ಫೇಸ್ ಬುಕ್ COO: ಇದಕ್ಕಿದ್ದ ಹಾಗೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೆರಿಲ್ ಸ್ಯಾಂಡ್ ಬರ್ಗ್, ಕಾರಣವೇನು??

Written by Soma Shekar

Published on:

---Join Our Channel---

ಫೇಸ್ ಬುಕ್ ಹಾಗೂ ಅದರ ಪೇರೆಂಟ್ ಕಂಪನಿ ಮೆಟಾ ಗೆ ಸಂಬಂಧಿಸಿದ ಹಾಗೆ ಒಂದು ಹೊಸ ಸುದ್ದಿ ಹೊರಗೆ ಬಂದಿದೆ. ಕಂಪನಿಯ ಸಿಒಒ ( ಚೀಫ್ ಆಪರೇಟಿವ್ ಆಫೀಸರ್ ) ಶೆರಿಲ್ ಸ್ಯಾಂಡ್ ಬರ್ಗ್ ಅವರು ತಮ್ಮ ಹುದ್ಧೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಕಂಪನಿ ಕೂಡಾ ಆಕೆಯ ರಾಜೀನಾಮೆಯ ಕುರಿತಾಗಿ ಗುರುವಾರ ಅಧಿಕೃತವಾಗಿ ಪುಷ್ಟಿಯನ್ನು ನೀಡಿದೆ. ಆದರೆ ಶೆರಿಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕಾರಣ ಮಾತ್ರ ಇನ್ನೂ‌ ಬಹಿರಂಗವಾಗಿಲ್ಲ. ಹೀಗೆ ರಾಜೀನಾಮೆ ನೀಡುವ ಹಿಂದಿನ ಕಾರಣ ತಿಳಿಯಲು ಅನೇಕರು ಬಯಸಿದ್ದಾರೆ. ಆದರೆ ಸದ್ಯಕ್ಕೆ ಅದರ ಮಾಹಿತಿ ಇಲ್ಲ.

ಶೆರಿಲ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಈ ಕುರಿತಾಗಿ ಬರೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ತಾನು ಸಮಾಜಕ್ಕೆ ಪರೋಪಕಾರಿ ಕೆಲಸಗಳನ್ನು ಮಾಡಲು ಬಯಸುತ್ತೇನೆ. ಸಂಪೂರ್ಣ ಗಮನವನ್ನು ಅದರ ಮೇಲೆ ಕೇಂದ್ರಿಕರಿಸಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ಶೆರಿಲ್ ಸ್ಯಾಂಡ್ ಬರ್ಗ್ ತಮ್ಮ ಜೀವನದ 14 ವರ್ಷಗಳನ್ನು ಇಲ್ಲಿ ಉದ್ಯೋಗ ಮಾಡುತ್ತಾ‌ ಕಳೆದಿದ್ದಾರೆ. ಸಿ ಎನ್ ಎನ್ ರಿಪೋರ್ಟ್ ಪ್ರಕಾರ ಶೆರಿಲ್ ಸೋಶಿಯಲ್ ಮೀಡಿಯಾ ಗಳ ಬಗ್ಗೆ ನಡೆಯುವ ಚರ್ಚೆಗಳು ಮೊದಲಿಗೂ ಇಂದಿಗೂ ಸಾಕಷ್ಟು ಬದಲಾಗಿದೆ ಎಂದಿದ್ದಾರೆ.

ನನಗೆ ಇದೆಲ್ಲವನ್ನೂ ಹೇಳುವುದು ಕಷ್ಟ. ಆದರೆ ಈ ಕೆಲಸ ಕಠಿಣವಾಗಿಯೇ ಇರಬೇಕು ಎಂದು ನಾನು ಬಯಸುತ್ತೇನೆ. ನಾವು ಸೃಷ್ಟಿಸಿರುವ ಉತ್ಪನ್ನಗಳು ಒಂದು ದೊಡ್ಡ ಜನ ಸಮೂಹದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದಲೇ ಜನರ ಗೌಪ್ಯತೆಯನ್ನು ಸಂರಕ್ಷಿಸುವುದು ನಮ್ಮ‌ ಜವಾಬ್ದಾರಿ ಆಗಿರುತ್ತದೆ ಎಂದು ಸಹಾ ಶೆರಿಲ್ ಹೇಳಿದ್ದಾರೆ.‌ ಮತ್ತೊಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಮೇಟಾದ ಸಿಇಓ ಮಾರ್ಕ್ ಜುಕರ್ ಬರ್ಗ್ ಅವರು ಶೆರಿಲ್ ಸ್ಯಾಂಡಬರ್ಗ್ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂದಿದ್ದಾರೆ.

ಸಿಗ್ನೇಚರ್ ಕ್ಯಾಚ್‌ಫ್ರೇಸ್‌ನೊಂದಿಗೆ, ಬಿಲಿಯನೇರ್ ಸ್ತ್ರೀವಾದಿ ಲೇಖಕಿ, ಸ್ಯಾಂಡ್‌ಬರ್ಗ್ ಮಾರ್ಚ್ 2008 ರಲ್ಲಿ ಗೂಗಲ್‌ನಿಂದ ಬೇರ್ಪಟ್ಟು ಫೇಸ್‌ಬುಕ್ ಸೇರಿದ್ದರು. ಅವರು ಆಗ ಫೇಸ್ ಬುಕ್ ನ ಯುವ CEO ಮಾರ್ಕ್ ಜುಕರ್‌ಬರ್ಗ್ ವೇಗವಾಗಿ ಬೆಳೆಯುತ್ತಿರುವ ಆದರೆ ಲಾಭದಾಯಕವಲ್ಲದ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್‌ನ ಸುತ್ತಲೂ ಬಲವಾದ ವ್ಯವಹಾರವನ್ನು ನಿರ್ಮಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದ್ದರು. ಆಕೆ ಅದನ್ನು ಮಾಡಿದರು.

Leave a Comment