ಫೇಸ್ ಬುಕ್ ನಲ್ಲಿ ಸುಂದರ ತರುಣಿಯ ಹೆಸರಲ್ಲಿ ಅಪ್ಪ:ಸಂಬಂಧ ಬೆಳೆಸಿ ಮಗನಾದ ಬೆಪ್ಪ!ಹಾಲಿವುಡ್ ನಟನ ವಿಚಿತ್ರ ಸ್ಟೋರಿ

0 3

ಸಾಮಾಜಿಕ ಜಾಲತಾಣಗಳ ದಿಗ್ಗಜ ಎನಿಸಿರುವ ಫೇಸ್ ಬುಕ್ ನಲ್ಲಿ ಅಸಂಖ್ಯಾತ ಮಂದಿ, ವಿಶ್ವದ ವಿವಿಧ ಭಾಗಗಳಲ್ಲಿ ಸಕ್ರಿಯರಾಗಿದ್ದಾರೆ. ಫೇಸ್ ಬುಕ್ ಎನ್ನುವುದು ವಿಶ್ವವ್ಯಾಪಿಯಾಗಿ ಹರಡಿರುವಂತಹ ಒಂದು ವಿಶಾಲವಾದ ಸಾಮಾಜಿಕ ಜಾಲತಾಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಫೇಸ್ ಬುಕ್ ನಲ್ಲಿ ನಕಲಿ ಖಾತೆಗಳೂ ಇರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಕಲಿ ಖಾತೆಗಳ ಮೂಲಕ ಸಾಕಷ್ಟು ಜನರು ವಂಚನೆಗೆ ಒಳಪಟ್ಟಿರುವ ವಿಷಯಗಳು ಸುದ್ದಿಯಾಗುತ್ತಲೇ ಇರುತ್ತವೆ. ಅದರಲ್ಲೂ ವಿಶೇಷವಾಗಿ ಹುಡುಗಿಯರ ಹೆಸರಿನಲ್ಲಿ ನಕಲಿ ಖಾತೆಯನ್ನು ಮಾಡಿಕೊಂಡು ಯುವಕರು ಹಾಗೂ ಹಿರಿಯ ವಯಸ್ಸಿನ ಪುರುಷರನ್ನು ವಂಚಿಸಿರುವ ಪ್ರಕರಣಗಳು ಸಾಕಷ್ಟು ನಡೆದಿದೆ.

ಫೇಸ್ ಬುಕ್ ನ ಫೇಕ್ ಖಾತೆಗಳಿಂದ ಮೋಸ ಹೋದವರ ಕಥೆಗಳನ್ನು ನೀವು ಈಗಾಗಲೇ ಕೇಳಿರಬಹುದು. ಆದರೆ ನಾವು ಈಗ ಹೇಳಲು ಹೊರಟಿರುವ ಕಥೆ ಸ್ವಲ್ಪ ಭಿನ್ನವಾಗಿದೆ. ಏಕೆಂದರೆ ಇಲ್ಲಿ ತಂದೆಯೊಬ್ಬರು ಸುಂದರವಾದ ಹುಡುಗಿಯ ಹೆಸರಿನಲ್ಲಿ ನಕಲಿ ಖಾತೆಯನ್ನು ಮಾಡಿಕೊಂಡು ತಮ್ಮ ಮಗನಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಘಟನೆಯೊಂದು ನಡೆದಿದೆ. ಹಾಗಾದರೆ ಮಗನಿಗೆ ಚಳ್ಳೆಹಣ್ಣು ತಿನ್ನಿಸಿದ ಆ ತಂದೆ ಯಾರು?? ತಂದೆ ಎಂದು ತಿಳಿಯದೆ ಮೋಸ ಹೋದ ಆ ಮಗ ಯಾರು?? ಎಂದು ತಿಳಿಯೋಣ ಬನ್ನಿ.

ಹಾಲಿವುಡ್ ಚಿತ್ರ ನಟ 31 ವರ್ಷ ವಯಸ್ಸಿನ ಜೇಮ್ ಮೊರೊಸಿನಿ ತಮ್ಮ ತಂದೆಯಿಂದಲೇ ಏಮಾರಿಸಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಜೇಮ್ಸ್ ಇತ್ತೀಚೆಗೆ ತನ್ನ ಈ ವಿಚಿತ್ರ ಅನುಭವದ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೇಮ್ಸ್ ಈ ವಿಚಾರವನ್ನು ತಿಳಿಸುತ್ತಾ, ಫೇಸ್‌ಬುಕ್‌ ನಲ್ಲಿ ತಮಗೆ ಗರ್ಲ್ ಫ್ರೆಂಡ್ ಆಗಿದ್ದವರು ತನ್ನ ತಂದೆಯೇ ಎನ್ನುವ ಒಂದು ಅಚ್ಚರಿಯ ವಿಚಾರವನ್ನು ಹೇಳಿದ್ದಾರೆ. ಜೇಮ್ಸ್ ಅವರ ತಂದೆ ಸುಂದರ ತರುಣಿಯೊಬ್ಬಳ ಫೋಟೋ ಹಾಕಿ ಬೆಕ್ಕಾ ಎನ್ನುವ ಹೆಸರಿನಲ್ಲಿ ನಕಲಿ ಖಾತೆಯೊಂದನ್ನು ಮಾಡಿದ್ದರು.

ಬೆಕ್ಕಾ ಖಾತೆಯಲ್ಲಿ ನೀಡಿದ ವಿವರಗಳಲ್ಲಿ ಆಕೆಯ ಹವ್ಯಾಸಗಳು ಹಾಗೂ ಆಸಕ್ತಿಗಳು ಜೇಮ್ಸ್ ಅವರ ಹವ್ಯಾಸ ಹಾಗೂ ಆಸಕ್ತಿಗಳ ಜೊತೆಗೆ ಹೊಂದಾಣಿಕೆ ಆಗುತ್ತಿದ್ದ ಕಾರಣದಿಂದ ಜೇಮ್ಸ್ ಆಕೆಯ ಖಾತೆಯ ಕಡೆಗೆ ಆಕರ್ಷಿತರಾಗಿದ್ದಾರೆ. ಅಲ್ಲದೇ ಆಕೆಯೊಂದಿಗೆ ಫೇಸ್ ಬುಕ್ ನಲ್ಲಿ ಸ್ನೇಹ ಮಾಡಿದ್ದಾರೆ. ಆದರೆ ಕೆಲವು ದಿನಗಳ ನಂತರ ಆ ಖಾತೆಯನ್ನು ನಿರ್ವಹಣೆ ಮಾಡುತ್ತಿರುವುದು ತನ್ನ ತಂದೆ ಎಂದು ತಿಳಿದಾಗ ಜೇಮ್ಸ್ ಶಾ ಕ್ ಆಗಿದ್ದಾರೆ. ಅಲ್ಲದೇ ಆನಂತರ ಅವರು ಫೇಸ್ ಬುಕ್ ನಲ್ಲಿ ನಕಲಿ ಖಾತೆಯೊಂದಿಗಿನ ಸ್ನೇಹ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ಈ ವಿಚಾರವಾಗಿ ಜೇಮ್ಸ್, ನನ್ನ ತಂದೆ ನನ್ನನ್ನು ಪರೀಕ್ಷಿಸುವ ಸಲುವಾಗಿ ಇಂತಹದೊಂದು ನಕಲಿ ಖಾತೆಯನ್ನು ಸೃಷ್ಟಿ ಮಾಡಿದ್ದರು. ಅಲ್ಲದೇ ಅವರು ವೈಯಕ್ತಿಕ ಜೀವನದಲ್ಲಿ ಹೇಗೆ ಇರುತ್ತೇನೆ, ನನ್ನ ಚಟುವಟಿಕೆಗಳು ಏನು ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ಇಂತಹ ಕಾರ್ಯವೊಂದನ್ನು ಮಾಡಿದ್ದರು ಎಂದು ಹೇಳಿದ್ದಾರೆ. ಒಟ್ಟಾರೆ ಜೇಮ್ಸ್ ಮೊರಿಸಿನಿ ತಮ್ಮ ತಂದೆಯಿಂದಲೇ ಫೂಲ್ ಆಗಿದ್ದ ವಿಚಾರವನ್ನು ನೆನಪಿಸಿಕೊಂಡು ಅದನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

Leave A Reply

Your email address will not be published.