ಕನ್ನಡ ಕಿರುತೆರೆಯ ಲೋಕದ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಸಾಧಿಸಿರುವ ಗೆಲವು ಹಾಗೂ ಪಡೆದಿರುವ ಯಶಸ್ಸು ಎಲ್ಲರಿಗೂ ತಿಳಿದಿದ್ದೇ ಆಗಿದೆ. ಜೊತೆ ಜೊತೆಯಲಿ ಧಾರಾವಾಹಿ ಇಂದು ಮನೆ ಮನೆ ಮಾತಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಮನ ಗೆದ್ದಿರುವ ಧಾರಾವಾಹಿ ಇದಾಗಿದೆ. ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು ನಟಿ ಮೇಘಾ ಶೆಟ್ಟಿ. ವಿಶೇಷವೆಂದರೆ ನಟಿ ಮೇಘ ಶೆಟ್ಟಿ ಮಾತ್ರವಲ್ಲದೇ ಈ ಧಾರಾವಾಹಿಯಲ್ಲಿ ನಟಿಸಿರುವ ಬಹುತೇಕ ಕಲಾವಿದರು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡು, ಇಂದು ಅವರ ಪಾತ್ರದ ಮೂಲಕವೇ ಗುರುತಿಸುವಷ್ಟು ಜನರು ಅವರನ್ನು ಮೆಚ್ಚಿಕೊಂಡಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ನಾಯಕಿಯಾದ ಅನು ಸಿರಿಮನೆ ಪಾತ್ರದ ಮೂಲಕ ನಟಿ ಮೇಘಾ ಶೆಟ್ಟಿ ಅವರು ನಾಡಿನ ಕಿರುತೆರೆಯ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಆ ಧಾರಾವಾಹಿಯ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ನಟಿ ಮೇಘಾ ಶೆಟ್ಟಿಯವರು. ಅನಂತರ ಅವರು ಪಡೆದುಕೊಂಡ ಜನಪ್ರಿಯತೆ ಹಾಗೂ ಜನಮನ್ನಣೆ ಅಸಾಧಾರಣವಾದುದು. ಅವರ ಈ ಜರ್ನಿ ಧಾರಾವಾಹಿಯ ಜನಪ್ರಿಯತೆಯಿಂದ ಅವರನ್ನು ಸ್ಯಾಂಡಲ್ವುಡ್ ಕಡೆಗೂ ನಡೆಸಿದೆ.
ಹೌದು, ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಯಲ್ಲಿ ತ್ರಿವಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಸಿನಿಮಾ ಕುರಿತಾದ ಮಾಹಿತಿಗಳನ್ನು ಸಹ ನಟಿ ಮೇಘಾ ಶೆಟ್ಟಿ ಅವರು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಕತೆಯಲ್ಲಿ ಹಂಚಿಕೊಳ್ಳುವುದು ಉಂಟು. ಇದೀಗ ಅವರು ತಮ್ಮ ಮೊದಲ ಸಿನಿಮಾದ ಕುರಿತಾದ ಒಂದು ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮೇಘಾ ಶೆಟ್ಟಿ ಅವರು ಕೆಲವು ಫೋಟೋಗಳು, ಮತ್ತು ವೀಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ತಾವು ನಟಿಸುತ್ತಿರುವ ಮೊದಲನೇ ಸಿನಿಮಾದ ಚಿತ್ರೀಕರಣವೂ ಯಶಸ್ವಿಯಾಗಿ ಸಂಪೂರ್ಣವಾಗಿದೆ ಎನ್ನುವಂತಹ ಒಂದು ಸಂತೋಷದ ವಿಚಾರವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಚಿತ್ರ ತಂಡವು ಸಿನಿಮಾ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣವಾದ ಹಿನ್ನಲೆಯಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೂದು ಗುಂಬಳ ಒಡೆದಿರುವ ವಿಡಿಯೋವನ್ನು ಮೇಘ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ಚಿತ್ರ ತಂಡದ ಜೊತೆಗೆ ತೆಗೆಸಿಕೊಂಡಿರುವ ಗ್ರೂಪ್ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಮೇಘ ಶೆಟ್ಟಿ ಅವರು ಹಂಚಿಕೊಂಡ ಫೋಟೋಗಳು ಹಾಗೂ ವಿಡಿಯೋಗಳನ್ನು ನೋಡಿದ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಸಿನಿಮಾ ಚಿತ್ರೀಕರಣ ಯಶಸ್ವಿಯಾಗಿದ್ದಕ್ಕೆ ಶುಭಾಶಯವನ್ನು ಕೋರುತ್ತಾ, ಕಂಗ್ರಾಜುಲೇಷನ್ಸ್ ಹೇಳುತ್ತಿದ್ದಾರೆ. ಅಲ್ಲದೇ ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದ ಯಶಸ್ಸನ್ನು , ಗೆಲುವನ್ನು ಪಡೆಯಬೇಕು ಎಂದು ಮೇಘಾ ಶೆಟ್ಟಿ ಅವರ ಅಭಿಮಾನಿಗಳು ಕಮೆಂಟುಗಳ ಮೂಲಕ ಹಾರೈಸುತ್ತಿದ್ದಾರೆ.