ಪ್ರೇಮ ಪಕ್ಷಿಗಳಂತಿದ್ದ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ನಡುವೆ ಏನಾಯ್ತು?? ಬ್ರೇಕಪ್ ಘೋಷಿಸಿದ ಜೋಡಿ ಹೇಳಿದ್ದೇನು??

Entertainment Featured-Articles Movies News

ಬಾಲಿವುಡ್ ನಟಿ, ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಸಿನಿಮಾಗಳಿಗಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡಿದ್ದು ಬಿಗ್ ಬಾಸ್ ವಿಚಾರವಾಗಿ ಮತ್ತು ಅವರ ಲವ್ ಅಫೇರ್ ನಿಂದಾಗಿ. ನಟಿ ಶಮಿತಾ ಶೆಟ್ಟಿ ವಯಸ್ಸು 40 ಆದರೂ ಇನ್ನೂ ಮದುವೆಯಾಗದೇ ಉಳಿದಿದ್ದಾರೆ. ಅಲ್ಲದೇ ಈ ಹಿಂದೆ ಸಂದರ್ಶನಗಳಲ್ಲಿ ತನಗೆ ಹೊಂದುವ ವ್ಯಕ್ತಿ ತನಗಿನ್ನೂ ಸಿಕ್ಕಿಲ್ಲ ಎಂದು ಹೇಳಿದ್ದರು. ಆದರೆ ಹೀಗೆ ಸಿಂಗಲ್ ಆಗಿದ್ದ ಶಮಿತಾ ಶೆಟ್ಟಿ ಬಾಳಿನಲ್ಲಿ ಹೊಸ ಅಲೆಯೊಂದನ್ನು ಮೂಡಿಸಿದ್ದು ಕಳೆದ ವರ್ಷ ಓಟಿಟಿಯಲ್ಲಿ ಮೊದಲ ಬಾರಿಗೆ ಪ್ರಸಾರ ಕಂಡಂತಹ ಬಿಗ್ ಬಾಸ್ ಶೋ.

ಹೌದು, ಹಿಂದಿಯ ಮೊದಲ ಓಟಿಟಿ ಬಿಗ್ ಬಾಸ್ ಶೋ ನಲ್ಲಿ ಶಮಿತಾ ಸ್ಪರ್ಧಿಯಾಗಿ ಬಿಗ್ ಹೌಸ್ ಪ್ರವೇಶ ಮಾಡಿದ್ದರು. ಆಗಲೇ ಅವರಿಗೆ ಅಲ್ಲಿ ಕಿರುತೆರೆಯ ನಟ ರಾಕೇಶ್ ಬಾಪಟ್ ಜೊತೆ ಪರಿಚಯವಾಯಿತು. ಈ ಪರಿಚಯ ಸ್ನೇಹವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಶಮಿತಾ ಮತ್ತು ರಾಕೇಶ್ ನಡುವಿನ ಒಡನಾಟವನ್ನು ಕಂಡ ಪ್ರೇಕ್ಷಕರು ಆಗಲೇ ಇವರಿಬ್ಬರ ನಡುವೆ ಪ್ರೇಮಾಂಕುರ ಆಗುತ್ತಿದೆ ಎಂದರು. ಓಟಿಟಿ ಬಿಗ್ ಬಾಸ್ ವೇದಿಕೆಯ ಮೂಲಕ ಈ ಜೋಡಿ ಜನರ ಅಪಾರವಾದ ಮೆಚ್ಚುಗೆಯನ್ನು ಪಡೆದರು.

ರಾಕೇಶ್ ಬಾಪಟ್ ಮತ್ತು ಶಮಿತಾ ನಡುವಿನ ಈ ಆತ್ಮೀಯತೆ ಯಾವ ಮಟ್ಟಕ್ಕೆ ಸದ್ದು ಮಾಡಿತ್ತು ಎಂದರೆ ಅನಂತರ ಟಿವಿ ಯಲ್ಲಿ ಪ್ರಸಾರ ಕಂಡ ಬಿಗ್ ಬಾಸ್ ನ ಹೊಸ ಸೀಸನ್ ಗೂ ಸ್ಪರ್ಧಿಯಾಗಿ ಬಂದಿದ್ದ ಶಮಿತಾ ಅವರಿಗಾಗಿಯೇ ರಾಕೇಶ್ ಬಾಪಟ್ ಅವರಿಗೂ ಸಹಾ ಮನೆಯೊಳಕ್ಕೆ ಎಂಟ್ರಿ ನೀಡಲಾಗಿತ್ತು. ಬಿಗ್ ಬಾಸ್ ನಿಂದ ಹೊರ ಬಂದ ನಂತರವೂ ಸಹಾ ಈ ಜೋಡಿಯು ಪ್ರೇಮ ಪಕ್ಷಿಗಳ ಹಾಗೆ ಕೈ ಕೈ ಹಿಡಿದು ಸುತ್ತಾಡಿದರು. ಮಾದ್ಯಮಗಳ ಕ್ಯಾಮರಾ ಕಣ್ಣಿಗೆ ಅಲ್ಲಿ ಇಲ್ಲಿ ಸೆರೆಯಾದರು. ಒಬ್ಬರನ್ನೊಬ್ಬರು ಇಷ್ಟ ಪಡುತ್ತಿರುವುದಾಗಿ ಹೇಳಿಕೊಂಡರು.

ಆದರೆ ಬಾಲಿವುಡ್ ಸೆಲೆಬ್ರಿಟಿಗಳಿಗೆ ಪ್ರೇಮ ಹುಟ್ಟುವ ವೇಗದಲ್ಲೇ ಬ್ರೇಕಪ್ ಸಹಾ ಆಗುತ್ತದೆ ಎನ್ನುವ ಹಾಗೆ, ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ನಡುವೆ ಬ್ರೇಕಪ್ ಆಗಿದೆ. ಶಮಿತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ‘ಇದನ್ನು‌ ಕ್ಲಿಯರ್ ಮಾಡುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ. ರಾಕೇಶ್ ಮತ್ತು ನಾನು ಈಗ ಒಟ್ಟಿಗೆ ಇಲ್ಲ, ಸ್ವಲ್ಪ ಸಮಯದಿಂದಲೂ ನಾವು ಒಟ್ಟಿಗೆ ಇರಲಿಲ್ಲ. ಆದರೆ ಈ ಮ್ಯೂಸಿಕ್ ವೀಡಿಯೊ ನಮಗೆ ತುಂಬಾ ಪ್ರೀತಿಯನ್ನು ನೀಡಿದ ಎಲ್ಲಾ ಸುಂದರ ಅಭಿಮಾನಿಗಳಿಗೆ ಮತ್ತು ಬೆಂಬಲ ನೀಡಿವರಿಗೆ. ನಿಮ್ಮ ಪ್ರೀತಿಯನ್ನು ಹೀಗೆ ನಮ್ಮ ಮೇಲೆ ಧಾರೆಯೆರೆಯುತ್ತಿರಿ. ಅದು ಸಕಾರಾತ್ಮಕತೆ. ನಿಮ್ಮೆಲ್ಲರಿಗೂ ಪ್ರೀತಿ ಮತ್ತು ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.

ರಾಕೇಶ್ ಬಾಪಟ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ,
‘ಈಗ ಶಮಿತಾ ಮತ್ತು ನಾನು ಒಟ್ಟಿಗೆ ಇಲ್ಲ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅದೃಷ್ಟದಿಂದ ಅಸಾಮಾನ್ಯ ಸಂದರ್ಭಗಳಲ್ಲಿ ನಮ್ಮ ಭೇಟಿಯಾಯಿತು. ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಶಾರಾ ಕುಟುಂಬಕ್ಕೆ ತುಂಬಾ ಧನ್ಯವಾದಗಳು. ನಾನು ಖಾಸಗಿ ವ್ಯಕ್ತಿಯಾಗಿದ್ದರಿಂದ, ನಾವು ಬೇರೆಯಾಗಿದ್ದೇವೆ ಎಂದು ಸಾರ್ವಜನಿಕವಾಗಿ ಘೋಷಿಸಲು ನಾನು ಬಯಸಲಿಲ್ಲ, ಆದರೂ ನನ್ನ ಅಭಿಮಾನಿಗಳಿಗೆ ಈ ಬಗ್ಗೆ ತಿಳಿಸಬೇಕು ಎಂದು ನಾನು ಭಾವಿಸಿದೆ. ಈ ಸುದ್ದಿಯ ನಂತರ ನೀವು ಭಾವುಕರಾಗುವಿರಿ ಎಂದು ನನಗೆ ತಿಳಿದಿದೆ.

ಆದರೆ ನಮ್ಮ ಪ್ರತ್ಯೇಕತೆಯ ಹೊರತಾಗಿಯೂ ನೀವು ಪ್ರೀತಿಯನ್ನು ಸುರಿಸುತ್ತಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಈ ಸಂಗೀತ ವೀಡಿಯೋವನ್ನು ನಿಮ್ಮೆಲ್ಲರಿಗೂ ಸಮರ್ಪಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಹೀಗೆ ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ತಾವು ಬೇರೆಯಾಗಿರುವ ವಿಚಾರವನ್ನು ಅಧಿಕೃತವಾಗಿ ಘೋಷಣೆಯನ್ನು ಮಾಡಿದ್ದಾರೆ.

Leave a Reply

Your email address will not be published.