ಬಲವಾದ ಕಾರಣ ನೀಡಿ ಹಿಂದೂ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ ನಿರ್ದೇಶಕ ಅಲಿ ಅಕ್ಬರ್

0 1

ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು ಹೆಲಿಕಾಪ್ಟರ್ ದು ರಂ ತದಲ್ಲಿ ಮೃತಪಟ್ಟರು. ಈ ನಿಧನದ ನಂತರ ಇಡೀ ದೇಶ ಅವರಿಗಾಗಿ ಕಂಬನಿ ಮಿಡಿದ ಶೋಕಾಚರಣೆಯನ್ನು ಮಾಡಿ ಶ್ರದ್ಧಾಂಜಲಿ ಅರ್ಪಿಸಿ, ಅಂತಿಮ ನಮನವನ್ನು ಸಲ್ಲಿಸುವಾಗಲೇ ಕೆಲವರು ಈ ನೋವಿನ ಘಟನೆಯನ್ನು ಸಂಭ್ರಮಿಸಿದರು. ಆದರೆ ಇಂತಹುದೊಂದು ಘಟನೆಯಿಂದ ಮನನೊಂದ ನಿರ್ದೇಶಕರೊಬ್ಬರು ತಮ್ಮ ಪತ್ನಿ ಸಹಿತವಾಗಿ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದಾರೆ. ಹೌದು ಇಂತಹದೊಂದು ನಿರ್ಧಾರವನ್ನು ಮಾಡಿರುವುದು ಮಲೆಯಾಳಂ ನಿರ್ದೇಶಕ ಅಲಿ ಅಕ್ಬರ್.

ರಾಷ್ಟ್ರವಿರೋಧಿ ಪ್ರಕ್ರಿಯ ಮಾಡಿದವರನ್ನು ಮುಸ್ಲಿಂ ಧರ್ಮದ ನಾಯಕರು ವಿ ರೋ ಧಿಸುವುದಿಲ್ಲ, ಆದ್ದರಿಂದ ನಾನು ಈ ಧರ್ಮದಲ್ಲಿ ನಂಬಿಕೆ ಕಳೆದುಕೊಂಡಿರುವೆ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅವರ ಈ ವೀಡಿಯೋ ಗೆ ಸಾಕಷ್ಟು ವಿ ರೋ ಧಗಳು ವ್ಯಕ್ತವಾಗಿತ್ತು. ಈ ವಿಡಿಯೋ ಫೇಸ್ ಬುಕ್ ನಿಂದ ಡಿಲೀಟ್ ಆಗಿದೆ. ಆದರೆ ವಾಟ್ಸ್ಅಪ್ ಗಳಲ್ಲಿ ಹರಿದಾಡಿದೆ. ಅಲಿ ಅಕ್ಬರ್ ಹಿಂದೂ ಧರ್ಮಕ್ಕೆ ಮತಾಂತರ ಆಗಿರುವುದನ್ನು ಅನೇಕರು ನಿಂದಿಸುತ್ತಿದ್ದಾರೆ.

ತಮ್ಮನ್ನು ನಿಂದನೆ ಮಾಡಿದವರಿಗೆ ತಮ್ಮದೇ ಶೈಲಿಯಲ್ಲಿ ಅಲಿ ಅಕ್ಬರ್ ಅವರು ಉತ್ತರವನ್ನು ನೀಡಿದ್ದಾರೆ. ನಾನು ಜನ್ಮದಿಂದ ತೊಟ್ಟ ಉಡುಗೆ ಕಿತ್ತು ಎಸೆಯುತ್ತಿದ್ದೇನೆ. ಇಂದಿನಿಂದ ನಾನು ಮುಸ್ಲಿಂ ಆಗಿರುವುದಿಲ್ಲ, ನಾನೊಬ್ಬ ಭಾರತೀಯ. ಭಾರತದ ವಿ ರು ದ್ಧ ನಗುವ ಇಮೋಜಿ ಗಳನ್ನು ಕಳಿಸುವವರಿಗೆ ಇದು ನನ್ನ ಉತ್ತರ. ರಾವತ್ ಅವರ ಸಾವನ್ನು ಸಂಭ್ರಮಿಸುವುದರ ಜೊತೆಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಅನೇಕ ರಾಷ್ಟ್ರ ವಿ ರೋ ಧಿ ಚಟುವಟಿಕೆಗಳು ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದವರಲ್ಲಿ ಬಹಳಷ್ಟು ಜನ ಮುಸ್ಲಿಂ ರಾಗಿದ್ದು, ರಾವತ್ ಅವರು ಪಾಕಿಸ್ತಾನದ ವಿ ರು ದ್ಧ ಬಹಳಷ್ಟು ಕ್ರಮಗಳನ್ನು ಕೈಗೊಂಡಿದ್ದರು. ಅದೇ ಕಾರಣದಿಂದ ಅನೇಕರು ಈ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ರಾವತ್ ಅವರನ್ನು ಹಾಗೂ ದೇಶವನ್ನು ಅಗೌರವಿಸಿದ್ದಾರೆ. ಇದರ ಬಗ್ಗೆ ಮುಸ್ಲಿಂ ಧರ್ಮದ ನಾಯಕರು ಏನೂ ಹೇಳಿಲ್ಲ, ಹೀಗಾಗಿ ನಾನು ಈ ಧರ್ಮದಲ್ಲಿ ಇರಲು ಬಯಸುವುದಿಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

Leave A Reply

Your email address will not be published.