ಬರೋಬ್ಬರಿ 15 ವರ್ಷಗಳ ಒಂದಾಯ್ತು ‘ಆ ದಿನಗಳು’ ಜೋಡಿ: ಫೋಟೋ ನೋಡಿ ಖುಷಿ ಪಡ್ತಿದ್ದಾರೆ ಅಭಿಮಾನಿಗಳು

0
143

ಕನ್ನಡ ಸಿನಿಮಾ ನಟ ಚೇತನ್ ಅವರು ಆ ದಿನಗಳು ಚೇತನ್ ಎಂದೇ ಹೆಸರನ್ನು ಪಡೆದಿರುವ ನಟನಾಗಿದ್ದಾರೆ. ಸಿನಿಮಾಗಳು ಮಾತ್ರವೇ ಅಲ್ಲದೇ ತಮ್ಮ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು, ಆಗಾಗ ಕೆಲವು ವಿಷಯಗಳ ಕುರಿತಾಗಿ ಮಾತನಾಡಿ, ಹೇಳಿಕೆ ನೀಡಿ ಚರ್ಚೆಗಳನ್ನು ಹುಟ್ಟು ಹಾಕುವ ಚೇತನ್ ಅವರು ಸಿನಿಮಾ ಗಳಲ್ಲೂ ಕೂಡಾ ತೊಡಗಿಕೊಂಡಿದ್ದಾರೆ. ಆದರೆ ಆ ದಿನಗಳು ಸಿನಿಮಾ ಚೇತನ್ ಅವರ ಸಿನಿ ಕೆರಿಯರ್ ನಲ್ಲಿ ಒಂದು ಮೈಲಿಗಲ್ಲಿನಂತಹ ಸಿನಿಮಾ ಎನ್ನುವುದರಲ್ಲಿ ಮಾತ್ರ ಯಾವುದೇ ಅನುಮಾನವೂ ಇಲ್ಲ.

ಆ ದಿನಗಳು ಸಿನಿಮಾ ಚೇತನ್ ಅವರ ಮೊದಲ ಸಿನಿಮಾ, ಇದೇ ಸಿನಿಮಾದ ಮೂಲಕ ತೆಲುಗಿನ ನಟಿ ಅರ್ಚನಾ ಕೂಡಾ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟರು. ಆ ದಿನಗಳು ಸಿನಿಮಾ 2007 ರಲ್ಲಿ ತೆರೆ ಕಂಡು, ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಜನ ಮೆಚ್ಚುಗೆಯನ್ನು ಪಡೆದುಕೊಂಡ ಸಿನಿಮಾ ಆಗಿತ್ತು‌. ಇಂದಿಗೂ ಜನರು ಚೇತನ್ ಅವರನ್ನು ಆ ದಿನಗಳು ಚೇತನ್ ಎಂದು ಕರೆಯುವುದೇ ಇದಕ್ಕೆ ಸಾಕ್ಷಿಯಾಗಿದೆ.

ಅಲ್ಲದೇ ಆ ದಿನಗಳು ಸಿನಿಮಾದಲ್ಲಿನ ಚೇತನ್ ಹಾಗೂ ಅರ್ಚನಾ ಅವರ ಜೋಡಿ ಕೂಡಾ ಜನರ ಮನಸ್ಸನ್ನು ಗೆದ್ದಿತ್ತು. ಈಗ ಸುಮಾರು 17 ವರ್ಷಗಳ ನಂತರ ಈ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದು, ಈ ವಿಷಯವನ್ನು ಸ್ವತಃ ನಟ ಚೇತನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಒಂದು ಪೋಸ್ಟ್ ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ.

ಚೇತನ್ ಅವರು ತಮ್ಮ ಪೋಸ್ಟ್ ನಲ್ಲಿ,
” 15 ವರ್ಷಗಳ ನಂತರ, ನನ್ನ ಮತ್ತು ಅರ್ಚನಾಳ ಭೇಟಿಯಾಯಿತು! ನಮ್ಮಿಬ್ಬರ ಮೊದಲ ಕನ್ನಡ ಚಲನಚಿತ್ರ, ತನ್ನದೇ ಅಭಿಮಾನಿಗಳನ್ನು ಹೊಂದಿದ್ದ 2007ರ ‘ಆ ದಿನಗಳು’. ಈಗ ನಾವು ಹೈದರಾಬಾದಿನಲ್ಲಿ ನಮ್ಮ ಆಕ್ಷನ್ ಥ್ರಿಲ್ಲರ್ ಚಿತ್ರ ‘ಡಿ ಟಿ ಎಸ್’ (‘ಡೇರ್ ಟು ಸ್ಲೀಪ್’) ನಲ್ಲಿ ಒಟ್ಟಿಗೆ ನಟಿಸುತ್ತಿದ್ದೇವೆ. ಅಂದಿನಂತೆಯೇ, ಇಂದಿಗೂ ಕೂಡ ಅರ್ಚನಾ ಅವರು ಚಿಂತನಶೀಲ ಮತ್ತು ಕರುಣಾಮಯಿಯಾಗಿರುವುದನ್ನು ಕಂಡು ಖುಷಿಯಾಯಿತು” ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here