ಪ್ಲಾಸ್ಟಿಕ್ ಮೊಸಳೆಯೆಂದು ತಿಳಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದವನಿಗೆ ಆಘಾತ ಕಾದಿತ್ತು: ಭಯಾನಕ ವೀಡಿಯೋ ವೈರಲ್
ನವೆಂಬರ್ 10 ರಂದು ಫಿಲಿಪೈನ್ಸ್ ನಲ್ಲಿ ನಡೆದಂತಹ ಒಂದು ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದಿ ಮಿರರ್ ಮಾಡಿರುವ ವರದಿಯ ಪ್ರಕಾರ ಅಲ್ಲಿನ ಅಮಾಯಾ ವ್ಯೂ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಪಾರ್ಕ್ ನ ವೀಕ್ಷಣೆ ಮಾಡಲು, ಎಂಜಾಯ್ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬರು ಮಾಡಿಕೊಂಡ ಎಡವಟ್ಟಿನಿಂದಾಗಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುವಂತಾಗಿದೆ. ಹಾಗಾದರೆ ಏನೀ ಘಟನೆ ನೋಡೋಣ ಬನ್ನಿ.
ಅಮ್ಯೂಸ್ಮೆಂಟ್ ಪಾರ್ಕಿನಲ್ಲಿ ಈ ವ್ಯಕ್ತಿ ಸುತ್ತಾಡುವಾಗ ಒಂದು ಸಣ್ಣ ಕೊಳದ ಬಳಿ ಚಲನೆಯಿಲ್ಲದೆ ಇದ್ದ ಮೊಸಳೆಯನ್ನು ನೋಡಿ, ಅದು ನಿಜವಾದ ಮೊಸಳೆಯಲ್ಲ ಬದಲಿಗೆ ಅದೊಂದು ಪ್ಲಾಸ್ಟಿಕ್ ಮೊಸಳೆ ಎಂದು ಭಾವಿಸಿ, ಅದರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಆತ ಅಲ್ಲೇ ಮಾಡಿಕೊಂಡಿದ್ದು ಎಡವಟ್ಟು. ಏಕೆಂದರೆ ಆತ ಪ್ಲಾಸ್ಟಿಕ್ ಎಂದುಕೊಂಡಿದ್ದ ಮೊಸಳೆ ಅಸಲಿ ಮೊಸಳೆಯೇ ಆಗಿತ್ತು, ಹತ್ತಿರ ಹೋದವರಿಗೆ ಅ ಪಾ ಯ ಕಾದಿತ್ತು.
ಮೊಸಳೆ ಬಳಿ ಹೋಗಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮೊದಲಾದ ಕೂಡಲೇ ಮೊಸಳೆ ಆತನ ಎಡಗೈಯನ್ನು ಕಚ್ಚಿ ಹಿಡಿದಿದೆ. ಮೊಸಳೆ ಆತನನ್ನು ಕಚ್ಚಿ ಹಿಡಿದಾಗ ಆತನ ಆಪ್ತರು ಅರಚುತ್ತಿರುವುದು ವೀಡಿಯೋದಲ್ಲಿ ಕೇಳಿಸಿದೆ. ಆದರೆ ಅದೃಷ್ಟವಶಾತ್ ಆತನು ಪ್ರಾಣಾಪಾಯ ಆಗುವ ಮೊದಲೇ ಮೊಸಳೆಯ ಹಿಡಿತದಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಹೀಗೆ ಮೊಸಳೆಯಿಂದ ತಪ್ಪಿಸಿಕೊಂಡು ಬಂದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆತನ ತೋಳಿಗೆ ಗಂಭೀರವಾದ ಗಾಯವಾಗಿದೆ ಎನ್ನಲಾಗಿದೆ.
ಇನ್ನು ಆ ವ್ಯಕ್ತಿಯು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಆತನ ಕುಟುಂಬದವರು ಪಾರ್ಕ್ ನಲ್ಲಿ ಅಪಾಯದ ಬಗ್ಗೆ ಸೂಚನಾ ಫಲಕವನ್ನು ಹಾಕಿರಲಿಲ್ಲ. ಪ್ರವೇಶ ನಿಷೇಧದ ಸೂಚನೆಯನ್ನು ಹಾಕಿದ್ದರೆ ಪ್ರವೇಶ ಮಾಡುತ್ತಿರಲಿಲ್ಲ ಎನ್ನುವ ಮಾತನ್ನು ಹೇಳಿದ್ದು, ಪಾರ್ಕ್ ನ ನಿರ್ವಹಣಾ ಮಂಡಳಿಯು ಸೂಚನೆಯನ್ನು ನೀಡಲಾಗಿತ್ತು ಎಂದು ತಿಳಿಸಿದೆ. ಅಲ್ಲದೇ ಆತನ ವೈದ್ಯಕೀಯ ಪರೀಕ್ಷೆಗೆ ಅಗತ್ಯ ಇರುವ ಹಣದ ನೆರವನ್ನು ನೀಡುವುದಾಗಿಯೂ ಹೇಳಿದೆ.