ಬಂದೇ ಬಿಡ್ತಾ ಆ ಘಳಿಗೆ? ರಕ್ಷಿತ್ ಶೆಟ್ಟಿ ಸಿನಿಮಾ ಮೂಲಕ ರಮ್ಯಾ ಕಮ್ ಬ್ಯಾಕ್??

Entertainment Featured-Articles Movies News

ಸ್ಯಾಂಡಲ್ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯ ಅವರು ಪ್ರಸ್ತುತ ಸಕ್ರಿಯ ರಾಜಕಾರಣ ಮತ್ತು ಸಿನಿಮಾ ಎರಡರಿಂದಲೂ ಸಹಾ ಅಂತರವನ್ನು ಕಾಯ್ದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ ಆಗಾಗ ಸಿನಿಮಾ ಗಳ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಕೆಲವೊಂದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುವ ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ, ಅಭಿಪ್ರಾಯವನ್ನು ಸಹಾ ಹಂಚಿಕೊಳ್ಳುತ್ತಾರೆ. ಇದಲ್ಲದೇ ಆಗಾಗ ನಟಿ ರಮ್ಯ ಅವರು ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಸಹಾ ಆಗಾಗ ಸದ್ದು ಮಾಡುತ್ತವೆ.

ಆದರೆ ನಟಿ ರಮ್ಯ ಅವರು ಸಿನಿಮಾಕ್ಕೆ ಮರಳಿ ಬರುವ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಮಾತ್ರ ಆಗಿಲ್ಲ. ಈಗ ಬಂದಿರುವ ಹೊಸ ಸುದ್ದಿಯೊಂದರ ಪ್ರಕಾರ ನಟಿ ರಮ್ಯ ಅವರು ರಕ್ಷಿತ್ ಶೆಟ್ಟಿ ಅವರ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಮರಳಲಿದ್ದಾರೆ ಎನ್ನಲಾಗಿದೆ. ಅದೇ ಕಾರಣದಿಂದಲೇ ಅವರು ರಕ್ಷಿತ್ ಶೆಟ್ಟಿ ಅವರ ಎಲ್ಲಾ ಸಿನಿಮಾಗಳಿಗೂ ಸಹಾ ಸೋಶಿಯಲ್ ಮೀಡಿಯಾ ಮೂಲಕ ಶುಭ ಹಾರೈಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ನಟ ರಕ್ಷಿತ್ ಶೆಟ್ಟಿ ಅವರು ಕೆಲವು ದಿನಗಳ ಹಿಂದೆ ಈ ವಿಚಾರವಾಗಿ ಹೇಳಿಕೆಯೊಂದನ್ನು ನೀಡಿದ್ದರು.

ರಕ್ಷಿತ್ ಶೆಟ್ಟಿ ಅವರು ನಟಿ ರಮ್ಯ ಅವರು ನಟಿಸುವಂತಹ ಕಥೆಗಳು ನಾನು ಒಪ್ಪಿಕೊಂಡಿರುವ ಯಾವುದೇ ಪ್ರಾಜೆಕ್ಟ್ ಗಳಲ್ಲೂ ಸಹಾ ಇಲ್ಲ ಎಂದು ಹೇಳಿದ್ದರು. ಆದರೆ ಅವರು ಹೀಗೆ ಹೇಳಿದ್ದು ಸುಳ್ಳು ಎನ್ನಲಾಗುತ್ತಿದ್ದು, ರಕ್ಷಿತ್ ಶೆಟ್ಟಿ ಅವರು ಹೊಂಬಾಳೆ ಬ್ಯಾನರ್ ನಲ್ಲಿ ಮಾಡುವ ಸಿನಿಮಾದಲ್ಲಿ ನಟಿ ರಮ್ಯ ಅವರು ಇರಲಿದ್ದು, ಆ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾ ಆರಂಭವಾಗಲು ಇನ್ನೂ ಸಾಕಷ್ಟು ಟೈಮ್ ಇರುವುದರಿಂದ ಯಾರೂ ಅಧಿಕೃತವಾಗಿ ಘೋಷಣೆ ಮಾಡುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

Leave a Reply

Your email address will not be published.