HomeEntertainmentಅದು ಡ್ಯಾನ್ಸ್ ಅಲ್ಲ: ಜಾಗತಿಕ ಪ್ರಶಸ್ತಿ ಗೆದ್ದ ನಾಟು ನಾಟು ಹಾಡಿನ ಬಗ್ಗೆ ನಿರ್ದೇಶಕಿ ಫರಾ...

ಅದು ಡ್ಯಾನ್ಸ್ ಅಲ್ಲ: ಜಾಗತಿಕ ಪ್ರಶಸ್ತಿ ಗೆದ್ದ ನಾಟು ನಾಟು ಹಾಡಿನ ಬಗ್ಗೆ ನಿರ್ದೇಶಕಿ ಫರಾ ಖಾನ್ ಶಾಕಿಂಗ್ ಮಾತು

Farah Khan : ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ನಂತರ ತ್ರಿಬಲ್ ಆರ್(RRR) ಸಿನಿಮಾ ತಂಡ ಇದೀಗ ತಮ್ಮ ದೃಷ್ಟಿಯನ್ನು ಆಸ್ಕರ್ (Oscar) ಕಡೆಗೆ ನೆಟ್ಟಿದೆ. ಇತ್ತೀಚಿಗಷ್ಟೇ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್(Golden Globe) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಶೀಘ್ರದಲ್ಲೇ ತ್ರಿಬಲ್ ಆರ್ ಆಸ್ಕರ್ ರೇಸ್(RRR Oscar) ಅನ್ನು ಅಧಿಕೃತವಾಗಿ ಪ್ರವೇಶ ಮಾಡಲಿದೆ ಎನ್ನುವ ಭರವಸೆ ಎಲ್ಲರಿಗೂ ಇದೆ. ಇದೇ ವಿಚಾರವಾಗಿ ಮಾತನಾಡಿರುವ ಬಾಲಿವುಡ್ ಸಿನಿಮಾ ನಿರ್ದೇಶಕಿ ಫರಾ‌ ಖಾನ್(Farah Khan) ತ್ರಿಬಲ್ ಆರ್ ಸಿನಿಮಾಗೆ ಅಕಾಡೆಮಿ ಅವಾರ್ಡ್ ಬರುವ ಅವಕಾಶಗಳು ದಟ್ಟವಾಗಿದೆ ಎನ್ನುವ ಮಾತನ್ನು ಅವರು ಹೇಳುವ ಮೂಲಕ ಸಿನಿಮಾ ಕುರಿತು ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ ಫರಾ ಖಾನ್(Farah khan) ತ್ರಿಬಲ್ ಆರ್(RRR) ಸಿನಿಮಾವನ್ನು, ವಿಶೇಷವಾಗಿ ಈ ಸಿನಿಮಾದ ನಾಟು ನಾಟು(Natu Natu Song) ಹಾಡನ್ನು ಹಾಡಿ ಹೊಗಳಿದ್ದಾರೆ. ಒಂದು ವೇಳೆ ಕೊರಿಯೊಗ್ರಫಿಗೆ ಪ್ರಶಸ್ತಿ ಎನ್ನುವುದು ಇದ್ದಿದ್ದರೆ ಖಂಡಿತ ನಾಟು ನಾಟು ಹಾಡಿಗೆ ನೃತ್ಯ ನಿರ್ದೇಶನ ಮಾಡಿದ ನೃತ್ಯ ನಿರ್ದೇಶಕನಿಗೆ ಆ ಪ್ರಶಸ್ತಿ ಬರುತ್ತಿತ್ತು.‌ ಯಾರು ಆ ತರ ಡ್ಯಾನ್ಸ್ ಮಾಡೋಕೆ ಸಾಧ್ಯ? ಆ ಡ್ಯಾನ್ಸ್ ಅಲ್ಲ, ಅದೊಂದು ಸ್ಪೆಷಲ್ ಎಫೆಕ್ಟ್ ನ ಹಾಗೆ ಮೂಡಿ ಬಂದಿದೆ, ಜೂನಿಯರ್ ಎನ್ ಟಿ ಆರ್(Jr. NTR), ರಾಮ್ ಚರಣ್(Ram Charan) ಬಹಳ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದಿದ್ದಾರೆ ಫರಾ.

ಇದೇ ವೇಳೆ ಫರಾ ಆ ಡ್ಯಾನ್ಸ್ ಅನ್ನು ಕೊರಿಯೋಗ್ರಫಿ ಮಾಡಿ ನೃತ್ಯ ನಿರ್ದೇಶಕನಿಗೂ ತಮ್ಮ ಅಪಾರವಾದ ಮೆಚ್ಚುಗೆಯನ್ನು ನೀಡಿದ್ದಾರೆ. ತ್ರಿಬಲ್ ಆರ್ ಆಸ್ಕರ್ ಗೆ ನಾಮಿನೇಟ್(RRR Oscar Nomination) ಆಗುವ ಎಲ್ಲಾ ಚಾನ್ಸ್ ಇದೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿರುವ ಫರಾ ಖಾನ್, ಈ ಹಿಂದೆ ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ ಸಿನಿಮಾವನ್ನು ಸಹಾ ಅಕಾಡೆಮಿ ಪ್ರಶಸ್ತಿ ಗೆ ನಾಮಿನೇಟ್ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಆದರೂ ನಮ್ಮ ಸಿನಿಮಾಗಳಿಗೆ ಪಾಶ್ಚಾತ್ಯ ಮೌಲ್ಯೀಕರಣ ಬೇಕಿಲ್ಲ. ನಮ್ಮ ಸಿನಿಮಾಗಳನ್ನು ಪ್ರೀತಿಸುವ ನಮ್ಮದೇ ದೇಶದವರು ಸಾಕಷ್ಟಿದ್ದಾರೆ ಎಂದು ಹೇಳಿದ್ದಾರೆ ಫರಾ ಖಾನ್.

- Advertisment -