ಫುಲ್ ಟೈಂ ಉದ್ಯೋಗದ ಜೊತೆಗೆ ಬಿರಿಯಾನಿ ಮಾರೋ ಇಂಜಿನಿಯರ್ ಗಳು: ಇವರ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!

Entertainment Featured-Articles News

ಉದ್ಯೋಗ ಮಾಡಿ ದುಡಿದು ತಿನ್ನುವುದು, ಒಂದು ಸಂತೋಷದ, ಸ್ವತಂತ್ರದ ಜೀವನವನ್ನು ಕಟ್ಟಿಕೊಳ್ಳುವುದು ಸ್ವಾವಲಂಬಿ ಬದುಕಿನ ಲಕ್ಷಣವಾಗಿದೆ. ಇನ್ನು ಇಂದಿನ ದಿನಗಳಲ್ಲಿ ಅನೇಕರಿಗೆ ತಮ್ಮದೇ ಆದ ಸ್ವತಂತ್ರ ವ್ಯವಹಾರ ನಡೆಸುವ ಆಸಕ್ತಿಯಿದ್ದರೂ, ಅಂತಹ ಕನಸೊಂದನ್ನು ಕಂಡಿದ್ದರೂ ಸಹಾ ಆ ಕನಸು ನನಸು ಮಾಡಿಕೊಳ್ಳುವಲ್ಲಿ ಯಶಸ್ಸು ಪಡೆಯುವಲ್ಲಿ ಅಸಫಲರಾಗಿ, ತಮ್ಮ ಶೈಕ್ಷಣಿಕ ವಿದ್ಯಾರ್ಹತೆಗಾಗಿ ದೊರಕಿದ ಉದ್ಯೋಗ ಮಾಡುತ್ತಲೇ ಜೀವನವನ್ನು ಕಟ್ಟಿಕೊಂಡು ಬದುಕು ಸಾಗಿಸುತ್ತಾರೆ. ಆದರೆ ಮನಸ್ಸಿನಲ್ಲಿ ಒಂದು ಕೊರತೆ ಸದಾ ಕಾಡುತ್ತಿರುತ್ತದೆ.

ಆದರೆ ಕೆಲವರು ಮಾತ್ರ ತಾವು ಮಾಡುವ ಬ್ಯುಸಿನೆಸ್ ಆಲೋಚನೆಗಳನ್ನು, ಅದಕ್ಕಾಗಿ ಮಾಡಿದ ಯೋಜನೆಗಳನ್ನು ಸಾಕಾರ ಮಾಡಿಕೊಳ್ಳಬೇಕೆಂದು ಪ್ರಯತ್ನ ಮಾಡಿ ಯಶಸ್ಸನ್ನು ಪಡೆಯುತ್ತಾರೆ. ನಾವಿಂದು ನಿಮಗೆ ಅಂತಹುದೇ ಒಂದು ಸ್ಪೂರ್ತಿಯ ಕಥೆಯನ್ನು ಹೇಳಲು ಹೊರಟಿದ್ದೇವೆ. ಉದ್ಯೋಗದ ಜೊತೆಗೆ ತಮ್ಮ ಆಲೋಚನೆಗೆ ಸಹಾ ರೆಕ್ಕೆ ಕಟ್ಟಿದ ಯುವಕರ ಪ್ರೇರಣೆಯ ಕಥೆಯೊಂದನ್ನು ನಾವು ಹೇಳುತ್ತಿದ್ದು, ಈ ಯುವಕರ ಶ್ರಮದ ಬಗ್ಗೆ ತಿಳಿದ ಮೇಲೆ ನಿಮಗೂ ಸಹಾ ಒಂದು ಮೆಚ್ಚುಗೆ ನೀಡಬೇಕೆಂದು ಅನಿಸಿದೇ ಇರದು.

ಹೌದು, ಇಬ್ಬರು ಯುವಕರು ಈಗಾಗಲೇ ಕೈ ತುಂಬಾ ಸಂಬಳ ಬರುವ ಉದ್ಯೋಗದಲ್ಲಿದ್ದಾರೆ.‌ ಆದರೆ ಅವರು ಉದ್ಯೋಗದ ಜೊತೆಗೆ ಒಂದು ಬಿರಿಯಾನಿ ಬಂಡಿಯನ್ನು ನಡೆಸುತ್ತಾರೆ. ಹಾಗಾದರೆ ಬನ್ನಿ ಈ ಯುವ ಸಾಧಕರ ಬಗ್ಗೆ ತಿಳಿದುಕೊಳ್ಳೋಣ. ಒಡಿಶಾದ ಮಲ್ಕನ್ ಗಿರಿಯಲ್ಲಿ ಕಲೆಕ್ಟರ್ ಆಫೀಸಿನ ಬೀದಿಯಲ್ಲಿ ಒಂದು ವಿಶೇಷವಾದ ಫುಡ್ ಕೋರ್ಟ್ ಇದೆ. ಇದರ ಹೆಸರು ‘ಇಂಜಿನಿಯರ್ ಬಂಡಿ’ ಇದ್ದು, ಇಲ್ಲಿ ಇಬ್ಬರು ಇಂಜಿನಿಯರ್ ಗಳು ರಾತ್ರಿ ವೇಳೆ ಜನರಿಗೆ 2021 ರಿಂದ ರುಚಿಯಾದ ಬಿರಿಯಾನಿ, ಚಿಕನ್ ಟಿಕ್ಕಾ ಪೂರೈಕೆ ಮಾಡುತ್ತಿದ್ದಾರೆ.

ಸುಮಿತ್ ಮತ್ತು ಪ್ರಿಯಂ ಎನ್ನುವ ಇಬ್ಬರು ಸ್ನೇಹಿತರು ಈ ಬಿರಿಯಾನಿ ಬಂಡಿಯ ಮಾಲೀಕರಾಗಿದ್ದಾರೆ. ಹಾಗೆ‌ಂದು ಇವರು ವೃತ್ತಿ ಪರ ಶೆಫ್ ಗಳಲ್ಲ. ಬದಲಾಗಿ ಇಬ್ಬರೂ ಸಹಾ ಇಂಜಿನಿಯರ್ ಗಳಾಗಿದ್ದಾರೆ. ಈ ಇಬ್ಬರೂ ಸಹಾ ಬಾಲ್ಯ ಸ್ನೇಹಿತರಾಗಿದ್ದಾರೆ. ಕೋವಿಡ್ 19 ಪ್ರಾರಂಭವಾದ ಮೇಲೆ ಇಬ್ಬರೂ ವರ್ಕ್ ಫ್ರಂ ಹೋಂ ಮಾಡುತ್ತಿದ್ದು, ಆಫೀಸ್ ಕೆಲಸ ಮುಗಿಸಿದ ಬಿರಿಯಾನಿ ತಿನ್ನಲು ಹೋಗುತ್ತಿದ್ದರು. ಆದರೆ ರಸ್ತೆ ಬದಿಯ ಗಾಡಿಗಳಲ್ಲಿ ಸ್ವಚ್ಚತೆಯ ಬಗ್ಗೆ ಪ್ರಶ್ನೆ ಏಳುವುದು ಸಹಜವಾಗಿತ್ತು ಏಳುತ್ತದೆ.

ಅಲ್ಲದೇ ಇವರು ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ, ರಸ್ತೆ ಬದಿಯ ಬಂಡಿಗಳಲ್ಲಿ ತಿನ್ನುವುದು ಅನೇಕರ ಆಸಕ್ತಿ ಒಂದಾದರೆ, ಇನ್ನೊಂದು ಕಡೆ ಅನೇಕರಿಗೆ ಇದೇ ಅನಿವಾರ್ಯವೂ ಆಗಿರುತ್ತದೆ. ಹೀಗೆ ಒಂದು ದಿನ ನಾವು ಬಿರಿಯಾನಿ ತಿನ್ನಲು ಹೋದಾಗ ಆ ಬಂಡಿ ಒಂದು ಕಸದ ತೊಟ್ಟಿಗೆ ಹತ್ತಿರವಾಗಿತ್ತು. ಅಲ್ಲದೇ ಅವರ ಬಿರಿಯಾನಿಯಲ್ಲಿ ಬಳಿಸಿದ ಮಾಂಸ ಕೂಡಾ ಚೆನ್ನಾಗಿರಲಿಲ್ಲ ಎನ್ನುವುದು ಅರ್ಥವಾಯಿತು.

ಆಗಲೇ ನಮಗೆ ಇಷ್ಟು ಜನರು ತಿನ್ನುವ ಆಹಾರದ ಗುಣಮಟ್ಟ ಹೀಗೆ ಇರುವುದು ಎಷ್ಟು ಸರಿ? ಎನ್ನುವ ಆಲೋಚನೆ ಮೂಡಿತು. ಆಗಲೇ ನಮಗೆ ನಮ್ಮದೇ ಫುಡ್ ಬ್ಯುಸಿನೆಸ್ ಆರಂಭಿಸುವ ಆಲೋಚನೆಯೊಂದು ಮೂಡಿತು. ನಮ್ಮ ಬಂಡೆಯಲ್ಲಿ ಕ್ವಾಲಿಟಿ ಆಹಾರದ ಜೊತೆಗೆ ಸ್ವಚ್ಚತೆಗೆ ಮೊದಲ ಆದ್ಯತೆಯನ್ನು ನೀಡಬೇಕೆಂದು ನಾವು ನಿರ್ಧಾರ ಮಾಡಿದೆವು. ಆದರೆ ನಾವು ಬಿರಿಯಾನಿ ಮಾಡುವುದರಲ್ಲಿ ನಿಪುಣರೇನಲ್ಲ, ಮನೆಯಲ್ಲಿ ಅಮ್ಮನಿಂದ ಮಾಡುವುದನ್ನು ಕಲಿತುಕೊಂಡರು.

ಅನಂತರ ಅವರು ಅಗತ್ಯ ಇರುವ ಸಾಮಗ್ರಿಗಳು ಎಲ್ಲಿ ಸಿಗುತ್ತದೆ, ಮೆನು ಸಿದ್ಧಪಡಿಸುವುದು ಹೇಗೆ ಹೀಗೆ ಹಲವು ವಿಚಾರಗಳ ಕುರಿತಾಗಿ ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿದರು. ನಂತರ ಬಿರಿಯಾನಿ ಬಿಟ್ಟು ಉಳಿದ ತಿನಿಸು ತಯಾರಿಸುವ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳುವುದು, ಬಂಡಿಗಾಗಿ ಸರಿಯಾದ ಜಾಗವನ್ನು ಹುಡುಕುವುದು ಹೀಗೆ ಎಲ್ಲಾ ವಿಷಯಗಳ ಕಡೆಗೆ ಗಮನವನ್ನು ನೀಡಿದರು. ತಮ್ಮನ್ನು ತಾವು ಎಲ್ಲಾ ರೀತಿಯಲ್ಲಿ ಹೊಸ ಬ್ಯುಸಿನೆಸ್ ಗಾಗಿ ಸಜ್ಜುಗೊಳಿಸಿಕೊಂಡರು.

ಹೀಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡ ನಂತರ‌ ಮಾರ್ಚ್ 2021 ರಲ್ಲಿ ಈ ಇಬ್ಬರು ಗೆಳೆಯರು ತಮ್ಮ ಬಿರಿಯಾನಿ ಬಂಡಿಗೆ ಇಂಜಿನಿಯರ್ ಬಂಡಿ ಎನ್ನುವ ನಾಮಕರಣವನ್ನು ಮಾಡಿ ತಮ್ಮ ಬಿರಿಯಾನಿ ಬ್ಯುಸಿನೆಸ್ ಆರಂಭಿಸಿಯೇ ಬಿಟ್ಟರು. ಇವರ ಬಿರಿಯಾನಿ ಬಂಡಿ ಸಹಾ ಬಹಳ ಬೇಗ ಜನರ ಮೆಚ್ಚುಗೆಯನ್ನು ಪಡೆದುಕೊಂಡಿತು ಮತ್ತು ಬಿರಿಯಾನಿ ಹಾಗೂ ಚಿಕನ್ ಟಿಕ್ಕಾ ರುಚಿ ಜನರಿಗೆ ಪ್ರಿಯವಾಗಿದೆ. ಮಾಸಿಕ 45 ಸಾವಿರ ಗಳಿಸ್ತಾರೆ ಇವರು. ಉದ್ಯೋಗದ ಜೊತೆಗೆ ಸುಮಿತ್ ಮತ್ತು ಪ್ರಿಯಂ ಬಿರಿಯಾನಿ ಬಂಡಿ ಸಹಾ ನಡೆಸುತ್ತಿದ್ದಾರೆ.‌

Leave a Reply

Your email address will not be published.