HomeEntertainmentಬಿಗ್ ಬಾಸ್ ಮನೆಯಲ್ಲಿ ಸಹೋದರನ ಕಂಡು ಬಿಕ್ಕಿ ಬಿಕ್ಕಿ ಅತ್ತ ಜನಪ್ರಿಯ ನಿರ್ದೇಶಕಿ! ಭಾವುಕರಾದ ಫ್ಯಾನ್ಸ್

ಬಿಗ್ ಬಾಸ್ ಮನೆಯಲ್ಲಿ ಸಹೋದರನ ಕಂಡು ಬಿಕ್ಕಿ ಬಿಕ್ಕಿ ಅತ್ತ ಜನಪ್ರಿಯ ನಿರ್ದೇಶಕಿ! ಭಾವುಕರಾದ ಫ್ಯಾನ್ಸ್

BIg Boss Hindi 16 : ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 16 (Big Boss Hindi) ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಬಹಳಷ್ಟು ಏರಿಳಿತಗಳು ಕಂಡುಬರುತ್ತವೆ. ಬಿಗ್ ಬಾಸ್ ಸೀಸನ್ 16 ಕಂಡ ಭರ್ಜರಿ ಜನಪ್ರಿಯತೆಯ ಹಿನ್ನೆಲೆಯಲ್ಲಿ, ಸೀಸನ್ ಅವಧಿಯನ್ನು ಕೂಡಾ ವಿಸ್ತರಿಸಲಾಗಿದೆ. ಬಿಗ್ ಬಾಸ್ 16 ರಲ್ಲಿ ಬಹಳಷ್ಟು ಜನ ಸಿನಿಮಾ ತಾರೆಯರು ಮತ್ತು ಸ್ಪರ್ಧಿಗಳ ಕುಟುಂಬದ ಸದಸ್ಯರು ಅತಿಥಿಗಳಾಗಿ ಆಗಾಗ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಶೋನಲ್ಲಿ ಒಂದಷ್ಟು ಹೊಸ ಹೊಸ ಟ್ವಿಸ್ಟ್ ಗಳು ಕಂಡುಬರುತ್ತಿದೆ.

ಈಗ ಇವೆಲ್ಲವುಗಳ ನಡುವೆ ಭಾನುವಾರ ನಡೆದ ವಾರಾಂತ್ಯದ ಎಪಿಸೋಡ್ ನಲ್ಲಿ(weekend big boss) ಮನೆಯ ಸ್ಪರ್ಧಿಯಾಗಿರುವ ಬಾಲಿವುಡ್ ನ ಜನಪ್ರಿಯ ನಿರ್ಮಾಪಕ ಮತ್ತು ನಿರ್ದೇಶಕ ಸಾಜಿದ್ ಖಾನ್(Sajid Khan) ಅವರ ಸಹೋದರಿ ಜನಪ್ರಿಯ ನಿರ್ದೇಶಕಿ ಫರಾ ಖಾನ್(Farah Khan) ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದರು. ಸಲ್ಮಾನ್ ಖಾನ್ (Salman Khan) ನಿರೂಪಣೆಯ ಈ ಜನಪ್ರಿಯ ಶೋನಲ್ಲಿ ಪರ ತಮ್ಮ ಸಹೋದರ ಸಾಜಿದ್ ಖಾನ್ ಅವರನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಫರಾ (Farah) ವೀಕೆಂಡ್ ಎಪಿಸೋಡ್ ನಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ನಿರೂಪಕ ಸಲ್ಮಾನ್ ಖಾನ್ ಅವರ ಜೊತೆಗೆ ಒಂದಷ್ಟು ಸಮಯವನ್ನು ಮೋಜು ಮಸ್ತಿಯೊಂದಿಗೆ ಕಳೆದರು. ಇದಾದ ನಂತರ ಫರಾ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ನೀಡಿದರು. ಈ ವೇಳೆ ಬಿಗ್ ಬಾಸ್, ಮನೆಯ ಸದಸ್ಯರಿಗೆ ಕದಲದೇ ಇರುವಂತೆ ಆದೇಶವನ್ನು ನೀಡಿದರು. ಇದರಿಂದಾಗಿ ಫರಾ ಮನೆಯೊಳಗೆ ಪ್ರವೇಶ ಮಾಡಿದಾಗ ಅವರ ಸಹೋದರ ಸಾಜಿದ್ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ.

ಸಾಜಿದ್ ಖಾನ್(Sajid Khan) ಕಡೆ ನೋಡಿದ ಫರಾ “ಅಮ್ಮ ನಿನ್ನನ್ನು ನೋಡಿ ಗರ್ವ ಪಡುತ್ತಿದ್ದಾಳೆ” ಎಂದು ಹೇಳಿದ ನಂತರ ಫರಾ ಖಾನ್ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಂತರ ಮನೆಯ ಅನ್ಯ ಸದಸ್ಯರನ್ನು ಭೇಟಿ ಮಾಡಿದ ಫರಾ, ಅಬ್ದು ರೋಜಿಕ್, ಶಿವ್ ಠಾಕ್ರೆ ಮತ್ತು ಎಂಸಿ ಸ್ಟ್ಯಾನ್ ಮೂವರನ್ನು ಕೂಡಾ ನನ್ನ ಸಹೋದರರು ಎಂದು ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 16(Big Boss Hindi) ರ ಪ್ರೋಮೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಗ್ ಬಾಸ್ ಪ್ರೇಕ್ಷಕರು ಮತ್ತು ಬರಹ ಕಾಲ ಅಭಿಮಾನಿಗಳು ವೀಡಿಯೋ ನೋಡಿ ಮೆಚ್ಚುಗೆಯನ್ನು ನೀಡಿದ್ದಾರೆ.

- Advertisment -