ಫಿಲ್ಮ್ ಫೇರ್ ಪ್ರಶಸ್ತಿ ವಿರುದ್ಧ ಸಿಡಿದೆದ್ದ ಕಂಗನಾ: ನಾಮಿನೇಷನ್ ನಿಂದ ನಟಿಯನ್ನು ಹೊರ ಹಾಕಿದ ಫಿಲ್ಮ್ ಫೇರ್!!
ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ವಿ ವಾ ದಗಳು ಎನ್ನುವುದು ಸಾಮಾನ್ಯವಾಗಿದೆ. ನಟಿ ಕಂಗನಾ ರಣಾವತ್ ಸಿನಿಮಾ ವಿಚಾರಗಳಿಗಿಂತಲೂ ಹೆಚ್ಚಾಗಿ ಮೈ ಮೇಲೆ ಎಳೆದುಕೊಳ್ಳುವ ವಿ ವಾ ದಗಳ ಕಾರಣದಿಂದಾಗಿಯೇ ಸಾಕಷ್ಟು ಸುದ್ದಿಯಾಗುತ್ತಾರೆ. ನಟಿಯು ನೀಡುವ ಹೇಳಿಕೆಗಳು ದೇಶ ವ್ಯಾಪಿಯಾಗಿ ಚರ್ಚೆಯನ್ನು ಹುಟ್ಟು ಹಾಕುತ್ತದೆ. ಪರ, ವಿ ರೋ ಧ ಹೇಳಿಕೆಗಳು, ಅಭಿಪ್ರಾಯಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದು ಬರುತ್ತದೆ. ಇದೀಗ ನಟಿ ಮತ್ತೊಮ್ಮೆ ಹೊಸ ವಿ ವಾ ದವೊಂದರ ಕಾರಣವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿಯು ಫಿಲ್ಮ್ ಫೇರ್ ಪ್ರಶಸ್ತಿಯ ವಿ ರು ದ್ಧ ಕಿಡಿಕಾರಿದ್ದು, ತಮ್ಮ ಅಸಮಾಧಾನವನ್ನು ಅವರು ಹೊರ ಹಾಕಿದ್ದಾರೆ. ಫಿಲ್ಮ್ ಫೇರ್ ಸಹಾ ನಟಿಯ ಮಾತಿಗೆ ಪ್ರತಿಕ್ರಿಯೆ ನೀಡಿದೆ.
ಕಂಗನಾ ರಣಾವತ್ ಫಿಲ್ಮ್ ಫೇರ್ ಆಯೋಜಕರ ಮೇಲೆ ಅಸಮಾಧಾನವನ್ನು ಹೊರಹಾಕಿದ್ದು, ಹಲವು ಆರೋಪಗಳನ್ನು ಮಾಡಿರುವುದು ಮಾತ್ರವೇ ಅಲ್ಲದೇ ತಾನು ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ ಸಹಾ ನೀಡಿದ್ದಾರೆ. ಇಷ್ಟಕ್ಕೂ ಇದಕ್ಕೆ ಕಾರವೇನು ಎನ್ನುವುದಾದರೆ, ಈ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಇತರೆ ನಾಯಕಿಯರ ಜೊತೆಗೆ ಕಂಗನಾ ಅವರನ್ನು ಸಹಾ ನಾಮಿನೇಟ್ ಮಾಡಲಾಗಿತ್ತು. ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗದಿದ್ದರೆ ಹಾಗೂ ಅಲ್ಲಿ ವೇದಿಕೆ ಮೇಲೆ ಡ್ಯಾನ್ಸ್ ಮಾಡದೇ ಇದ್ದರೆ ಪ್ರಶಸ್ತಿ ಸಿಗುವುದಿಲ್ಲ ಎಂದು ಅದರ ಆಯೋಜಕರು ನನಗೆ 2013 ರಲ್ಲೇ ಸ್ಪಷ್ವವಾಗಿ ಹೇಳಿದ್ದಾರೆ. ನೈತಿಕವಾಗಿ ಸರಿಯಿಲ್ಲದ ಯಾವುದೇ ಕಾರ್ಯಕ್ರಮಕ್ಕೂ ನಾನು ಬರುವುದಿಲ್ಲ ಎಂದು ಆಗಲೇ ಹೇಳಿದ್ದೆ.
ಸಮಾರಂಭಕ್ಕೆ ಬರದೇ ಇರುವವರಿಗೆ ಪ್ರಶಸ್ತಿ ನೀಡುವುದಿಲ್ಲ ಎನ್ನುವುದು ಅವರ ನಿಯಮವೇ ಆಗಿರುವಾಗ, ಪ್ರಶಸ್ತಿಗಾಗಿ ನಾಮ ನಿರ್ದೇಶನ ( ನಾಮಿನೇಷನ್ ) ಮಾಡುವುದಾದರೂ ಏತಕ್ಕೆ? ಎಂದು ನಟಿ ಪ್ರಶ್ನೆ ಮಾಡಿದ್ದಾರೆ. ಸಾಧಾರಣ ನಟಿಯರ ವಿ ರು ದ್ಧ ನನ್ನನ್ನು ಕಣಕ್ಕಿಳಿಸಿ, ಹ ತಾ ಶೆಯಿಂದ ಬ್ಲಾ ಕ್ ಮೇಲ್ ಕರೆಗಳನ್ನು ಮಾಡುವುದು ಏಕೆ? ಎಂದು ಸಹಾ ಪ್ರಶ್ನೆ ಮಾಡಿರುವ ನಟಿ ಕಂಗನಾ ರಣಾವತ್ ಫಿಲ್ಮ್ ಫೇರ್ ಮೇಲೆ ತಾನು ದೂರನ್ನು ಸಹಾ ದಾಖಲು ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. 2014 ರಿಂದ ನಾನು ಇಂತಹ ಪ್ರಶಸ್ತಿ ಸಮಾರಂಭಗಳನ್ನು ಬ್ಯಾನ್ ಮಾಡಿದ್ದರೂ, ಇಂದಿಗೂ ಅವರು ನನ್ನ ಹೆಸರನ್ನು ನಾಮಿನೇಟ್ ಮಾಡುತ್ತಿದ್ದಾರೆ ಎಂದು ನಟಿ ಕಿಡಿ ಕಾರಿದ್ದಾರೆ.
ನಟಿ ಕಂಗನಾ ರಣಾವತ್ ಹೀಗೆ ಈ ಬಾರಿ ತನ್ನ ಹೆಸರನ್ನು ನಾಮಿನೇಟ್ ಮಾಡಿರುವ ಫಿಲ್ಮ್ ಫೇರ್ ವಿ ರು ದ್ಧ ಆ ರೋ ಪಗಳನ್ನು ಮಾಡಿ, ವಾಗ್ದಾಳಿಯನ್ನು ನಡೆಸಿದ್ದು ಮಾತ್ರವೇ ಅಲ್ಲದೇ, ಫಿಲ್ಮ್ ಫೇರ್ ವಿ ರು ದ್ಧ ಕೇಸ್ ದಾಖಲು ಮಾಡುತ್ತೇನೆ ಎಂದು ಹೇಳಿದ ಬೆನ್ನಲ್ಲೇ ಫಿಲ್ಮ್ ಫೇರ್ ಅತ್ಯುತ್ತಮ ನಟಿ ನಾಮಿನೇಷನ್ ನ ಪಟ್ಟಿಯಿಂದ ನಟಿ ಕಂಗನಾ ರಣಾವತ್ ಹೆಸರನ್ನು ತೆಗೆದು ಹಾಕುವ ಮೂಲಕ ತಿರುಗೇಟು ನೀಡಿದೆ. ಈ ವಿಚಾರವಾಗಿ ಕಂಗನಾ ಯಾವ ಕ್ರಮವನ್ನು ತೆಗೆದುಕೊಳ್ಳುವರು ಎನ್ನುವುದನ್ನು ಕಾದು ನೋಡಬೇಕಾಗಿದೆ.