ಬರೋಬ್ಬರಿ 21 ವರ್ಷಗಳ ನಂತರ ಭಾರತಕ್ಕೆ ಒಲಿದು ಬಂತು ವಿಶ್ವ ಸುಂದರಿ ಕಿರೀಟ
ಒಂದಲ್ಲಾ ಎರಡದಲ್ಲಾ ಇದು ಬರೋಬ್ಬರಿ 21 ವರ್ಷಗಳ ನಂತರ ಭಾರತಕ್ಕೆ ಸಿಕ್ಕ ಗೌರವವಾಗಿದೆ. ಹೌದು ಭಾರತಕ್ಕೆ 21 ವರ್ಷಗಳ ನಂತರ ಮಿಸ್ ಯೂನಿವರ್ಸ್ ಅಥವಾ ವಿಶ್ವ ಸುಂದರಿಯ ಕಿರೀಟ ಒಲಿದು ಬಂದಿದೆ. ಈ ಹಿಂದೆ ಅಂದರೆ 2000 ನೇ ಸಾಲಿನಲ್ಲಿ ಲಾರಾ ದತ್ತ ಮಿಸ್ ಯೂನಿವರ್ಸ್ ಪಟ್ಟವನ್ನು ಅಲಂಕರಿಸಿದ್ದರು. ಅದಾದ ನಂತರ ಬೇರೆ ಯಾವ ಭಾರತೀಯ ಯುವತಿಯು ಈ ಪಟ್ಟವನ್ನು ಪಡೆದಿರಲಿಲ್ಲ. ಇನ್ನು ಮೊಟ್ಟ ಮೊದಲು ಮಿಸ್ ಯೂನಿವರ್ಸ್ ಕಿರೀಟ ಧಾರಣೆ ಮಾಡಿದ ಭಾರತೀಯ ಯುವತಿ ಎಂದರೆ ಅದು 1994 ರಲ್ಲಿ ಸುಷ್ಮಿತಾ ಸೇನ್ ಅವರು.
ಭಾರತಕ್ಕೆ ಈ ಹಲವು ಬಾರಿ ಮಿಸ್ ವರ್ಲ್ಡ್ ಕಿರೀಟಗಳು ಈಗಾಗಲೇ ಆರು ಬಾರಿ ದಕ್ಕಿದೆ. ಆದರೆ ಮಿಸ್ ಯೂನಿವರ್ಸ್ ಮಾತ್ರ ಈ ಸಲದ ವಿಜಯವನ್ನು ಸೇರಿಸಿದರೆ ಮೂರನೇ ಬಾರಿ ಭಾರತಕ್ಕೆ ಈ ಗೌರವ ದಕ್ಕಿದೆ. ಈ ಬಾರಿ 70 ನೇ ವಿಶ್ವ ಸುಂದರಿ ಸ್ಪರ್ಧೆಯು ಇಸ್ರೇಲ್ ನ ಐಲಾಟ್ ನಲ್ಲಿ ನಡೆದಿತ್ತು. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕೂಡಾ ಈ ಬಾರಿ ಈ ಸ್ಪರ್ಧೆಯ ಒಬ್ಬ ಜಡ್ಜ್ ಆಗಿ ಗೌರವ ಆಹ್ವಾನವನ್ನು ಪಡೆದುಕೊಂಡಿದ್ದರು. ಇನ್ನು ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದವರು 21 ವರ್ಷ ವಯಸ್ಸಿನ ಹರ್ನಾಜ್ ಸಂಧು.
ಹರ್ನಾಜ್ ಸಂದು 2021ರ ವಿಶ್ವಸುಂದರಿಯಾಗಿ ಹೊರ ಹೊಮ್ಮುವ ಮೂಲಕ ಭಾರತಕ್ಕೆ ಸಂತೋಷವನ್ನು ನೀಡಿದ್ದಾರೆ. ಇಪ್ಪತ್ತೊಂದು ವರ್ಷಗಳ ನಂತರ ಮತ್ತೊಮ್ಮೆ ಭಾರತಕ್ಕೆ ಈ ಗೌರವವನ್ನು ತಂದುಕೊಟ್ಟಿದ್ದಾರೆ. ಇಸ್ರೇಲ್ ನಲ್ಲಿ ನಡೆದಂತಹ ಈ ಸ್ಪರ್ಧೆಯನ್ನು ಲೈವ್ ಸ್ಟ್ರೀಮ್ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಹರ್ನಾಜ್ ಸಂದು ಅವರಿಗೆ ಸಂಪ್ರದಾಯದಂತೆ 2020 ರ ಮಾಜಿ ವಿಶ್ವಸುಂದರಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಕಿರೀಟಧಾರಣೆ ಮಾಡಿದ್ದಾರೆ.
ಈ ಸ್ಪರ್ಧೆಯಲ್ಲಿ ಹರ್ನಾಜ್ ಸಂದು ಪರಾಗ್ವೆಯ ನಾಡಿಯಾ ಫೆರಾರಾ ಮತ್ತು ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸಾವೆಎ ಯನ್ನು ಹಿಂದಿಕ್ಕಿ ವಿಶ್ವ ಸುಂದರಿ ಪಟ್ಟವನ್ನು ಪಡೆದಿದ್ದಾರೆ. ಇದು ಭಾರತಕ್ಕೆ ದಕ್ಕಿದ ಮೂರನೇ ವಿಶ್ವ ಸುಂದರಿಯ ಪ್ರಶಸ್ತಿಯಾಗಿದೆ. ಸುಶ್ಮಿತಾ ಸೇನ್, ಲಾರಾ ದತ್ತಾ, ಮೊದಲಾದ ಮಾಜಿ ವಿಶ್ವ ಸುಂದರಿಯರು ಹರ್ನಾಜ್ ಅವರಿಗೆ ಶುಭಾಶಯವನ್ನು ಕೋರಿದ್ದಾರೆ.