ಬಡತನ ದೂರ ಮಾಡಲು ಆಚಾರ್ಯ ಚಾಣಕ್ಯನು ತಿಳಿಸಿದ 4 ಅದ್ಬುತ ತಂತ್ರಗಳು

Written by Soma Shekar

Published on:

---Join Our Channel---

ಆಚಾರ್ಯ ಚಾಣಕ್ಯನು ಹೇಳಿರುವ ವಿಚಾರಗಳು ಅಥವಾ ತತ್ವಗಳು ಆಚರಣೆಗೆ ತರುವುದು ಕಠಿಣ ಅನಿಸುತ್ತದೆ. ಆದರೆ ವಾಸ್ತವದಲ್ಲಿ ಈ ಕಠಿಣ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆದರೆ ನಮ್ಮ ಜೀವನದಲ್ಲೊಂದು ಸುಧಾರಣೆ ಕಾಣುವಲ್ಲಿ ಅದು ಮಹತ್ವದ ಪಾತ್ರವನ್ನು ವಹಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಜೀವನದಲ್ಲಿ ಹಂತ ಹಂತವಾಗಿ ಧನಾತ್ಮಕ ಬದಲಾವಣೆ ಎನ್ನುವುದು ಕಂಡು ಯಶಸ್ಸಿನ ಕಡೆಗೆ ಮುಂದಡಿ ಇಡಲು ಚಾಣಕ್ಯನ ನೀತಿ ವಾಕ್ಯಗಳು ಮಾರ್ಗಸೂಚಿಗಳಾಗಿರುತ್ತವೆ. ಚಾಣಕ್ಯನು ಹೇಳಿರುವ ಈ ನಾಲ್ಕು ಅಂಶಗಳನ್ನು ನಾವು ನೆನಪಿನಲ್ಲಿಟ್ಟುಕೊಂಡರೆ ಅವುಗಳನ್ನು ಆಚರಣೆಗೆ ತಂದರೆ ಬಡತನ ದೂರಾಗುತ್ತದೆ.

ಮೊದಲನೆಯದಾಗಿ ಇರುವ ಸಂಪತ್ತೆಲ್ಲವನ್ನೂ ಖರ್ಚು ಮಾಡಿ ದಿವಾಳಿ ಆಗಬಾರದು:

ಜೀವನದಲ್ಲಿ ಶ್ರಮವಹಿಸಿ ದುಡಿಯುತ್ತಾರೆ. ಅದಕ್ಕೆ ತಕ್ಕ ಪ್ರತಿಫಲವನ್ನು ಅವರು ಪಡೆಯುತ್ತಾರೆ. ಆದರೆ ಒಂದು ಹಂತದಲ್ಲಿ ಅವರು ಬರಿಗೈ ದಾಸರಾಗುತ್ತಾರೆ. ಇದಕ್ಕೆ ಕಾರಣವಾಗುವುದು ಅವರ ಕೆಟ್ಟ ಹವ್ಯಾಸಗಳು ಹಾಗೂ ಸಹವಾಸಗಳು. ಇಂತಹ ವ್ಯಕ್ತಿಗಳು ಶೀಘ್ರವಾಗಿ ಅವಸಾನದ ಕಡೆಗೆ ನಡೆಯುತ್ತಾರೆ.
ಆದ್ದರಿಂದಲೇ ಎಷ್ಟೇ ಧನಿಕನೇ ಆದರೂ ಹಣಕ್ಕೆ ಗೌರವ ನೀಡಬೇಕು.

ಜೀವನದಲ್ಲಿ ಅತ್ಯಂತ ಮಹತ್ವ ಎನಿಸಿರುವ ಹಣದ ಮೌಲ್ಯವನ್ನು ತಿಳಿದುಕೊಳ್ಳಬೇಕು. ಅಲ್ಲದೇ ಅದರ ಸದುಪಯೋಗಪಡಿಸಿಕೊಂಡರೆ ಮಾತ್ರವೇ ಹಣ ಅವನಲ್ಲಿ ಉಳಿಯುತ್ತದೆ ಎಂದು ಚಾಣಕ್ಯನು ಹೇಳುತ್ತಾನೆ. ಆದ್ದರಿಂದ ಹಣವನ್ನು ಸದುಪಯೋಗ ಪಡಿಸಿಕೊಳ್ಳಲು ಇರುವ ಮಾರ್ಗಗಳನ್ನು ತಿಳಿದು ಅದರ ಪ್ರಕಾರ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವೆಡೆ ಗಮನವನ್ನು ನೀಡಬೇಕು.

ಎರಡನೆಯದಾಗಿ ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡಬಾರದು :

ಚಾಣಕ್ಯನು ಹೇಳುವ ಪ್ರಕಾರ ಇರುವ ಹಣವನ್ನು ಹೆಚ್ಚಿಸುವಂತೆ, ಅದರ ಮಾರ್ಗಗಳ ಕಡೆಗೆ ಗಮನವನ್ನು ನೀಡಬೇಕು. ಹಣವನ್ನು ನಾವು ಹೂಡಿಕೆ ಮಾಡಬೇಕು. ಅನಾವಶ್ಯಕವಾಗಿ ವ್ಯರ್ಥವಾಗಿ ಹಣವನ್ನು ನೀರಿನಂತೆ ಹರಿಸಬಾರದು. ಅನಾವಶ್ಯಕವಾಗಿ ಹಣ ಖರ್ಚು ಮಾಡುವವರು ಬಳಿ ದೇವಿ ಲಕ್ಷ್ಮಿ ನಿಲ್ಲುವುದಿಲ್ಲ. ಇಂತಹವರ ಬಳಿ ಹಣ ಹೆಚ್ಚು ಕಾಲ ನಿಲ್ಲುವುದಿಲ್ಲ ಎಂದು ಚಾಣಕ್ಯನು ಹೇಳುತ್ತಾನೆ.

ಮೂರನೆಯದಾಗಿ ಹಣದ ತಪ್ಪಾದ ಬಳಕೆ :

ನಮ್ಮ ಬಳಿ ಇರುವ ಹಣವನ್ನು ಕುಟುಂಬ ನಿರ್ವಹಣೆಯ ಜೊತೆಗೆ ಕೆಲವು ಸತ್ಕಾರ್ಯಗಳನ್ನು ಕೂಡಾ ಮಾಡಲು ಬಳಸಿಕೊಳ್ಳಬೇಕು. ಇದರಲ್ಲಿ ದಾನ ಪ್ರಮುಖವಾಗಿರುತ್ತದೆ. ಯಾರು ಹೆಚ್ಚು ಹೆಚ್ಚು ದಾನವನ್ನು ಮಾಡುತ್ತಾರೆಯೋ ಅವರ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿಗಳು ನೆಲೆಗೊಳ್ಳುತ್ತವೆ. ಯಾರು ಹಣವನ್ನು ತಪ್ಪು ದಾರಿಯಲ್ಲಿ ಬಳಸುತ್ತಾರೆಯೋ, ಅವರ ಬಳಿ ಎಷ್ಟು ಹಣವಿದ್ದರೂ ಸಹಾ ಅದು ಬಹಳ ಬೇಗ ಕರಗಿ ಅವರ ಜೀವನದ ಮಾರ್ಗ ಪತನದ ಕಡೆಗೆ ಸಾಗುತ್ತದೆ.

ಕೊನೆಯದಾಗಿ ಹಣದ ಉಳಿತಾಯ ಅತಿಮುಖ್ಯ :

ಚಾಣಕ್ಯನು ಹೇಳುವಂತೆ ಯಾರು ಹಣವನ್ನು ಉಳಿತಾಯ ಮಾಡುವುದಿಲ್ಲವೋ, ಅವರಿಗೆ ವರಮಾನ ಹೆಚ್ಚಾದರೂ ಕೂಡ ಅದರ ಜೊತೆಗೆ ಖರ್ಚುಗಳು ಹೆಚ್ಚಾಗುತ್ತಾ ಹೋಗುತ್ತದೆ. ಆತನ ಪ್ರಕಾರ ಹಣ ಗಳಿಕೆಗಿಂತ ಅದನ್ನು ಖರ್ಚು ಮಾಡುವುದೇ ಬಹಳಷ್ಟು ಶ್ರಮದಾಯಕ ವಾಗಿದ್ದು, ಹಣವನ್ನು ಸಮರ್ಪಕವಾಗಿ ಯೋಜಿಸಿ, ಯೋಚಿಸಿ ಖರ್ಚು ಮಾಡಬೇಕು ಹಾಗೂ ಸ್ವಲ್ಪ ಹಣವನ್ನು ಭವಿಷ್ಯತ್ತಿಗಾಗಿ ಉಳಿಸಬೇಕು.

Leave a Comment