ಫಸ್ಟ್ ನೈಟ್ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಕೇಳಿ ದಂಗಾದ ಕರಣ್ ಮತ್ತು ರಣ್ವೀರ್!!

Entertainment Featured-Articles Movies News

ಬಾಲಿವುಡ್ ನ ಜನಪ್ರಿಯ ನಿರ್ಮಾಪಕ, ನಿರ್ದೇಶಕ ಮತ್ತು ನಿರೂಪಕ ಸಹಾ ಆಗಿರುವ ಕರಣ್ ಜೋಹರ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ಒಬ್ಬ ಪ್ರಭಾವಶಾಲಿ ಸೆಲೆಬ್ರಿಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕರಣ್ ಜೋಹರ್ ಕಿರುತೆರೆಯಲ್ಲಿ ಸಹಾ ಜನಜನಿತ. ಹಲವು ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿ ಹೆಸರು ಮಾಡಿರುವ ಅವರು ತಾವೇ ನಿರೂಪಣೆ ಮಾಡುವ ಕಾಫಿ ವಿತ್ ಕರಣ್ ಹೆಸರಿನ ಸೆಲೆಬ್ರಿಟಿ ಚಾಟ್ ಶೋ ಮೂಲಕ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಕಿರುತೆರೆಯಲ್ಲಿ ಸದ್ದು ಮಾಡಿದ್ದ ಈ ಜನಪ್ರಿಯ ಶೋ, ಈ ಬಾರಿ ಓಟಿಟಿ ಮಾದ್ಯಮಕ್ಕೆ ಅಡಿಯಿಟ್ಟಿದೆ.

ಕರಣ್ ಜೋಹರ್ ನಿರೂಪಣೆಯ ಕಾಫಿ ವಿತ್ ಕರಣ್ ಶೋ ಈ ಬಾರಿ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಬರಲಿದ್ದು, ಜುಲೈ 7 ರಂದು ಸಂಜೆ 7 ಗಂಟೆಗೆ ಮೊದಲ ಎಪಿಸೋಡ್ ಪ್ರಸಾರವಾಗಲಿದ್ದು, ಮೊದಲ ಎಪಿಸೋಡ್ ನಲ್ಲಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ನಟಿ ಆಲಿಯಾ ಭಟ್ ಸೆಲೆಬ್ರಿಟಿ ಗೆಸ್ಟ್ ಗಳಾಗಿ ಎಂಟ್ರಿ ನೀಡಲಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊದಲ ಎಪಿಸೋಡ್ ನ ಪ್ರೊಮೋ ವನ್ನು ಹಂಚಿಕೊಂಡಿದ್ದು, ಪ್ರೋಮೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ರಣ್ವೀರ್ ಹಾಗೂ ಆಲಿಯಾ ಈ ಹಿಂದೆ ಗಲ್ಲಿ ಬಾಯ್ ಸಿನಿಮಾದಲ್ಲಿ ಜೋಡಿಯಾಗಿ ಮಿಂಚಿದ್ದರು. ಈಗ ಅವರು ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಮತ್ತೊಮ್ಮೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಈ ಸಿನಿಮಾವನ್ನು ಕರಣ್ ಜೋಹರ್ ಅವರೇ ನಿರ್ದೇಶನ ಸಹಾ ಮಾಡುತ್ತಿದ್ದು, ಈಗ ಅವರ ಹೊಸ ಸಿನಿಮಾದ ನಾಯಕ, ನಾಯಕಿ ಇಬ್ಬರೂ ಅವರ ಚಾಟ್ ಶೋ ನ ಮೊದಲ ಎಪಿಸೋಡ್ ನ ಅತಿಥಿಗಳಾಗಿ ಆಗಮಿಸಿದ್ದಾರೆ.

ಶೋ ನಲ್ಲಿ ಕರಣ್ ಜೋಹರ್ ಆಲಿಯಾ ಮುಂದೆ ಕೆಲವೊಂದು ಪ್ರಶ್ನೆಗಳನ್ನು ಇಟ್ಟಿದ್ದಾರೆ. ಕರಣ್ ಜೋಹರ್ ಶೋ ಎಂದ ಮೇಲೆ ಅಲ್ಲಿ ಕೇಳುವ ಪ್ರಶ್ನೆಗಳು, ಸೆಲೆಬ್ರಿಟಿಗಳ ಕಡೆಯಿಂದ ಸಿಗುವ ಉತ್ತರ ಎರಡೂ ಸಹಾ ವಿಶೇಷವಾಗಿಯೇ ಇರುತ್ತದೆ. ಕಾಫಿ ವಿತ್ ಕರಣ್ ಶೋ ಇಂತಹ ವಿಚಾರಗಳಿಂದಾಗಿಯೇ ಪ್ರತಿ ಸೀಸನ್ ನಲ್ಲೂ ಸಹಾ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ ಹಾಗೂ ಕೆಲವು ಬಾರಿಯಂತೂ ಸೆಲೆಬ್ರಿಟಿಗಳು ನೀಡುವ ಉತ್ತರಗಳು ದೊಡ್ಡ ವಿ ವಾ ದ ಗಳನ್ನೇ ಸೃಷ್ಟಿಸಿದ ಉದಾಹರಣೆಗಳು ಸಹಾ ಇವೆ.

ಈ ಬಾರಿ ಕರಣ್ ಆಲಿಯಾ ಭಟ್ ಅವರನ್ನು, “ಮದುವೆ ಆದ ನಂತರ ಅರ್ಥವಾದ ಒಂದು ವಿಚಾರವನ್ನು ಹೇಳಿ” ಎನ್ನುವ ಪ್ರಶ್ನೆಯೊಂದನ್ನು ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ಆಲಿಯಾ ಭಟ್ “ಮೊದಲ ರಾತ್ರಿ ಎನ್ನುವುದು ಇರುವುದಿಲ್ಲ, ನೀವು ಸುಸ್ತಾಗಿರುತ್ತೀರಿ” ಎನ್ನುವ ಉತ್ತರವನ್ನು ನೀಡಿದ್ದಾರೆ. ಆಲಿಯಾ ನೀಡಿದ ಉತ್ತರವನ್ನು ಕೇಳಿ ಪಕ್ಕದಲ್ಲೇ ಇದ್ದ ನಟ ರಣ್ವೀರ್ ಸಿಂಗ್ ಬಿದ್ದು ಬಿದ್ದು ನಕ್ಕು ಎಂಜಾಯ್ ಮಾಡಿದ್ದಾರೆ. ಪ್ರೋಮೋ ಈಗ ವೈರಲ್ ಆಗಿದ್ದು ನೆಟ್ಟಿಗರು ವೈವಿದ್ಯಮಯ ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published.