ಫಲಿಸಲಿಲ್ಲ ಮಹಿಳಾ ನಿರ್ದೇಶಕಿಯ ಪ್ರಯತ್ನ: ಎಲ್ಲಾ ನಿರೀಕ್ಷೆಗಳಿಗೆ ಫುಲ್ ಸ್ಟಾಪ್ ಹಾಕಿದ ಸಮಂತಾ, ನಾಗಚೈತನ್ಯ

Entertainment Featured-Articles News

ದಕ್ಷಿಣ ಸಿನಿಮಾರಂಗದ ಸ್ಟಾರ್ ಜೋಡಿ, ಕ್ಯೂಟ್ ಕಪಲ್ ಎಂದೆಲ್ಲಾ ಹೆಸರಾಗಿದ್ದವರು ನಾಗಚೈತನ್ಯ ಮತ್ತು ಸಮಂತಾ ಜೋಡಿ. ಅವರ ಅಭಿಮಾನಿಗಳು ಈ ಜೋಡಿಯ ಬಗ್ಗೆ ಬಹಳಷ್ಟು ಖುಷಿ ಪಡುತ್ತಿದ್ದರು. ಎಲ್ಲವೂ ಸರಿ ಇದೆ ಎನ್ನುವಾಗಲೇ, ಕೆಲವು ವೈಯಕ್ತಿಕ ಕಾರಣಗಳಿಂದ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯುವ ಮೂಲಕ ಬೇರೆ ಬೇರೆಯಾಗಿದ್ದಾರೆ. ಈ ಜೋಡಿ ದೂರ ಆಗಿದ್ದನ್ನು ಕಂಡು ಅವರ ಅಭಿಮಾನಿಗಳು ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಸಮಂತ ಅಥವಾ ನಾಗಚೈತನ್ಯ ಇದುವರೆಗೂ ತಮ್ಮ ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ಎಲ್ಲೂ ಮಾತನಾಡಿಲ್ಲ.

ವೈಯಕ್ತಿಕ ಜೀವನದಿಂದ ಸಾಕಷ್ಟು ಚರ್ಚೆಗೆ ಒಳಪಟ್ಟ ಈ ಜೋಡಿ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆ ಬೇರೆಯಾದ ನಂತರವೂ ತಮ್ಮ ವೃತ್ತಿ ಸಂಬಂಧಿತ ವಿಷಯಗಳಿಂದಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ನಟಿ ಸಮಂತಾ ದಕ್ಷಿಣ ಸಿನಿಮಾರಂಗದಿಂದ ಹಿಡಿದು ಬಾಲಿವುಡ್ ವರೆಗೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಪುಷ್ಪ ಸಿನಿಮಾದಲ್ಲಿ ಸಮಂತ ಹೆಜ್ಜೆ ಹಾಕಿದ ಹಾಡು ಹೊಸ ದಾಖಲೆಯನ್ನೇ ಬರೆದಿದ್ದು ಮಾತ್ರವಲ್ಲದೇ ಸಮಂತಾ ದೇಶವ್ಯಾಪಿಯಾಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಇನ್ನೊಂದು ಕಡೆ ನಾಗಚೈತನ್ಯ ಲವ್ ಸ್ಟೋರಿ ಸಿನಿಮಾ ನಂತರ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಅವರು ಅಮೀರ್ ಖಾನ್ ಜೊತೆ ನಟಿಸಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಹೀಗೆ ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಮ್ಮ ತಮ್ಮ ಪ್ರಾಜೆಕ್ಟ್‌ ಗಳಲ್ಲಿ ತೊಡಗಿಕೊಂಡಿದ್ದಾರೆ. ವಿಚ್ಛೇದನದ ನಂತರ ಬೇರೆಯಾಗಿರುವ ಸಮಂತ ಹಾಗೂ ನಾಗಚೈತನ್ಯ ಅವರ ಕುರಿತಾಗಿ ಹೊಸದೊಂದು ವಿಚಾರವು ಈಗ ಅಭಿಮಾನಿಗಳ ವಲಯದಲ್ಲಿ ಸದ್ದು ಮಾಡುತ್ತಿದೆ.

ಹೌದು, ವೈಯಕ್ತಿಕ ಜೀವನದಲ್ಲಿ ಬೇರೆಯಾದ ಈ ಜೋಡಿಯು ತೆರೆಯ ಮೇಲೆ ಮತ್ತೊಮ್ಮೆ ಒಂದಾಗಲಿದ್ದಾರೆ ಎನ್ನುವ ವಿಷಯವೊಂದು ಈಗ ಹರಿದಾಡುತ್ತಿದ್ದು, ಈ ವಿಚಾರ ಈಗ ತೀವ್ರ ಕುತೂಹಲವನ್ನು ಮೂಡಿಸಿದೆ ಹಾಗೂ ಹೊಸ ಸಂಚಲನಕ್ಕೆ ಕಾರಣವಾಗಿದೆ. ತೆಲುಗಿನ ಸಿನಿಮಾ ನಿರ್ದೇಶಕಿ ನಂದಿನಿ ರೆಡ್ಡಿ ಅವರು ನಿರ್ದೇಶನ ಮಾಡಿದ್ದ, ‘ಓ ಬೇಬಿ’ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಯಶಸ್ಸನ್ನು ಸಹಾ ಪಡೆದುಕೊಂಡಿತ್ತು. ಈ ಸಿನಿಮಾದ ಒಂದು ದೃಶ್ಯದಲ್ಲಿ ನಾಗಚೈತನ್ಯ ಕೂಡ ನಟಿಸಿದ್ದಾರೆ.

ಓ ಬೇಬಿ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ನಂದಿನಿ ರೆಡ್ಡಿ ಅವರು ಹೊಸ ಸ್ಕ್ರಿಪ್ಟ್ ಒಂದರ ಕುರಿತಾಗಿ ಈ ಜೋಡಿಗೆ ಹೇಳಿದ್ದರು ಎನ್ನಲಾಗಿದ್ದು, ಆಗ ಸಮಂತಾ ಮತ್ತು ನಾಗಚೈತನ್ಯ ಗ್ರೀನ್ ಸಿಗ್ನಲ್ ನೀಡಿದ್ದರು ಎನ್ನಲಾಗಿದೆ. ಈಗ ನಂದಿನಿ ರೆಡ್ಡಿ ಅವರು ತಮ್ಮ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲು ಆಲೋಚನೆ ಮಾಡಿದ್ದಾರೆಂದೂ, ಅದಕ್ಕಾಗಿ ಸಮಂತಾ ಮತ್ತು ನಾಗಚೈತನ್ಯ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಈ ವಿಷಯದ ಕುರಿತಾಗಿ ಹೊಸ ಮಾಹಿತಿಯೊಂದು ಹೊರ ಬಂದಿದೆ.

ಈ ಹೊಸ ಸಿನಿಮಾದ ವಿಚಾರವಾಗಿ ನಂದಿನಿ ರೆಡ್ಡಿ ಅವರು ಸಮಂತಾ ಹಾಗೂ ನಾಗಚೈತನ್ಯ ಅವರನ್ನು ಸಂಪರ್ಕಿಸಿದ್ದು ಈ ಜೋಡಿ ಜೊತೆಯಾಗಿ ನಟಿಸಲು ಸಿದ್ಧರಿಲ್ಲ ಎನ್ನುವ ಉತ್ತರ ಸಿಕ್ಕಿದೆ ಎನ್ನಲಾಗಿದೆ. ಇದರಿಂದಾಗಿ ನಂದಿನಿ ರೆಡ್ಡಿ ಅವರು ನಾಗ ಚೈತನ್ಯ ಅವರ ಪಾತ್ರವನ್ನು ಹಾಗೇ ಇರಿಸಿ, ಸಮಂತಾ ಜಾಗಕ್ಕೆ ನಾಯಕಿಯಾಗಿ ನಟಿಸಲು ಬೇರೆ ನಟಿಯನ್ನು ಕರೆತರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸಮಂತಾ ಜಾಗವನ್ನು ತುಂಬುವ ಆ ನಟಿ ಯಾರಾಗಲಿದ್ದಾರೆ? ಕಾದು ನೋಡಬೇಕಾಗಿದೆ.

Leave a Reply

Your email address will not be published.