ಬದುಕಿದ್ದಾಗಲೇ ದಕ್ಷಿಣದ ನಟನಿಗೆ ಶ್ರದ್ಧಾಂಜಲಿ ಕೋರಿದ ನೆಟ್ಟಿಗರು: ಉದ್ದೇಶ ಪೂರ್ವಕ ದೌ ರ್ಜ ನ್ಯ ಎಂದ ನಟ

0 2

ಹಿಂದಿ ಬೆಳ್ಳಿ ತೆರೆ ಹಾಗೂ ಕಿರುತೆರೆಯ ಜನಪ್ರಿಯ ನಟ, ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಕೂಡಾ ಆಗಿದ್ದ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾದ ಸುದ್ದಿ ಎಲ್ಲರಿಗೂ ಸಹಾ ಒಂದು ಶಾ ಕ್ ಆಗಿತ್ತು. ನಟನ ನಿಧನಾನಂತರ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಬಾಲಿವುಡ್ ಕಲಾವಿದರು ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿಯನ್ನು ಕೋರುತ್ತಿದ್ದಾರೆ. ಆದರೆ ಇದೇ ವೇಳೆ ಬಾಲಿವುಡ್ ನಲ್ಲಿ ನಟಿಸಿರುವ, ದಕ್ಷಿಣದ ಸಿನಿಮಾಗಳ ಹೀರೋ ಸಿದ್ಧಾರ್ಥ್ ಅವರಿಗೆ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಶ್ರದ್ಧಾಂಜಲಿ ಕೋರಿರುವ ಘಟನೆಯು ನಡೆದಿದೆ‌. ನಟ ಸಿದ್ದಾರ್ಥ್ ಬದುಕಿರುವಾಗಲೇ ಅವರಿಗೆ ಶ್ರದ್ಧಾಂಜಲಿ ಕೋರಿರುವ ಈ ಘಟನೆಗೆ ನಟ ಬೇಸರ ಹಾಗೂ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ತಾನು ಬದುಕಿರುವಾಗಲೇ ತನಗೆ ಶ್ರದ್ಧಾಂಜಲಿ ಕೋರಿರುವ ಬಗ್ಗೆ ಬೇಸರವನ್ನು ಹೊರಹಾಕಿರುವ ನಟ ಸಿದ್ಧಾರ್ಥ್ ಅವರು, ” ಈ ರೀತಿಯ ಟ್ವೀಟ್ ಗಳು ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳು ಇತ್ತೀಚಿನ ದಿನಗಳಲ್ಲಿ ನನಗೆ ಯಾವುದೇ ರೀತಿಯ ಬೇಸರವನ್ನು ಉಂಟು ಮಾಡುತ್ತಿಲ್ಲ ಮತ್ತು ನಾನು ಇದರ ಬಗ್ಗೆ ಮಾತನಾಡುವುದು ಇಲ್ಲ” ಎಂದು ಹೇಳಿದ್ದಾರೆ. ಸಿದ್ದಾರ್ಥ್ ಅವರು ಟ್ವಿಟರ್ ನಲ್ಲಿ ತಮಗೆ ಶ್ರದ್ಧಾಂಜಲಿ ಕೋರಿರುವ ಟ್ವಿಟರ್ ಖಾತೆಯ ಚಿತ್ರವನ್ನು ಸಹಾ ಶೇರ್ ಮಾಡಿಕೊಂಡು, ಅದರ ಬಗ್ಗೆಯೂ ಒಂದೆರಡು ಸಾಲುಗಳನ್ನು ಬರೆದುಕೊಂಡಿದ್ದು, ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

“ಇದು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿರುವ ದೌ ರ್ಜ ನ್ಯ ಮತ್ತು ದ್ವೇಷ ಹರಡುವಿಕೆಯಾಗಿದ್ದು, ನಾವು ಮಾನವೀಯತೆ ವಿಷಯದಲ್ಲಿ ಎಷ್ಟು ಕೆಳಗೆ ಇಳಿದಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ನಟ ಸಿದ್ಧಾರ್ಥ್ ಅವರ ಮೇಲೆ ಏಕೆ ಕೆಲವರಿಗೆ ಇಷ್ಟೊಂದು ಕೋಪ ಎನ್ನುವುದಾದರೆ ನಟ ಸಿದ್ದಾರ್ಥ್ ಅವರು ಆಗಾಗ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ನೀತಿಗಳ ಕುರಿತಾಗಿ ಟೀಕೆಗಳನ್ನು ಮಾಡುತ್ತಾ ಪೋಸ್ಟ್ ಗಳನ್ನು ಹಾಕುವುದರಿಂದ ಅವರ ವಿ ರೋ ಧಿ ಗಳ ಸಂಖ್ಯೆ ಹೆಚ್ಚಾಗುತ್ತಿದೆ‌. ಈ ಹಿಂದೆ ಸಹಾ ಸಿದ್ದಾರ್ಥ್ ಗೆ ಇಂತಹ ಟ್ವೀಟ್ ಗಳನ್ನು ಮಾಡಿ ನಿಂದನೆ ಮಾಡಲಾಗಿತ್ತು.

Leave A Reply

Your email address will not be published.