ಬಂದ ವೇಗದಲ್ಲೇ ಮುಗಿದ ಗೋಲ್ಡನ್ ಗ್ಯಾಂಗ್: ಜನಪ್ರಿಯ ಶೋ ಮುಕ್ತಾಯಕ್ಕೆ ಅಸಲಿ ಕಾರಣವೇನು ಗೊತ್ತಾ?

Entertainment Featured-Articles News
54 Views

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಮಾತ್ರವೇ ಅಲ್ಲದೇ ಹಲವು ರಿಯಾಲಿಟಿ ಶೋ ಗಳು, ಸೆಲೆಬ್ರಿಟಿ ಟಾಕ್ ಶೋ ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಅಂತಹುದೇ ಒಂದು ಜನಪ್ರಿಯ ಟಾಕ್ ಶೋ ಇತ್ತೀಚಿಗೆಷ್ಟೇ ಪ್ರಾರಂಭವಾಗಿದ್ದ ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುತ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ. ಒಂದು ಹೊಸ ಕಾನ್ಸೆಪ್ಟ್ ನೊಡನೆ, ಸ್ಯಾಂಡಲ್ವುಡ್ ನ‌ ಜನಪ್ರಿಯ ನಟನ ನಿರೂಪಣೆಯ ಸಾರಥ್ಯದಲ್ಲಿ ಮೂಡಿ ಬರಲಿದೆ ಎಂದು ಗೋಲ್ಡನ್ ಗ್ಯಾಂಗ್ ಶೋ ನ ಪ್ರೋಮೋಗಳು ಬಿಡುಗಡೆ ಆದಾಗಲೇ, ಜನರು ಪ್ರೋಮೋ ನೋಡಿ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದುಂಟು.

ಹೀಗೆ ಕಿರುತೆರೆಯಲ್ಲಿ ಒಂದು ಅದ್ದೂರಿ ಸೆಟ್, ವೈವಿದ್ಯಮಯ ಆಟಗಳು, ಟಾಸ್ಕ್ ಗಳು, ಹೊಸ ಹೊಸ ವಿಚಾರಗಳ ಶೇರಿಂಗ್ ಹೀಗೆ ಹತ್ತು ಹಲವು ಹೊಸ ರಂಗುಗಳ ನಡುವೆ ಭರ್ಜರಿಯಾಗಿ ಪ್ರಸಾರ ಆರಂಭಿಸಿದ್ದ ಗೋಲ್ಡನ್ ಗ್ಯಾಂಗ್ ಇದೀಗ ಬಂದಷ್ಟೇ ವೇಗದಲ್ಲೇ ಕಿರುತೆರೆಯಿಂದ ತನ್ನ ಜರ್ನಿ ಮುಗಿಸಲಿದೆ ಎನ್ನುವ ಸುದ್ದಿಯೊಂದು ಹೊರ ಬಂದಿದ್ದು, ಶೋ ನ ಇಷ್ಟ ಪಟ್ಟು ನೋಡುತ್ತಿದ್ದ ಕಿರುತೆರೆಯ ಪ್ರೇಕ್ಷಕರು ಹಾಗೂ ಶೋ ನ ಅಭಿಮಾನಿಗಳಿಹೆ ನಿರಾಸೆಯನ್ನು ತರಿಸುವಂತಹ ಸುದ್ದಿ ಇದಾಗಿದೆ.

ಹೌದು, ಗೋಲ್ಡನ್ ಗ್ಯಾಂಗ್ ಶೋ ಶೀಘ್ರದಲ್ಲೇ ಮುಗಿಯಲಿದೆ ಎಂದು ಹೇಳಲಾಗಿದೆ. ಸ್ನೇಹವನ್ನು ಸಂಭ್ರಮಿಸುವ ಈ ಶೋ ಹೀಗೆ ಇಷ್ಟು ಬೇಗ ಮುಗಿಯಲು ಕಾರಣವಾದರೂ ಏನು ಎನ್ನುವ ವಿಚಾರವಾಗಿ ಹಲವು ಗಾಸಿಪ್ ಗಳು ಸಹಾ ಹರಿದಾಡಿವೆ. ಕೆಲವು ಸುದ್ದಿಗಳಲ್ಲಿ ಗೋಲ್ಡನ್ ಗ್ಯಾಂಗ್ ಟಿ ಆರ್ ಪಿ ಗಳಿಸುವಲ್ಲಿ ಅಷ್ಟೇನು ಮ್ಯಾಜಿಕ್ ಮಾಡಲಿಲ್ಲ, ಅದಕ್ಕೆ ಇಷ್ಟು ಬೇಗ ಶೋ ಅನ್ನು ಕೊನೆ ಮಾಡಲಾಗುತ್ತಿದೆ ಎಂದು ವರದಿಗಳನ್ನು ಮಾಡಲಾಗಿದೆ.

ಆದರೆ, ಇದೇ ವೇಳೆ ಅಸಲಿ ಕಾರಣ ಅದಲ್ಲ, ಈಗಾಗಲೇ ಜನಪ್ರಿಯತೆ ಪಡೆದಿರುವ ಕೆಲವು ರಿಯಾಲಿಟಿ ಶೋ ಗಳ ಹೊಸ ಸೀಸನ್ ಆರಂಭವಾಗುತ್ತಿರುವುದರಿಂದ ಗೋಲ್ಡನ್ ಗ್ಯಾಂಗ್ ಅನ್ನು ಮುಗಿಸಲಾಗುತ್ತಿದೆ ಎನ್ನಲಾಗಿದೆ. ಹೌದು, ಈಗ ಗೋಲ್ಡನ್ ಗ್ಯಾಂಗ್ ಸಮಯಕ್ಕೆ ಡಿಕೆಡಿ ( ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ) ನ ಹೊಸ ಸೀಸನ್ ಆರಂಭಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ ಎನ್ನಲಾಗಿದ್ದು, ಈ ಬಾರಿ ಕೂಡಾ ಹಲವು ಪ್ರತಿಭಾವಂತ ಡ್ಯಾನ್ಸರ್ ಗಳು ಸ್ಪರ್ಧೆಯ ಭಾಗವಾಗಲಿದ್ದಾರೆ ಎನ್ನಲಾಗಿದೆ.

ಒಂದು ಕಡೆ ಈಗಾಗಲೇ ಡ್ರಾಮಾ ಠ ಆರಂಭದಲ್ಲೇ ಅಬ್ಬರಿಸಿದೆ, ಇನ್ನೊಂದು ಕಡೆ ಸರಿಗಮಪ ಲಿಟ್ಲ್ ಚಾಂಪ್ಸ್ ಕೂಡಾ ಶೀಘ್ರದಲ್ಲೇ ಬರಲಿದೆ ಎನ್ನಲಾಗಿದೆ. ಹೀಗೆ ವೀಕೆಂಡ್ ನಲ್ಲಿ ಭರ್ಜರಿ ರಿಯಾಲಿಟಿ ಶೋ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ವಾಹಿನಿಯು ಸಿದ್ಧವಾಗಿರುವುದರಿಂದ ಇದೀಗ ಗೋಲ್ಡನ್ ಗ್ಯಾಂಗ್ ಮುಗಿಯುತ್ತಿದೆ. ಒಟ್ಟಾರೆ ಗೋಲ್ಡನ್ ಗ್ಯಾಂಗ್ ಬಂದ ವೇಗದಲ್ಲೇ ಕಿರುತೆರೆಯಿಂದ ವಿದಾಯವನ್ನು ಹೇಳುತ್ತಿರುವುದು ಅಭಿಮಾನಿಗಳಿಗೆ ಮಾತ್ರ ಖಂಡಿತ ತುಂಬಾ ಬೇಸರವನ್ನು ಉಂಟು ಮಾಡಿದೆ.‌

Leave a Reply

Your email address will not be published. Required fields are marked *