ಬಾಲಿವುಡ್ ಮಾತ್ರವೇ ಅಲ್ಲದೇ ತನ್ನ ಅಂದ ಹಾಗೂ ಅಭಿನಯದಿಂದ ದಕ್ಷಿಣದ ಸಿನಿ ರಂಗದಲ್ಲೂ ಕೂಡಾ ಪ್ರೇಕ್ಷಕರ ಮನಸ್ಸನ್ನು ಗೆದ್ದವರು ನಟಿ ಸೋನಾಲಿ ಬೇಂದ್ರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ಪ್ರೀತ್ಸೆ, ಪ್ರೀತ್ಸೆ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಚಂದನವನಕ್ಕೂ ಕಾಲಿಟ್ಟಿದ್ದವರು ನಟಿ ಸೋನಾಲಿ ಬೇಂದ್ರೆ. ತೆಲುಗಿನಲ್ಲಿ ಮಹೇಶ್ ಬಾಬು ಜೊತೆಗೆ ಮುರಾರಿ ಸಿನಿಮಾ ಮೂಲಕ ದಕ್ಷಿಣ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಸೋನಾಲಿ ಬೇಂದ್ರೆ ಅವರಿಗೆ ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ದೊರೆತಿತ್ತು.
ಇದಾದ ನಂತರ ಖಡ್ಗಂ ಸಿನಿಮಾದಲ್ಲಿ ನಟ ಶ್ರೀಕಾಂತ್ ಜೊತೆಗೆ, ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಇಂದ್ರ ಸಿನಿಮಾದಲ್ಲಿ, ನಂದಮೂರಿ ಬಾಲಕೃಷ್ಣ ಅವರ ಜೊತೆಗೆ ಪಲನಾಟಿ ಬ್ರಹ್ಮ ನಾಯುಡು ಸಿನಿಮಾದಲ್ಲಿ ಸಹಾ ಸೋನಾಲಿ ಬೇಂದ್ರೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಹೀಗೆ ಸ್ಟಾರ್ ನಾಯಕರ ಜೊತೆಗೆ ತೆರೆ ಹಂಚಿಕೊಂಡು ಸ್ಟಾರ್ ನಟಿಯಾಗಿ ಮೆರೆದ ಸೋನಾಲಿ ಬೇಂದ್ರೆ ಅವರಿಗೆ ಬೇಡಿಕೆ ಕೂಡಾ ಸಾಕಷ್ಟಿತ್ತು. ಬಾಲಿವುಡ್ ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ಸಹಾ ಸೋನಾಲಿ ಬೇಂದ್ರೆ ಬ್ಯುಸಿಯಾಗಿದ್ದರು.
ಇವೆಲ್ಲವುಗಳ ನಡುವೆ 2013 ರಲ್ಲಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟ ಮೇಲೆ ಸೋನಾಲಿ ಬೇಂದ್ರೆ ಸಿನಿಮಾಗಳಿಂದ ಅಂತರವನ್ನು ಕಾಯ್ದುಕೊಂಡರು. ಅವರು ಯಾವುದೇ ಹೊಸ ಸಿನಿಮಾ ಮಾಡಲಿಲ್ಲ. ಅನಂತರ ಕ್ಯಾ ನ್ಸ ರ್ ನಿಂದ ಬಳಲಿದ ಸೋನಾಲಿ ಬೇಂದ್ರೆ ಚಿಕಿತ್ಸೆ ಗಾಗಿ ವಿದೇಶಕ್ಕೆ ಹೋದರು. ಕ್ಯಾ ನ್ಸ ರ್ ಗೆದ್ದು, ಮರಳಿ ಹೊಸ ಜೀವನವನ್ನು ಪಡೆದುಕೊಂಡರು. ಬಿ ಟೌನ್ ನಲ್ಲಿ ಕೆಲವು ಜಾಹೀರಾತುಗಳು ಹಾಗೂ ಶೋ ಗಳಲ್ಲಿ ಕಾಣಿಸಿಕೊಂಡ ಸೋನಾಲಿ ಯಾವುದೇ ಹೊಸ ಸಿನಿಮಾ ಮಾಡಲಿಲ್ಲ.
ಇದೀಗ ಬರೋಬ್ಬರಿ 18 ವರ್ಷಗಳ ನಂತರ ನಟಿ ಸೋನಾಲಿ ಬೇಂದ್ರೆ ಮತ್ತೆ ದಕ್ಷಿಣ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಗಮನ ಸೆಳೆದಿದೆ. ಈ ವಿಷಯ ಕೇಳಿ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಹೌದು, ನಟಿ ಸೋನಾಲಿ ಬೇಂದ್ರೆ ತೆಲುಗಿನ ಸ್ಟಾರ್ ನಟನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಸೋನಾಲಿ ಬೇಂದ್ರೆ ಯಾವ ಸ್ಟಾರ್ ನಟನ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನುವುದು ವಿಶೇಷವಾಗಿದೆ.
ಟಾಲಿವುಡ್ ನಲ್ಲಿ ನಟ ಜೂನಿಯರ್ ಎನ್ ಟಿ ಆರ್ ತ್ರಿಬಲ್ ಆರ್ ಸಿನಿಮಾ ನಂತರ ಹೊಸ ಹೊಸ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡಿದ್ದಾರೆ. ನಿರ್ದೇಶಕ ಕೊರಟಾಲ ಶಿವ ನಿರ್ದೇಶನದಲ್ಲಿ ಎನ್ ಟಿ ಆರ್ ಹೊಸ ಸಿನಿಮಾ ಮಾಡುವ ವಿಷಯ ಈಗಾಗಲೇ ಸುದ್ದಿಯಾಗಿದೆ. ಇದೇ ಸಿನಿಮಾದಲ್ಲೇ ನಟಿ ಸೋನಾಲಿ ಬೇಂದ್ರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಇದು ನಿಜವೇ ಆದಲ್ಲಿ 18 ವರ್ಷಗಳ ನಂತರ ನಟಿಯ ಅಭಿಮಾನಿಗಳಿಗೆ ಅವರನ್ನು ಬೆಳ್ಳಿ ತೆರೆಯ ಮೇಲೆ ನೋಡುವ ಭಾಗ್ಯ ಮತ್ತೊಮ್ಮೆ ಸಿಗಲಿದೆ.