ವಿಜಯ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅಭಿನಯದ ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಆಗಸ್ಟ್ 25 ರಂದು ತೆರೆಗೆ ಬಂದಿತ್ತು. ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರ ತಂಡ ತಮ್ಮ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಭರ್ಜರಿಯಾಗಿ ಪ್ರಚಾರ ಕಾರ್ಯವನ್ನು ನಡೆಸಿದ್ದರು. ಆದರೆ ಬಿಡುಗಡೆಯ ನಂತರ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್ ಗಳ ಕಡೆ ಸೆಳೆಯುವಲ್ಲಿ ವಿಫಲವಾಯಿತು. ಮೊದಲ ಶೋ ನ ನಂತರವೇ ಹೊರ ಬಿದ್ದ ನೆಗೆಟಿವ್ ರಿವ್ಯೂ ಗಳಿಂದ ಸಿನಿಮಾ ಕಡೆಗೆ ಪ್ರೇಕ್ಷಕರು ಗಮನ ನೀಡಲಿಲ್ಲ. ಸಿನಿಮಾ ವಿಮರ್ಶಕರಿಂದ ಸಹಾ ಸಕಾರಾತ್ಮಕ ಪ್ರತಿಕ್ರಿಯೆಗಳು ಬಾರದ ಕಾರಣ ಸಿನಿಮಾ ಹೀನಾಯ ಸೋಲನ್ನು ಕಂಡಿದೆ. ನಿರ್ಮಾಪಕರಿಗೆ ಇದು ನಷ್ಟವನ್ನು ತಂದೊಡ್ಡಿದೆ.
ಲೈಗರ್ ಸಿನಿಮಾ ಸಹ ನಿರ್ಮಾಪಕಿಯಾಗಿರುವ ನಟಿ ಚಾರ್ಮಿ ಕೌರ್ ಸಿನಿಮಾದ ಸೋಲಿನ ನಂತರ ತೀವ್ರವಾದ ಬೇಸರಕ್ಕೆ ಗುರಿಯಾಗಿದ್ದಾರೆ. ಸಿನಿಮಾದ ಹೀನಾಯ ಸೋಲಿನ ಕಾರಣ ನಟಿ ಡಿಪ್ರೆಶನ್ ಗೆ ಒಳಗಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಡಿದೆ. ಚಾರ್ಮಿ ಸೆಪ್ಟೆಂಬರ್ 4 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿ, ತಾನು ಸೋಶಿಯಲ್ ಮೀಡಿಯಾಗಳಿಂದ ಬ್ರೇಕ್ ಪಡೆಯುತ್ತಿರುವುದಾಗಿ ಘೋಷಣೆಯನ್ನು ಮಾಡಿದ್ದಾರೆ. ಅವರು ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಸಾಲುಗಳು ಈಗ ಎಲ್ಲರ ಗಮನವನ್ನು ಸೆಳೆದಿದೆ.
ನಟಿಯು ಟ್ವೀಟ್ ಮಾಡಿ, ಚಿಲ್ ಸ್ನೇಹಿತರೇ, ಕೇವಲ ಸೋಶಿಯಲ್ ಮೀಡಿಯಾಗಳಿಂದ ಮಾತ್ರವೇ ಬ್ರೇಕ್ ಪಡೆಯುತ್ತಿದ್ದೇನೆ. ಒಂದು ಸಂಪೂರ್ಣ ಕನೆಕ್ಟ್ ನೊಂದಿಗೆ ಒಂದು ದೊಡ್ಡ ಮತ್ತು ಅತ್ಯುತ್ತಮದೊಂದಿಗೆ ಮರಳಿ ಬರುತ್ತೇನೆ. ಬದುಕಿ, ಬದುಕಲು ಬಿಡಿ ಎಂದು ನಟಿ ಚಾರ್ಮಿ ಕೌರ್ ಹೇಳಿದ್ದಾರೆ. ಮಾಹಿತಿಯ ಪ್ರಕಾರ, ಈ ಸ್ಪೋರ್ಟ್ಸ್ ಡ್ರಾಮಾ ಚಿತ್ರದ ಕಥೆಯು ಸ್ಟ್ರೀಟ್ ಫೈಟರ್ ಸುತ್ತ ಸುತ್ತುತ್ತದೆ. ಆತ ತನ್ನ ಕಠಿಣ ಪರಿಶ್ರಮ ಮತ್ತು ಅಭ್ಯಾಸದ ಮೂಲಕ ಎಂಎಂಎ ಚಾಂಪಿಯನ್‌ಗೆ ಪ್ರಯಾಣಿಸುತ್ತಾರೆ. ಚಿತ್ರದಲ್ಲಿ ಅನನ್ಯಾ ಪಾಂಡೆ ನಾಯಕನ ಗೆಳತಿಯಾಗಿ ನಟಿಸಿದ್ದಾರೆ.
ಲೈಗರ್ ಸಿನಿಮಾ ಬಿಡುಗಡೆಗೆ ಮುನ್ನ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಆದರೆ ಬಿಡುಗಡೆ ನಂತರ ಸದ್ದಡಗಿತು. ಪ್ರೇಕ್ಷಕರಿಗೆ ಸಿನಿಮಾ ಕಥೆ ಹಾಗೂ ವಿಜಯ ದೇವರಕೊಂಡ ಆ್ಯಟಿಟ್ಯೂಡ್ ಇಷ್ಟವಾಗಿಲ್ಲ. ಇನ್ನು ಸೋಲಿನ ಹೊಣೆ ಹೊತ್ತಿರುವ ನಟ ವಿಜಯ ದೇವರಕೊಂಡ ತಾವು ಪಡೆದಿರುವ ಸಂಭಾವನೆಯಲ್ಲಿ ಒಂದಷ್ಟು ಹಣವನ್ನು ನಿರ್ಮಾಪಕರಿಗೆ ಹಿಂದಿರುಗಿಸುವ ನಿರ್ಧಾರವನ್ನು ಸಹಾ ಮಾಡಿದ್ದಾರೆ ಎನ್ನುವ ವಿಷಯ ಕೂಡಾ ಈಗ ದೊಡ್ಡ ಸುದ್ದಿಯಾಗಿದೆ. ಒಟ್ಟಾರೆ ಲೈಗರ್ ನ ಸೋನು ಚಿತ್ರತಂಡಕ್ಕೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ.