ಮತ್ತು ತೆಲುಗಿನ ಸ್ಟಾರ್ ನಟ ರಾಣಾ ದಗ್ಗುಬಾಟಿ ಅಭಿನಯದ ಬಹು ನಿರೀಕ್ಷಿತ ವಿರಾಟ ಪರ್ವಂ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾ ನಕ್ಸಲ್ ಹಿನ್ನೆಲೆಯ ಕಥಾಹಂದರವನ್ನು ಇಟ್ಟುಕೊಂಡು ನಿರ್ಮಾಣವಾಗಿರುವ ಕಥೆಯಾಗಿದೆ. ನಕ್ಸಲ್ ಹೋ ರಾ ಟ ದಲ್ಲಿ ಭಾಗಿಯಾದ ಇಬ್ಬರು ಪ್ರೇಮಿಗಳ ಕಥೆಯು ಇದರಲ್ಲಿದೆ. ಅವರು ಶೋ ಷಿ ತ ಸಮಾಜಕ್ಕಾಗಿ ಮಾಡುವ ತ್ಯಾಗವನ್ನು ಜನರ ಮುಂದೆ ಇಡಲಾಗಿದೆ.

ಆದರೆ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಹಿಂದೂ ಪರ ಸಂಘಟನೆಗಳು ಸಿನಿಮಾವನ್ನು ಬಾಯ್ ಕಾಟ್ ಮಾಡುವುದಾಗಿ ಹೇಳಿವೆ. ಹೌದು, ನೆಟ್ಟಿಗರು ಸಹಾ ಸಾಯಿ ಪಲ್ಲವಿ ಸಿನಿಮಾವನ್ನು ಬಾಯ್ ಕಾಟ್ ಮಾಡಿ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ಸಿನಿಮಾದ ಕಂಟೆಂಟ್ ಅಲ್ಲ. ಬದಲಾಗಿ ನಟಿ ಸಾಯಿ ಪಲ್ಲವಿ ನೀಡಿದ ಒಂದು ಹೇಳಿಕೆಯಾಗಿದೆ. ಸಾಯಿ ಪಲ್ಲವಿ ಅವರು ಧರ್ಮದ ವಿಚಾರವಾಗಿ ಆಡಿದ ಮಾತು ಕಿ ಚ್ಚ ನ್ನು ಹೊತ್ತಿಸಿದೆ.

ನಟಿ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ,
ಕಾಶ್ಮೀರದಲ್ಲಿ ನಡೆದ ಪಂಡಿತರ ನ ರ ಮೇ ಧ ಮತ್ತು ಲಾಕ್ ಡೌನ್ ವೇಳೆಯಲ್ಲಿ ಗೋವನ್ನು ತಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಜೈ ಶ್ರೀರಾಮ್ ಎಂದು ಕೂಗುತ್ತಾ ಮಾಡಿದ ಹ ತ್ಯೆ ಎರಡೂ ಒಂದೇ ಎನ್ನುತ್ತಾ, ಧರ್ಮದ ಹೆಸರಿನಲ್ಲಿ ಮಾಡುವ ಹ ತ್ಯೆಯನ್ನು ಸಹಿಸಿಕೊಳ್ಳಬಾರದು ಎನ್ನುವ ಮಾತನ್ನು ಹೇಳಿದ್ದು, ಯು ದ್ಧ ಎನ್ನುವುದು ಸಮಬಲ ಇರುವವರ ನಡುವೆ ನಡೆಯಬೇಕೇ ಹೊರತು ಹೆಚ್ಚು ಸಂಖ್ಯೆಯಲ್ಲಿ ಇರುವವರು ಕಡಿಮೆ ಸಂಖ್ಯೆಯಲ್ಲಿ ಇರುವವರ ಮೇಲೆ ಬಲ ಪ್ರಯೋಗ ಮಾಡಬಾರದು ಎಂದಿದ್ದರು.

ನಾನು ಸಮ ಸಮಾಜದ ಕನಸನ್ನು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸವನ್ನು ಮಾಡುವುದಿಲ್ಲ. ಜಾತಿ ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು. ಧರ್ಮಗಳ ಕಚ್ಚಾಟವೇಕೆ ಎಂದಿರುವ ಅವರು ಇದೆಲ್ಲಾ ಯಾರದೋ ಲಾಭಕ್ಕಾಗಿ ನಡೆಯುತ್ತಿದೆ ಎಂದು ಸಾಯಿ ಪಲ್ಲವಿ ಅವರು ಹೇಳಿದ ನಂತರ ಅದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬಂದಿದ್ದು, ಕೆಲವು ಸಂಘಟನೆಗಳು ಹಾಗೂ ನೆಟ್ಟಿಗರು ಸಾಯಿ ಪಲ್ಲವಿ ಸಿನಿಮಾವನ್ನು ಬಾಯ್ ಕಾಟ್ ಮಾಡಿ ಎಂದಿದ್ದಾರೆ.

Leave a Reply

Your email address will not be published.