ಬರೋಬ್ಬರಿ 13 ವರ್ಷಗಳ ನಂತರ ನಟಿ ಕಂಗನಾ ಕುರಿತಾಗಿ ರಹಸ್ಯ ಒಂದನ್ನು ಬಿಚ್ಚಿಟ್ಟ ನಟ ಪ್ರಭಾಸ್!

Entertainment Featured-Articles News

ಪ್ಯಾನ್ ಇಂಡಿಯಾ ಸ್ಟಾರ್ ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ ನಟ ಪ್ರಭಾಸ್ ನಾಯಕನಾಗಿ, ದಕ್ಷಿಣದ ಜನಪ್ರಿಯ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿರುವ, ಬಹುನಿರೀಕ್ಷಿತ ರಾಧೇಶ್ಯಾಮ್ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು,‌ ಸಿನಿಮಾ ನೋಡಿದ ನಂತರ ಈ ಕುರಿತಾಗಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪ್ರಭಾಸ್ ಅಭಿಮಾನಿಗಳು ಸಿನಿಮಾ ಅದ್ಭುತವಾಗಿದೆ ಎಂದರೆ, ಸಿನಿ ಪ್ರೇಮಿಗಳು ಹಾಗೂ ವಿಮರ್ಶಕರು ನಿರೀಕ್ಷಿಸಿದಂತೆ ಸಿನಿಮಾ ಮೂಡಿಬಂದಿಲ್ಲ ಎನ್ನುವ ಟೀಕೆಗಳನ್ನು ಸಹಾ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಪ್ರಭಾಸರ ಹಸ್ತ ಸಾಮುದ್ರಿಕಾಶಾಸ್ತ್ರಜ್ಞನಾಗಿ ಅಂದರೆ ಇನ್ನೊಬ್ಬರ ಕೈ ನೋಡಿ ಭವಿಷ್ಯ ನುಡಿಯುವ ವ್ಯಕ್ತಿಯಾಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ವಾಸ್ತವ ಜೀವನದಲ್ಲಿ ತಾನು ಇಂತಹ ವಿಷಯಗಳನ್ನು ನಂಬುವುದಿಲ್ಲ ಎಂದಿರುವ ಪ್ರಭಾಸ್ ಇದೇ ವೇಳೆ ಇಂತಹ ಹಲವು ಘಟನೆಗಳು ನಡೆದಿರುವುದು ನನಗೆ ಗೊತ್ತಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಅವರು ಬಾಲಿವುಡ್‌ ನ ಸ್ಟಾರ್ ನಟಿ ಕಂಗಣ ರಣವತ್ ಕುರಿತಾದ ಒಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಟಿ ಕಂಗನಾ ರಣಾವತ್ ಪ್ರಭಾಸ್ ಜೊತೆಗೆ ಏಕ್ ನಿರಂಜನ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದು ಕಂಗನಾ ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾ, ಹಾಗೂ‌ ಒಂದೇ ಒಂದು ಸಿನಿಮಾ ಕೂಡಾ ಹೌದು. ಈ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ, ಬಿಡುವಿನ ಸಮಯದಲ್ಲಿ ಕಂಗನಾ ಅವರು ತಮ್ಮ ಜೀವನದಲ್ಲಿ ನಡೆದಂತಹ ಒಂದು ಪ್ರಮುಖ ಘಟನೆಯ ವಿಚಾರವನ್ನು ಪ್ರಭಾಸ್ ಅವರ ಬಗ್ಗೆ ಬಳಿ ಹಂಚಿಕೊಂಡಿದ್ದಾರೆ. ಇದೇ ವಿಷಯವನ್ನು ಪ್ರಭಾಸ್ ವರ್ಷಗಳ ನಂತರ ನೆನಪಿಸಿಕೊಂಡಿದ್ದಾರೆ.

ರಾಧೇಶ್ಯಾಮ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಾಹುಬಲಿ ಸಿನಿಮಾ ಖ್ಯಾತಿಯ ನಿರ್ದೇಶಕ ರಾಜಮೌಳಿ ಕೂಡ ಸಾಥ್ ನೀಡಿದ್ದಾರೆ. ಅವರು ನಟ ಪ್ರಭಾಸ್ ಅವರ ವಿಶೇಷ ಸಂದರ್ಶನವೊಂದನ್ನು ನಡೆಸಿದ್ದಾರೆ. ಈ ಸಂದರ್ಶನದ ವೇಳೆಯಲ್ಲಿ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಭಾಸ್ ಅವರು ನಟಿ ಕಂಗನಾ ಕುರಿತಾಗಿ ಮಾತನಾಡಿದ್ದಾರೆ. ರಾಜಮೌಳಿಯವರು ನಡೆಸಿರುವ ಈ ಸಂದರ್ಶನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಟಿ ಕಂಗನಾ ರಣಾವತ್ ಮೂಲತಃ ಹಿಮಾಚಲ ಪ್ರದೇಶದ ಒಂದು ಸಣ್ಣ ಪಟ್ಟಣದವರು. ಬಾಲ್ಯದಲ್ಲಿ ನಟನೆ ಕುರಿತು ಯಾವುದೇ ಆಸಕ್ತಿ ಇರದ ಹುಡುಗಿ. ಒಮ್ಮೆ ಕಂಗನಾ ಜ್ಯೋತಿಷ್ಯ ಒಬ್ಬರನ್ನು ಭೇಟಿಯಾದಾಗ, ಅವರು “ಕಂಗನಾ ಭವಿಷ್ಯದಲ್ಲಿ ಜನಪ್ರಿಯ ನಟಿ ಯಾಗುತ್ತಾರೆ” ಎಂದು ಹೇಳಿದರಂತೆ. ಆದರೆ ಕಂಗನಾ ಸಣ್ಣ ಹಳ್ಳಿಯ ತಾನು ಜನಪ್ರಿಯ ನಟಿಯಾಗುವುದು ಸಾಧ್ಯವೇ ಇಲ್ಲ, ಅಲ್ಲದೇ ತನಗೆ ನಟನೆಯಲ್ಲಿ ಆಸಕ್ತಿ ಇಲ್ಲ, ಆ ಜ್ಯೋತಿಷಿ ಸುಮ್ಮನೆ ಸುಳ್ಳು ಹೇಳುತ್ತಿದ್ದಾರೆ ಎಂದುಕೊಂಡರಂತೆ.

ಆದರೆ ಅಂದು ಅವರು ಭವಿಷ್ಯ ನುಡಿದಂತೆ ಇಂದು ಕಂಗನಾ ಜನಪ್ರಿಯ ನಟಿಯಾಗಿದ್ದಾರೆ‌. ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿದ್ದಾರೆ. ಹೀಗೆ ತನ್ನ ಭವಿಷ್ಯವಾಣಿಯನ್ನು ವರ್ಷಗಳ ಹಿಂದೆ ಜ್ಯೋತಿಷಿ ಹೇಳಿದ್ದು ವಿಚಾರವನ್ನು ಕಂಗನಾ ಏಕ್ ನಿರಂಜನ್ ಸಿನಿಮಾದ ಚಿತ್ರೀಕರಣ ವೇಳೆಯಲ್ಲಿ ಪ್ರಭಾಸ್ ಅವರಿಗೆ ತಿಳಿಸಿದ್ದು, ಇದೇ ವಿಚಾರವನ್ನು ಪ್ರಭಾಸ್ ತಮ್ಮ ಸಂದರ್ಶನದ ವೇಳೆಯಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

Leave a Reply

Your email address will not be published.