ಫುಟ್ ಪಾತ್ ಮೇಲೆ 2 ವರ್ಷದಿಂದ ಜೀವನ ನಡೆಸಿದ್ದಾರೆ ಮಾಜಿ ಸಿಎಂ ನಾದಿನಿ:ಶಿಕ್ಷಕಿ, ಅಥ್ಲೀಟ್ ಆಗಿದ್ದ ಈಕೆ ಬದುಕು ಹೀಗೆ ಆಗಿದ್ದೇಕೆ??

Written by Soma Shekar

Published on:

---Join Our Channel---

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಹತ್ತು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತವನ್ನು ನಡೆಸಿದವರು. ಇಂದು ರಾಜಕಾರಣದಲ್ಲಿ ಸಣ್ಣ ಪದವಿ ಉಳ್ಳವರ ಕುಟುಂಬ ಹಾಗೂ ಸಂಬಂಧಿಕರು ಸಹಾ ಶ್ರೀಮಂತ ಬದುಕು ಬದುಕುವಾಗ, ಮುಖ್ಯಮಂತ್ರಿ ಅವರ ಕುಟುಂಬಸ್ಥರು ಎಂದ ಮೇಲೆ ಆರ್ಥಿಕವಾಗಿ ಬಹಳ ಸದೃಢವಾಗಿ ಇರುತ್ತಾರೆ ಎನ್ನುವುದು ಕೂಡಾ ವಾಸ್ತವ ಅಲ್ಲವೇ?? ಆದರೆ ಬುದ್ಧದೇವ್ ಅವರ ಪತ್ನಿಯ ಸಹೋದರಿ ಅಂದರೆ ಅವರ ನಾದಿನಿ ಮಾತ್ರ ಬೀದಿ ಬೀದಿ ಅಲೆಯುತ್ತಾ, ಫುಟ್ ಪಾತ್ ಮೇಲೆ ಜೀವನ ನಡೆಸುತ್ತಿದ್ದಾರೆ ಎಂದರೆ ಆಶ್ಚರ್ಯ ಎನಿಸದರೂ ವಾಸ್ತವವಾಗಿದೆ‌‌.

ಬುದ್ಧದೇವ್ ಭಟ್ಟಾಚಾರ್ಯ ಅವರ ನಾದಿನಿಯ ಹೆಸರು ಇರಾ ಬಸು. ಈಕೆ ಅಕ್ಷರಶಃ ನಿರ್ಗತಿಕರಾಗಿ ಬೀದಿಗೆ ಬಂದಿದ್ದಾರೆ. ವೈರಾಲಜಿಯಲ್ಲಿ ಪಿ ಹೆಚ್ ಡಿ ಮಾಡಿರುವ ಆಕೆಯ ಬಾಳು ನೋಡಿದರೆ ಮನಸ್ಸಿಗೆ ವೇದನೆ ಆಗದೇ ಇರದು. ಈಕೆ ರಾಜ್ಯ ಮಟ್ಟದ ಅಥ್ಲೀಟ್ ಕೂಡಾ ಆಗಿದ್ದವರು ಎನ್ನುವುದು ಸಹಾ ಆಶ್ಚರ್ಯ ಮೂಡಿಸುತ್ತದೆ‌. ಇರಾ ಬಸು ಹಿಂದೊಮ್ಮೆ ಪ.ಬಂಗಾಳದ 24 ಪರಗಣ ಜಿಲ್ಲೆಯ ಪ್ರಿಯನಾಥ್ ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ದರು.

ಆಕೆ 2009 ರಲ್ಲಿ ಶಾಲಾ ಶಿಕ್ಷಕಿ ವೃತ್ತಿಯಿಂದ ನಿವೃತ್ತಿಯನ್ನು ಪಡೆದುಕೊಂಡರು. ಆಗ ಅವರು ಬಾರಾ ನಗರದಲ್ಲಿ ವಾಸಿಸುತ್ತಿದ್ದರು. ನಂತರ ಅವರು ಖಾರ್ದಾದ ಲಿಚು ಬಗಾನ್ ಪ್ರದೇಶದಲ್ಲಿ ವಾಸಿಸುತ್ತಿದ್ದವರು ಇದ್ದಕ್ಕಿದ್ದಂತೆ ಕಣ್ಮರೆಯಾದರು. ಅದಾದ ಕೆಲವು ದಿನಗಳ ನಂತರ ಅವರು ಡನ್ ಲಪ್ ಏರಿಯಾದ ರಸ್ತೆಗಳಲ್ಲಿ ಕಾಣಿಸಿಕೊಂಡರು. ನಿವೃತ್ತಿ ನಂತರ ಅವರಿಗೆ ಪಿಂಚಣಿಗೆ ದಾಖಲೆಗಳನ್ನು ನೀಡಲು ಹೇಳಿದರೂ ಅವರು ಶಾಲೆಗೆ ದಾಖಲೆಗಳನ್ನು ನೀಡಿರಲಿಲ್ಲ ಎನ್ನಲಾಗಿದೆ.

ಆರ್ಟ್ಯಾ ಜಾನ್ ಸಂಸ್ಥೆ ಅವರನ್ನು ಗುರುತಿಸಿ ಈ ವರ್ಷ ಶಿಕ್ಷಕರ ದಿನಾಚರಣೆ ದಿನ ಅವರನ್ನು ಸನ್ಮಾನಿಸಿದ್ದು, ಇರಾ ಅವರು ತಮ್ಮನ್ನು ವಿದ್ಯಾರ್ಥಿಗಳು ಇಂದಿಗೂ ಗುರುತಿಸುವುದು ನೋಡಿ ಖುಷಿಯಾಗುತ್ತದೆ ಎ‌ಂದು ಅವರು ಭಾವುಕರಾಗಿದ್ದಾರೆ. ತಾನು ಶಿಕ್ಷಕಿಯಾಗಿ ಕೆಲಸ ಆರಂಭಿಸಿದ್ದು ನನ್ನ ಸಾಮರ್ಥ್ಯದ ಆಧಾರದ ಮೇಲೆ. ನಾನು ಬುದ್ಧದೇವ ಭಟ್ಟಾಚಾರ್ಯ ಕುಟುಂಬದಿಂದ ಯಾವುದೇ ಪ್ರಯೋಜನ ಬಯಸಲಿಲ್ಲ. ವಿಐಪಿ ಎನ್ನುವ ಗುರುತು ನನಗೆ ಬೇಕಾಗಿಲ್ಲ ಎಂದಿದ್ದಾರೆ.

ಇರಾ ಅವರ ಪ್ರಸ್ತುತ ಪರಿಸ್ಥಿತಿ ಬಗ್ಗೆ ಸುದ್ದಿಯಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಅದು ವೈರಲ್ ಆದ ಮೇಲೆ ಸ್ಥಳೀಯ ಆಡಳಿತವು ಅವರನ್ನು ಆ್ಯಂಬುಲೆನ್ಸ್ ನಲ್ಲಿ ಡನ್ ಲಪ್ ಪ್ರದೇಶದಿಂದ ಬಾರ ನಗರ್ ಪ್ರದೇಶದ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ. ಆರೋಗ್ಯ ತಪಾಸಣೆ ನಡೆಸಿದೆ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಲ್ಕತ್ತಾ ನಗರದ ಪ್ರಮುಖ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿದೆ ಎ‌ಂದು ತಿಳಿದು ಬಂದಿದೆ.

Leave a Comment