ಫುಟ್ಬಾಲ್ ಬುಕ್ ಮಾಡಿದವನಿಗೆ, ಡಿಲೆವರಿ ಆಗಿದ್ದು ಹೆಂಗಸರ ಒಳ ಉಡುಪು: ಕಂಪನಿ ಕೊಡ್ತು ಶಾಕಿಂಗ್ ಉತ್ತರ

0
199

ಆನ್ ಲೈನ್ ನಲ್ಲಿ ಬುಕ್ ಮಾಡಿದ ವಸ್ತು ಒಂದಾದರೆ ಡಿಲೆವರಿ ಆಗುವುದು ಬೇರೆ ಇನ್ನಾವುದೋ ವಸ್ತು ಎನ್ನುವ ವಿಷಯಗಳು, ಸುದ್ದಿಗಳನ್ನು ಈಗಾಗಲೇ ನೋಡಿದ್ದೇವೆ. ಕೆಲವರಿಗೆ ಇದರ ಅನುಭವ ಕೂಡಾ ಆಗಿದೆ. ಕೆಲವೇ ದಿನಗಳ ಹಿಂದೆ ದುಬಾರಿ ಬೆಲೆಯ ಫೋನ್ ಆರ್ಡರ್ ಮಾಡಿದವರಿಗೆ ಸೋಪ್ ಡಿಲೆವರಿ ಆಗಿದ್ದ ಘಟನೆ ವರದಿಯಾಗಿತ್ತು. ಅದಾದ ನಂತರ ಮತ್ತೊಬ್ಬರಿಗೆ ಖಾಲಿ ಬಾಕ್ಸ್ ಬಂದ ಘಟನೆ ಸಹಾ ನಡೆದಿತ್ತು. ಇದೀಗ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು, ಮಿಂತ್ರಾ ದಲ್ಲಿ ಆರ್ಡರ್ ಮಾಡಿದ್ದ ವ್ಯಕ್ತಿಗೆ ವಸ್ತು ಡಿಲೆವರಿ ಆದ ಮೇಲೆ ಅದರಲ್ಲಿ ಇದ್ದ ವಸ್ತು ಕಂಡು ಹೌಹಾರುವಂತಾಗಿದೆ.

ಒಡಿಶಾದ ರಾಜಧಾನಿ ಭುವನೇಶ್ವರದ ನಿವಾಸಿ ಕಶ್ಯಪ್ ಎಂಬುವವರು ಮಿಂತ್ರ ಆನ್ಲೈನ್ ಶಾಪಿಂಗ್ ಫ್ಲಾಟ್ ಫಾರಂ ಮೂಲಕ ಫುಟ್ಬಾಲ್ ಸ್ಟಾಕಿಂಗ್ಸ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಡಿಲೆವರಿ ಪಡೆದ ಮೇಲೆ ಅವರು ಬಾಕ್ಸ್ ಓಪನ್ ಮಾಡಿ ನೋಡಿ ಶಾ ಕ್ ಆಗಿದ್ದಾರೆ. ಏಕೆಂದರೆ ಕಶ್ಯಪ್ ಅವರಿಗೆ ಅವರು ಆರ್ಡರ್ ಮಾಡಿದ ವಸ್ತು ಬಂದಿರಲಿಲ್ಲ. ಬದಲಾಗಿ ಅದರಲ್ಲಿ ಮಹಿಳೆಯರ ಒಳ ಉಡುಪುಗಳು ಇದ್ದವು ಎನ್ನಲಾಗಿದೆ. ಅಂದರೆ ಫುಟ್ಬಾಲ್ ಬದಲಿಗೆ ಕಪ್ಪು ಬಣ್ಣದ ಬ್ರಾ ವನ್ನು ಕಂಪನಿ ಡಿಲೆವರಿ ಮಾಡಿದೆ. ಈ ಘಟನೆ ಅಕ್ಟೋಬರ್ 12 ರಂದು ನಡೆದಿದೆ.

ಕಶ್ಯಪ್ ಮಿಂತ್ರಾದ ಕಸ್ಟಮರ್ ಕೇರ್ ಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಆದರೆ ಕಂಪನಿ ಅವರಿಗೆ ಸರಿಯಾಗಿ ಸ್ಪಂದಿಸಿಲ್ಲ ಹಾಗೂ ಪ್ರಾಡಕ್ಟ್ ಬದಲಾಯಿಸಿಕೊಡಲು ನಿರಾಕರಣೆ ಮಾಡಿದೆ. ಇದರಿಂದ ಬೇಸತ್ತ ಕಶ್ಯಪ್ ಅವರು ತನಗಾದ ಈ ಮೋಸದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಶ್ಯಪ್ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅನೇಕರು ಕಶ್ಯಪ್ ಬಗ್ಗೆ ಕನಿಕರದ ಮಾತನಾಡಿದರೆ , ಇನ್ನೂ ಕೆಲವರು ಆ ಒಳ ಉಡುಪು ಧರಿಸುವುದು ಹೇಗೆ ಎನ್ನುವ ಸಲಹೆ ನೀಡಲು ಮುಂದಾಗಿದ್ದಾರೆ.

ಇದಾದ ನಂತರ‌ ಮಿಂತ್ರಾ ಕಶ್ಯಪ್ ಅವರ ಪೋಸ್ಟ್ ವೈರಲ್ ಆದ ಮೇಲೆ ಅವರಿಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಕ್ಷಮೆಯನ್ನು ಕೋರಿದೆ ಅಲ್ಲದೇ ಆದಷ್ಟು ಶೀಘ್ರದಲ್ಲೇ ಅವರ ಸಮಸ್ಯೆಗೆ ಪರಿಹಾರವನ್ನು ಸಹಾ ನೀಡುವುದಾಗಿ ಭರವಸೆಯನ್ನು ನೀಡಿದೆ. ಒಟ್ಟಾರೆ ಪೋಸ್ಟ್ ವೈರಲ್ ಆಗುವವರೆಗೆ ಮಿಂತ್ರಾ ಮೌನ ವಹಿಸಿದ್ದು ಏಕೆ?? ಇದು ಮಾತ್ರ ಉತ್ತರವಿಲ್ಲದ ಪ್ರಶ್ನೆ. ಆದರೆ ಈಗ ತನ್ನ ಮರ್ಯಾದೆ ಉಳಿಸಿಕೊಳ್ಳಲು ಮುಂದಾಗಿದೆ.

LEAVE A REPLY

Please enter your comment!
Please enter your name here