ಬರೋಬ್ಬರಿ 25 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಈ ಅದ್ಭುತ ಕಲಾವಿದೆ.

Written by Soma Shekar

Published on:

---Join Our Channel---

ನಟಿ ಅರ್ಚನಾ ದಕ್ಷಿಣದ ಸಿನಿ ರಂಗ ಕಂಡ ಅತ್ಯದ್ಭುತ ನಟಿ ಇವರು.‌‌ ತೊಂಬತ್ತರ ದಶಕದಲ್ಲಿ ದಕ್ಷಿಣದ ಸಿನಿಮಾ ರಂಗದಲ್ಲಿ ತನಗಾಗಿ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡ ಈ ನಟಿ ಕನ್ನಡದಲ್ಲಿ ಸಹಾ ಕೆಲವು ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಎರಡು ಸಿನಿಮಾಗಳಲ್ಲಿ ಅವರು ಕನ್ನಡದ ವರನಟ, ಡಾ. ರಾಜ್‌ಕುಮಾರ್ ಅವರ ಜೊತೆಗೆ ನಟಿಸಿದ್ದಾರೆ. ನಟಿ ಅರ್ಚನಾ ಅವರು ಕಮರ್ಷಿಯಲ್ ಪಾತ್ರಗಳ ಬದಲಾಗಿ, ನಟನೆಗೆ ಹಾಗೂ ಪಾತ್ರಕ್ಕೆ ಪ್ರಾಧಾನ್ಯತೆ ಇರುವ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ರಸಿಕರ ಮನಸ್ಸನ್ನು ಗೆದ್ದವರು. ಇದೀಗ ಬರೋಬ್ಬರಿ 25 ವರ್ಷಗಳ ನಂತರ ಮತ್ತೊಮ್ಮೆ ನಟಿ ಅರ್ಚನಾ ಅವರು ಕನ್ನಡ ಸಿನಿಮಾ ರಂಗದ ಕಡೆ ಬರುತ್ತಿದ್ದಾರೆ ಎನ್ನಲಾಗಿದೆ. ಹೌದು ಕೊನೆಯದಾಗಿ 1996 ರಲ್ಲಿ ಹುಲಿಯಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ ಅವರು ಇದೀಗ ಬರೋಬ್ಬರಿ 25 ವರ್ಷಗಳ ನಂತರ ಹೊಂಬಾಳೆ ಫಿಲ್ಮ್ ನಿರ್ಮಾಣದ ಸಿನಿಮಾ ಮೂಲಕ ಮತ್ತೊಮ್ಮೆ ಕನ್ನಡ ಸಿನಿಮಾಕ್ಕೆ ಬರುತ್ತಿದ್ದಾರೆ.

ನಟಿ ಅರ್ಚನಾ ಅವರು ಕಮರ್ಷಿಯಲ್ ಸಿನಿಮಾಗಳಲ್ಲಿ ನಟನೆ ಮಾಡಿಲ್ಲವೆಂದೇ ಹೇಳಬಹುದು. ಅವರು ಸಿನಿಮಾ ರಂಗದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದರು. ಅವರು ನ್ಯಾಷನಲ್ ಅವಾರ್ಡ್ ಬರುವ ಸಿನಿಮಾಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಜ್ಯೂರಿ ತಂಡದಲ್ಲಿ ಅರ್ಚನಾ ಅವರು ಇದ್ದಾರೆ ಎನ್ನುವುದು ವಿಶೇಷ. ಇದೀಗ ನಟಿ ಅರ್ಚನಾ ಅವರು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿರುವ ರಿಷಭ್ ಶೆಟ್ಟಿ ಅವರು ನಟಿಸಿ ನಿರ್ದೇಶನ ಮಾಡಲಿರುವ ಕಾಂತಾರ ಸಿನಿಮಾದಲ್ಲೊಂದು ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಲಿದ್ದಾರೆ ಎನ್ನಲಾಗಿದೆ. ಅರ್ಚನಾ ಅವರು ಅಣ್ಣಾವ್ರ ಜೊತೆಗೆ ಗುರಿ ಹಾಗೂ ಒಂದು ಮುತ್ತಿನ ಕಥೆ ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಮಿಳಿನ ಒಂದು ಸಿನಿಮಾ ಹಾಗೂ ತೆಲುಗಿನ ಒಂದು ಸಿನಿಮಾದಲ್ಲಿನ ತಮ್ಮ ಅಭಿನಯಕ್ಕೆ ಎರಡು ಬಾರಿ ಅತ್ಯುತ್ತಮ ನಟಿಯಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಅರ್ಚನಾ ಅವರು. ಸಂದರ್ಶನವೊಂದರಲ್ಲಿ ಅವರನ್ನು ಏಕೆ ನೀವು ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ತೋರಲಿಲ್ಲ ಎಂದಾಗ ಅವರು ರಾಷ್ಟ್ರ ಪ್ರಶಸ್ತಿ ಪಡೆದಂತಹ ಪಾತ್ರಗಳಲ್ಲಿ ನಟಿಸಿದ ಮೇಲೆ, ಅಂತಹ ಅತ್ಯುತ್ತಮ ಪಾತ್ರಗಳ ನಂತರ ಬೇರೆ ಕಮರ್ಷಿಯಲ್ ಪಾತ್ರಗಳಲ್ಲಿ ನಟಿಸಲು ಮನಸ್ಸು ಒಪ್ಪಲಿಲ್ಲ ಎಂದು ಅವರು ಹೇಳಿದ್ದರು. ಈ ನಟಿ ತಮ್ಮ ತಮಿಳಿನ ವೀಡು ಸಿನಿಮಾಕ್ಕಾಗಿ 1987 ರಲ್ಲಿ, ತೆಲುಗಿನ ದಾಸಿ ಸಿನಿಮಾದ ನಟನೆಗಾಗಿ 1988 ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

Leave a Comment