ಬಂಧನದ ಭೀತಿಯಲ್ಲಿ ಬಿಗ್ ಬಾಸ್ ಸ್ಪರ್ಧಿ: ಅರೆಸ್ಟ್ ವಾರೆಂಟ್ ಹೊರಡಿಸಿದ ಕೋರ್ಟ್!! ಇಷ್ಟಕ್ಕೂ ಆಗಿದ್ದೇನು?

0 1

ಹರಿಯಾಣ್ವಿ ಹಾಡುಗಳಿಗೆ ನೃತ್ಯವನ್ನು ಮಾಡುವ ಮೂಲಕ ಸಾಕಷ್ಟು ಹೆಸರನ್ನು ಪಡೆದಿರುವ ಹರಿಯಾಣದ ಗಾಯಕಿ ಮತ್ತು ಡ್ಯಾನ್ಸರ್ ಸಪ್ನಾ ಚೌದರಿ ಹೆಸರು ಉತ್ತರ ಭಾರತದಲ್ಲಿ ಒಬ್ಬ ಸಿನಿಮಾ ನಟಿಯಷ್ಟೇ ಜನಪ್ರಿಯ ಎಂದರೆ ಖಂಡಿತ ಅದು ಸುಳ್ಳಲ್ಲ.‌ ಸಾಮಾಜಿಕ ಜಾಲತಾಣಗಳಲ್ಲಿ ಸಪ್ನಾ ಚೌಧರಿ ಡ್ಯಾನ್ಸ್ ವಿಡಿಯೋಗಳು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತದೆ. ಲಕ್ಷ ಲಕ್ಷ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತವೆ. ಸಣ್ಣ ಸಣ್ಣ ಸಾರ್ವಜನಿಕ ವೇದಿಕೆಗಳಲ್ಲಿ ಡಾನ್ಸ್ ಮಾಡುತ್ತಲೇ ಜೀವನವನ್ನು ರೂಪಿಸಿಕೊಂಡ ಸಪ್ನಾ ಚೌದರಿಯ ಡ್ಯಾನ್ಸ್ ಗೆ ಇಂದು ದೊಡ್ಡ ಅಭಿಮಾನಿ ಬಳಗವಿದೆ. ಸಪ್ನ ಚೌಧರಿ ಸ್ಟೇಜ್ ಶೋ ಎಂದರೆ ಬಹಳ ಬೇಗ ಟಿಕೇಟುಗಳು ಮಾರಾಟವಾಗುತ್ತವೆ. ಈಕೆಯ ಜನಪ್ರಿಯತೆ ಯಾವ ಮಟ್ಟಕ್ಕೆ ಇದೆಯೆಂದರೆ ಈ ಹಿಂದೆ ಹಿಂದಿಯ ಬಿಗ್ ಬಾಸ್ ಶೋನಲ್ಲಿ ಸಪ್ನಾ ಸ್ಪರ್ಧಿಯಾಗಿ ಭಾಗವಹಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

ಹರಿಯಾಣದಲ್ಲಿ ಸೆಲೆಬ್ರಿಟಿ ರೀತಿಯಲ್ಲೇ ಸ್ಥಾನಮಾನ ಪಡೆದಿರುವ ಸಪ್ನಾ ಚೌದರಿ ಅವರಿಗೆ ಇದೀಗ ಬಂ ಧ ನ ದ ಭೀತಿ ಕಾಡಿದೆ. ಹೌದು, ಹಿಂದೊಮ್ಮೆ ತಮ್ಮ ನೃತ್ಯ ಕಾರ್ಯಕ್ರಮವನ್ನು ರದ್ದು ಮಾಡಿದ್ದು ಮಾತ್ರವಲ್ಲದೇ, ಟಿಕೆಟ್ ಪಡೆದವರಿಗೆ ಹಣ ವಾಪಸ್ಸು ನೀಡದ ಕಾರಣ ಅವರ ಮೇಲೆ ದೂರು ದಾಖಲಾಗಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರವಾಗಿ ಸೋಮವಾರ ಲಕ್ನೋದ ಎಸಿಜೆಎಂ ನ್ಯಾಯಾಲಯವು ಡ್ಯಾನ್ಸರ್ ಸಪ್ನಾ ಚೌಧರಿ ವಿ ರು ದ್ಧ ಬಂ ಧ ನ ವಾರೆಂಟ್ ಹೊರಡಿಸಿದೆ.‌ಆಕೆಯನ್ನು ಬಂ ಧಿ ಸ ಲು ಯುಪಿ ಪೊಲೀಸರು ಹರಿಯಾಣಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಪ್ರಕರಣದ ವಿಚಾರಣೆಗಾಗಿ ಸೋಮವಾರ ಸಪ್ನಾ ಚೌಧರಿ ನ್ಯಾಯಾಲಯದಲ್ಲಿ ಹಾಜರಾಗಬೇಕಿತ್ತು. ಆದರೆ ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ, ಅದು ಮಾತ್ರವೇ ಅಲ್ಲದೆ ಈ ವಿಚಾರವಾಗಿ ಯಾವುದೇ ಅರ್ಜಿಯನ್ನು ಕೂಡಾ ಅವರು ಸಲ್ಲಿಸಿರಲಿಲ್ಲ. ಇದರಿಂದ ಗಂಭೀರಾವದ ನಿಲವನ್ನು ತಳೆದಿರುವ ನ್ಯಾಯಾಲಯವು ಸಪ್ನಾ ಚೌಧರಿ ಅವರನ್ನು ಬಂಧಿಸಿ ಕರೆ ತರುವಂತೆ ಆದೇಶವನ್ನು ಹೊರಡಿಸಿ, ಪೊಲೀಸರಿಗೆ ಸೂಚನೆಗಳನ್ನು ನೀಡಿದ್ದು ಬುಧವಾರ ಸಪ್ನ ಚೌಧರಿ ಅವರನ್ನು ಬಂಧಿಸುವ ಸಾಧ್ಯತೆಗಳಿವೆ.

ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಶಾಂತನೂ ತ್ಯಾಗಿ ಅವರು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ನಿಗಧಿ ಮಾಡಿದ್ದಾರೆ. ನವೆಂಬರ್ 2021 ರಲ್ಲಿಯೂ ಸಹಾ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಲಯವು ಸಪ್ನಾ ಚೌದರಿ ಯನ್ನು ಬಂ ಧಿ ಸು ವ ಆದೇಶವನ್ನು ಹೊರಡಿಸಿತ್ತು. ಆದರೆ ಆ ಸಂದರ್ಭದಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗಿ, ಜಾಮೀನು ಪಡೆದುಕೊಂಡಿದ್ದರು. ಆದರೆ ಇದೀಗ ಅವರು ಮತ್ತೆ ನ್ಯಾಯಾಲಯಕ್ಕೆ ಗೈರು ಹಾಜರಾಗಿ, ಕೋರ್ಟ್ ನ ಅಸಮಾಧಾನಕ್ಕೆ ಕಾರಣವಾಗಿದ್ದಾರೆ.

Leave A Reply

Your email address will not be published.