ಫುಲ್ ಜೋಶ್ ನಿಂದ ಸಮಂತಾ ಹಾಡಿಗೆ ಹೆಜ್ಜೆ ಹಾಕಿದ ನಟಿಗೆ ಹೀಗೆಲ್ಲಾ ಅನ್ನೋದಾ ನೆಟ್ಟಿಗರು!!

Written by Soma Shekar

Published on:

---Join Our Channel---

ಹಿಂದಿ ಕಿರುತೆರೆಯ ನಟಿ ಹಾಗೂ ಓಟಿಟಿ ಬಿಗ್ ಬಾಸ್ ಮೂಲಕ ದೊಡ್ಡ ಜನಪ್ರಿಯತೆ ಪಡೆದಿರುವ ಉರ್ಫಿ ಜಾವೇದ್ ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ವಿಷಯವಾಗಿ ಮಾದ್ಯಮಗಳಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಉರ್ಫಿ ಜಾವೇದ್ ನೀಡುವ ಹೇಳಿಕೆಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಉರ್ಫಿ ತೊಡುವ ವಸ್ತ್ರಗಳ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗಳೇ ನಡೆಯುತ್ತದೆ ಹಾಗೂ ನೆಟ್ಟಿಗರು ಉರ್ಫಿಯ ಡ್ರೆಸ್ ಗಳ ಕುರಿತಾಗಿ ಸಿಕ್ಕಾಪಟ್ಟೆ ಟ್ರೋಲ್ ಸಹಾ ಮಾಡುವುದು ನಡೆಯುತ್ತಲೇ ಇರುತ್ತದೆ.

ಈಗ ಉರ್ಫಿ ಹೇಳಿಕೆ ಅಥವಾ ಡ್ರೆಸ್ ಗಳ ವಿಚಾರವಾಗಿ ಅಲ್ಲದೇ ಬೇರೊಂದು ವಿಷಯವಾಗಿ ಸುದ್ದಿಯಾಗಿದ್ದಾರೆ ಮತ್ತು ಮತ್ತೊಮ್ಮೆ ನೆಟ್ಟಿಗರಿಂದ ಟ್ರೋಲ್ ಗೆ ಒಳಗಾಗಿದ್ದಾರೆ. ಹೌದು ಈ ಬಾರಿ ಉರ್ಫಿ ಡಾನ್ಸ್ ಮಾಡಿ ಸುದ್ದಿ ಮಾಡಿದ್ದಾರೆ. ಹಾಗಾದರೆ ಉರ್ಫಿ ಮಾಡಿದ್ದು ಯಾವ ಡಾನ್ಸ್ ಅಂತೀರಾ?? ಇತ್ತೀಚಿಗೆ ಸೋಶಿಯಲ್ ಮೀಡಿಯಾ ದಲ್ಲಿ ಸಂಚಲನವನ್ನು ಸೃಷ್ಟಿಸಿರುವ ಹಾಡು ಎಂದರೆ ಅದು ಪುಷ್ಪ ಸಿನಿಮಾದ ಸಮಂತಾ ಹೆಜ್ಜೆ ಹಾಕಿರುವ ಐಟಂ ಸಾಂಗ್. ಈ ಹಾಡು ಸೃಷ್ಟಿಸಿರುವ ಅಬ್ಬರ ಅಷ್ಟಿಷ್ಟಲ್ಲ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.

ಬಾಲಿವುಡ್ ನಿಂದ ಹಿಡಿದು ದಕ್ಷಿಣದ ನಾಲ್ಕು ಭಾಷೆಗಳ ಸಿನಿಮಾ ರಂಗಗಳಲ್ಲಿ ಸಹಾ ಸಮಂತಾ ಹೆಜ್ಜೆ ಹಾಕಿರುವ ಹಾಡು ದೊಡ್ಡ ಸದ್ದು ಮಾಡಿದೆ. ಹೀಗೆ ಭರ್ಜರಿ ಯಶಸ್ಸನ್ನು ಪಡೆದಿರುವ ಈ ಹಾಡಿಗೆ ಹೆಜ್ಜೆ ಹಾಕಿರುವ ಉರ್ಫಿ ಜಾವೇದ್ ಈ ವೀಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉರ್ಫಿ ಹಂಚಿಕೊಂಡ ವೀಡಿಯೋ ದೊಡ್ಡ ಮಟ್ಟದಲ್ಲಿ ವೀಕ್ಷಣೆ ಪಡೆಯುವುದರ ಜೊತೆಗೆ ನೆಟ್ಟಿಗರ ವ್ಯಂಗ್ಯಕ್ಕೂ ಗುರಿಯಾಗಿದೆ‌.

ಹೌದು, ಉರ್ಫಿ ಬಹಳ ಜೋಶ್ ಮತ್ತು ಖುಷಿಯಿಂದ ಡಾನ್ಸ್ ಮಾಡಿ, ಹಂಚಿಕೊಂಡ ವೀಡಿಯೋವನ್ನು ನೋಡಿದ ನೆಟ್ಟಿಗರು ನಟಿ ಉರ್ಫಿಯನ್ನು ಲೋ ಬಜೆಟ್ ಸಮಂತಾ ಎಂದು ಕರೆದಿದ್ದಾರೆ. ಸಮಂತಾ ಹಾಡಿಗೆ ಹೆಜ್ಜೆ ಹಾಕಿ ದೊಡ್ಡ ಸದ್ದು ಮಾಡಿದರೆ, ಈಗ ಅದೇ ಹಾಡಿಗೆ ಹೆಜ್ಜೆಯನ್ನು ಹಾಕಿದ ಉರ್ಫಿ ಮಾತ್ರ ಭರ್ಜರಿ ಟ್ರೋಲ್ ಆಗುತ್ತಿದ್ದಾರೆ. ಇನ್ನು ಕೆಲವೇ ದಿನಗಳ ಹಿಂದೆಯಷ್ಟೇ ಉರ್ಫಿ ಮದುವೆಯ ವಿಚಾರವಾಗಿ ಮಾತನಾಡಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದ್ದರು.

Leave a Comment